ಮಹಿಳಾ ಕ್ರಿಕೆಟರ್ ಜೊತೆಗೆ ಡಿನ್ನರ್ ಆಸೆ: ಕಾಲೆಳೆಸಿಕೊಂಡ ಮುರಳಿ ವಿಜಯ್

ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ತಮ್ಮ ಮನದಿಂಗತವೊಂದನ್ನು ವ್ಯಕ್ತಪಡಿಸಿದರು. ಮುರಳಿ ವಿಜಯ್ ವ್ಯಕ್ತಪಡಿಸಿದ ಈ ಬಯಕೆ ಈಗ ಟ್ರೋಲಿಗರಿಗೆ ಆಹಾರವಾಗುತ್ತಿದೆ. ಯದ್ವಾತದ್ವಾ ನೆಟ್ಟಿಗರು ಮುರಳಿಯ ಕಾಲೆಳೆಯುತ್ತಿದ್ದಾರೆ.
ಎಲ್ಲಾ ಕ್ರಿಕೆಟಿಗರೂ ಈಗ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಲೈವ್ ಮೂಲಕ ಟ್ವೀಟ್‌ಗಳ ಮೂಲಕ ಆ್ಯಕ್ಟಿವ್ ಆಗಿರುವ ಪ್ರಯತ್ನ ನಡೆಸುತ್ತಿದ್ದಾರೆ ಕ್ರಿಕೆಟರ್ಸ್. ಹಾಗೆಯೇ ವುರುಳಿ ವಿಜಯ್ ಕೂಡ ಲೈವ್ ನಲ್ಲಿ ಕಾಣಿಸಿಕೊಂಡಿದ್ದರು.
ಹಾಗಾದರೆ ಟೀಮ್ ಇಂಡಿಯಾ ಆಟಗಾರ ಮುರಳಿ ವಿಜಯ್ ಕಾಲೆಳೆಸಿಕೊಳ್ಳುವಂತಾ ಹೇಳಿಕೆಯನ್ನೇನು ನೀಡಿದ್ರು ಅಂತ ಮುಂದೆ ಓದಿ..

ಇನ್ಸ್ಟಾಗ್ರಾಮ್‌ನಲ್ಲಿ ಲೈವ್ ಬಂದ ಮುರಳಿ
ಅಷ್ಟಕ್ಕೂ ಆಗಿದ್ದಿಷ್ಟು, ಮುರಳಿ ವಿಜಯ್ ಲಾಕ್‌ಡೌನ್ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ ಲೈವ್‌ಗೆ ಬಂದಿದ್ದರು. ಕ್ರೀಡಾ ನಿರ್ಮಾಪಕಿ ರೂಪಾ ರಮಣಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಈ ಲೈವ್‌ನಲ್ಲಿ ಮುರಳಿ ವಿಜಯ್‌ಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರವನ್ನು ಪಡೆಯುತ್ತಿದ್ದರು. ಜೊತೆಗೆ ಅಭಿಮಾನಿಗಳು ಕೂಡ ಮುರಳಿ ವಿಜಯ್ ಪ್ರಶ್ನೆಗಳನ್ನು ಎಸೆಯುತ್ತಿದ್ದರು.

ಡಿನ್ನರ್ ಮಾಡಲು ಬಯಸುವ ಕ್ರಿಕೆಟಿಗರು?
ಈ ಸಂದರ್ಭದಲ್ಲಿ ಮುರಳಿ ವಿಜಯ್‌ಗೆ ಒಂದು ಪ್ರಶ್ನೆ ಎದುರಾಯಿತು. ನೀವು ಡಿನ್ನರ್ ಮಾಡಲು ಬಯಸುವ ಇಬ್ಬರು ಕ್ರಿಕೆಟಿಗರು ಯಾರು ಎಂದು ರಮಣಿ ಕೇಳಿದರು. ಇದಕ್ಕೆ ಮುರಳಿ ವಿಜಯ್ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ ಎಲ್ಯಾಸ್ ಪೆರ್ರಿ ಮತ್ತು ಟೀಮ್ ಇಂಡಿಯಾ ಆಟಗಾರ ಶಿಖರ್ ಧವನ್ ಎಂದು ಉತ್ತರವನ್ನು ನೀಡಿದರು.

ಆಕೆ ಅಪ್ರತಿಮ ಸುಂದರಿ ಎಂದ ಮುರಳಿ
ಇಲ್ಯಾಸ್ ಪೆರ್ರಿ ಹೆಸರು ಹೇಳಿದ್ದಕ್ಕೆ ಮುರಳಿ ವಿಜಯ್ ಕಾರಣವನ್ನೂ ಕೊಟ್ಟಿದ್ದಾರೆ. ಆಕೆಯೋರ್ವ ಅಪ್ರತಿಮ ಸುಂದರಿ. ಆಕೆಯ ಜೊತೆಗೆ ಡಿನ್ನರ್ ಮಾಡಬೇಕು ಎಂಬ ಆಸೆ ಎಂದು ಮುರಳಿ ವಿಜಯ್ ಈ ಲೈವ್ ನಲ್ಲಿ ಹೇಳಿದ್ದಾರೆ.

ಮಾಡಿರುವ ಅವಾಂತರವೇ ಸಾಕು ಎನ್ನುತ್ತಿರುವ ಅಭಿಮಾನಿಗಳು!!
ಮುರಳಿ ವಿಜಯ್ ನೀಡಿದ ಉತ್ತರಕ್ಕೆ ಅಭಿಮಾನಿಗಳು ಭರ್ಜರಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ನೀನೊಬ್ಬ ನಿಜಕ್ಕೂ ಪ್ಲೇ ಬಾಯ್ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ನೀನು ಈಗ ಮಾಡಿದ ಅವಾಂತರಗಳೇ ಸಾಕಪ್ಪಾ ಎಂದು ಕಾಲೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications