ಮುರಳಿ ವಿಜಯ್ ಗೆ ದಂಡ, ಢಾಕಾಕ್ಕೆ ಬಂದಿಳಿದ ಧೋನಿ
ಢಾಕಾ,ಜೂ.16: ಟೀಂ ಇಂಡಿಯಾದ ಆರಂಭಿಕ ಆಟಗಾರ ಮುರಳಿ ವಿಜಯ್ ಅವರು ಬಾಂಗ್ಲಾದೇಶ ವಿರುದ್ಧದ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಸಂಭ್ರಮದ ಜೊತೆಗೆ ದಂಡದ ಶಿಕ್ಷೆ ಪಡೆದುಕೊಂಡಿದ್ದಾರೆ. ಐಸಿಸಿ ನಿಯಮ ಉಲ್ಲಂಘಿಸಿ ಪ್ರೋತ್ಸಾಹ ಸಂಸ್ಥೆ ಲೋಗೋವನ್ನು ದೊಡ್ಡದಾಗಿ ಬ್ಯಾಟ್ ಮೇಲೆ ಹಾಕಿಕೊಂಡ ತಪ್ಪಿಗೆ ಸಂಭಾವನೆಯಲ್ಲಿ ಕತ್ತರಿ ಬಿದ್ದಿದೆ.
ಈ ನಡುವೆ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ ನಾಯಕ ಎಂಎಸ್ ಧೋನಿ ಹಾಗೂ 7 ಜನ ಸದಸ್ಯರು ಢಾಕಾಕ್ಕೆ ಆಗಮಿಸಿದ್ದಾರೆ. ಧೋನಿ ಜೊತೆಗೆ ಸ್ಟುವರ್ಟ್ ಬಿನ್ನಿ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಸುರೇಶ್ ರೈನಾ, ಮೋಹಿತ್ ಶರ್ಮ, ಧವಳ್ ಕುಲಕರ್ಣಿ ಹಾಗೂ ಅಂಬಟಿ ರಾಯುಡು ಅವರು ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. [ಏಕೈಕ ಟೆಸ್ಟ್ ಪಂದ್ಯದ ಚಿತ್ರಗಳು]
ಜೂ .18 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಮೀರ್ ಪುರ್ ನಲ್ಲಿ ಜೂ. 18, 21 ಹಾಗೂ 24ರಂದು ಪಂದ್ಯ ನಡೆಯಲಿದೆ. ಏಕದಿನ ಸರಣಿಗೂ ಮಳೆ ಕಾಟ ಕೊಡುವ ಸಾಧ್ಯತೆಯಿದೆ.

2014ರಲ್ಲಿ ಸುರೇಶ್ ರೈನಾ ನೇತೃತ್ವದಲ್ಲಿ ಬಾಂಗ್ಲಾ ವಿರುದ್ಧ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಿಂದ ಗೆದ್ದುಕೊಂಡಿತ್ತು. ಕೊನೆ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿತ್ತು.
ವಿಜಯ್ ಕಿರಿಕ್: ವಿಜಯ್ ಅವರ ಸಂಭಾವನೆಯ 25%ರಷ್ಟು ಮೊತ್ತವನ್ನು ದಂಡ ರೂಪವಾಗಿ ಐಸಿಸಿ ಪಡೆದುಕೊಂಡಿದೆ. ಐಸಿಸಿ ನಿಯಮದ ಪ್ರಕಾರ ಸ್ಪಾನ್ಸರ್ಸ್ ಲೋಗೋ ಬ್ಯಾಟ್ ಮೇಲೆ 9 ಇಂಚಿಗಿಂತ ಕಡಿಮೆ ಬಳಸಬೇಕು. [ಟೆಸ್ಟ್: ಮೂರನೇ ದಿನ ವಿಜಯ್ 150]
ವಿಜಯ್ ಅವರಿಗೆ ಸ್ಪಾನ್ಸರ್ ಮಾಡುತ್ತಿರುವ ಎಸ್‌ಎಸ್ ಕಂಪೆನಿಯ ಜೊತೆಗೆ ಎಂವಿಜೆ8 ಎಂಬ ಲೋಗೋಗೆ ಅವರು ಬ್ಯಾಟ್ ಮೇಲಿದೆ. 2010ರಲ್ಲಿ ಆಸ್ಟ್ರೇ ಲಿಯಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮುರಳಿ ತನ್ನ ಬ್ಯಾಟಿಂಗ್ ಪ್ಯಾಡ್ ಮೇಲೆ ಹಲವು ಲೋಗೋಗಳನ್ನು ಹಾಕಿಕೊಂಡು ವಿವಾದಕ್ಕೆ ಕಾರಣರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications