ಮಗನ ಮೇಲಿನ ನಿಷೇಧ ಮರುಪರಿಶೀಲನೆಗೆ ಮುಷೀರ್ ಖಾನ್ ತಂದೆ ಕೋರಿಕೆ

ಮುಂಬೈ, ಜನವರಿ 31: ಮುಂಬೈ ಕ್ರಿಕೆಟ್ ಅಸೋಸಿಯೇಷನ್(ಎಂಸಿಎ) ನಿಂದ 3 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಕಿರಿಯ ಕ್ರಿಕೆಟ್ ಆಟಗಾರ ಮುಷೀರ್ ಖಾನ್ ಮೇಲಿನ ನಿಷೇಧವನ್ನು ಮರುಪರಿಶೀಲಿಸುವಂತೆ ಮುಷೀರ್ ತಂದೆ ನೌಶದ್ ಖಾನ್ ಕೋರಿಕೊಂಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಅಂಡರ್ 16 ಆಟಗಾರರಿಗಾಗಿ ನಡೆದ ವಿಜಯ್ ಮರ್ಚೆಂಟ್ ಟೂರ್ನಿಯ ಸಂದರ್ಭ ಮುಷೀರ್, ಸಹ ಆಟಗಾರನೊಂದಿಗೆ ಅಶ್ಲೀಲ ವರ್ತನೆ ತೋರಿಸಿದ್ದರು. ಇದಕ್ಕಾಗಿ ಮುಷೀರ್ ಮೇಲೆ ಎಂಸಿಎ 3 ವರ್ಷಗಳ ನಿಷೇಧ ಹೇರಿತ್ತು.
ಎಂಸಿಎಯನ್ನು ವಿನಂತಿಸಿಕೊಂಡಿರುವ ನೌಶಾದ್, ಮಗನ ಮೇಲಿನ ಶಿಕ್ಷೆ ಪ್ರಮಾಣ ಕಡಿತ ಗೊಳಿಸುವಂತೆ, ಕೆಲ ಪಂದ್ಯಗಳಿಂದ ಅಮಾನತುಗೊಳಿಸುವಂತೆ ಕೋರಿಕೊಂಡಿದ್ದಾರೆ ಎನ್ನಲಾಗಿದೆ. ಈಗಿನ್ನೂ 14ರ ಹರೆಯದವರಾಗಿರುವ ಮುಷೀರ್, ಎಡಗೈ ಸ್ಪಿನ್ ಎಸೆಯಬಲ್ಲ ಆಲ್ ರೌಂಡರ್ ಆಟಗಾರ. ಇತ್ತೀಚಿನ ಪಂದ್ಯವೊಂದರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು ಕೂಡ.
Story first published: Thursday, January 31, 2019, 16:41 [IST]
Other articles published on Jan 31, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications