ಭಾರತದ ಯುವ ಆಟಗಾರ ಮುಶೀರ್ ಖಾನ್ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಭಾರತ ಎ ಹಾಗೂ ಭಾರತ ಬಿ ನಡುವಣ ಪಂದ್ಯದಲ್ಲಿ ಮುಶೀರ್ ಎಲ್ಲರ ಚಿತ್ತ ಕದ್ದಿದ್ದಾರೆ. ಈ ಮೂಲಕ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ತಮ್ಮನ್ನು ಸಹ ಪರಿಗಣಿಸಿ ಎಂದು ಸಾರಿ ಹೇಳಿದ್ದಾರೆ.
ಈಗಾಗಲೇ ಇವರ ಸಹೋದರ್ ಸರ್ಫರಾಜ್ ಖಾನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶವನ್ನು ಪಡೆದು ಅಬ್ಬರಿಸಿದ್ದರು. ಈಗ ಅವರ ತಮ್ಮ ಮುಶೀರ್ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಇವರು ಸಹ ಅಣ್ಣನಂತೆ ಭಾರತದ ಪದ ಆಡುವುದನ್ನು ಶೀಘ್ರವಾಗಿ ಕಾಣಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಯಂಗ್ ಟ್ಯಾಲೆಂಟೆಡ್ ಬ್ಯಾಟ್ಸ್‌ಮನ್‌ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಐಪಿಎಲ್ ಫ್ರಾಂಚೈಸಿ ಸಹ ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ಬಾರಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಮುಶೀರ್ ಖಾನ್ ಹಲವು ಐಪಿಎಲ್ ಫ್ರಾಂಚೈಸಿಗಳ ಚಿತ್ತ ಕದ್ದ ಪ್ಲೇಯರ್. ಇವರು ಅಂಡರ್ 19 ಭಾರತ ತಂಡದ ಪರ ಸಹ ಆಡಿದ ಅನುಭವ ಹೊಂದಿದ್ದಾರೆ. ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹಲವು ತಂಡಗಳು ಮುಂದಾಗುವ ಸಾಧ್ಯತೆ ಇದೆ. ಆ ತಂಡಗಳ ಪಟ್ಟಿ ಇಲ್ಲಿದೆ.
ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್ ಯುವ ಆಟಗಾರನ ಹೆಸರು ಬಿಡ್ಡಿಂಗ್ ಅಂಗಳಕ್ಕೆ ಬಂದಾಗ ಅಲರ್ಟ್ ಆಗುವ ಸಾಧ್ಯತೆ ಇದೆ. ಮುಶೀರ್ ಖಾನ್ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಾರೆ. ಐಪಿಎಲ್ ಹರಾಜಿನಲ್ಲಿ ಮುಶೀರ್ ಖಾನ್ ಅವರನ್ನು ಕೊಳ್ಳಲು ಮಾಲೀಕರು ಹಣದ ಹೊಳೆಯನ್ನು ಹರಿಸುವ ಸಾಧ್ಯತೆ ಇದೆ. ಮುಂಬರುವ ಹರಾಜಿನಲ್ಲಿ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಮಹೇಂದ್ರ ಸಿಂಗ್ ಧೋನಿಯ ಬದಲಿಗೆ ಬೇರೆ ಆಟಗಾರನ ಹುಡುಕಾಟ ನಡೆಸಿದೆ. ಈ ಪಟ್ಟಿಯಲ್ಲಿ ಚೆನ್ನೈ ತಂಡಕ್ಕೂ ಮೊದಲು ಕಾಣಿಸಿಕೊಳ್ಳುವ ಆಟಗಾರನೇ ಮುಶೀರ್ ಖಾನ್. ಇವರು ಸಿಎಸ್‌ಕೆ ತಂಡವನ್ನು ಸೇರಿದ್ದೇ ಆದಲ್ಲಿ, ಇವರ ಟೆಕ್ನಿಕ್ ಇನ್ನು ಸ್ಟ್ರಾಂಗ್ ಆಗುತ್ತದೆ. ಇವರಿಗೆ ಚೆನ್ನೈ ಬಾಜಿ ಕಟ್ಟವ ಸಾಧ್ಯತೆ ಇದೆ.
ಪಂಜಾಬ್ ಕಿಂಗ್ಸ್ ಈ ಬಾರಿಯ ಹರಾಜಿನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ನನ್ನು ಎದುರು ನೋಡುತ್ತಿದೆ. ಈ ಸಮಯದಲ್ಲಿ ಪಂಜಾಬ್ ಯುವ ಆಟಗಾರ ಮುಶೀರ್ ಖಾನ್ ಮೇಲೆ ಕಣ್ಣು ನೆಟ್ಟಿದೆ. ಇವರನ್ನು ತಂಡಕ್ಕೆ ಸೇರಿಸಿಕೊಂಡು ಲಾಭ ಪಡೆಯಲು ಪಂಜಾಬ್ ರಣ ತಂತ್ರವನ್ನು ಹೆಣೆದುಕೊಂಡಿದೆ.
ದುಲೀಪ್ ಟ್ರೋಫಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿರುವ ಮುಶೀರ್ ಖಾನ್, ಟಿ20 ಕ್ರಿಕೆಟ್‌ನಲ್ಲಿ ಹೇಗೆ ಆಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಈಗಾಗಲೇ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿರುವ ಮುಶೀರ್, ದೊಡ್ಡ ಟೂರ್ನಿಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಕಾದು ನೋಡಬೇಕಿದೆ.