For Quick Alerts
ALLOW NOTIFICATIONS  
For Daily Alerts
 

IND vs BAN: ಚೆನ್ನೈ ಟೆಸ್ಟ್‌ನಲ್ಲಿ ಅದ್ಭುತ ದಾಖಲೆ ಬರೆದ ಮುಶ್ಫಿಕರ್ ರಹೀಮ್

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಅದ್ಭುತ ಜಯ ಸಾಧಿಸಿದೆ. ಪಂದ್ಯದ ನಾಲ್ಕನೇ ದಿನ ಭಾರತ 280 ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದೆ.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 376 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 149 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶಕ್ಕೆ 515 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕೇವಲ 234 ರನ್ ಗಳಿಸಲಷ್ಟೇ ಶಕ್ತವಾಯಿತು.

Mushfiqur Rahim created an amazing record

ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಮುಶ್ಫಿಕರ್ ರಹೀಮ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮುಶ್ಫಿಕರ್ ರಹೀಮ್ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ತಮ್ಮ ಸಹಾ ಆಟಗಾರ ತಮೀಮ್ ಇಕ್ಬಾಲ್ ಅವರನ್ನು ಹಿಂದಿಕ್ಕಿ ಮುಶ್ಫಿಕರ್ ರಹೀಮ್ ಈ ಶ್ರೇಷ್ಠ ದಾಖಲೆ ಮಾಡಿದ್ದಾರೆ.

ಚೆನ್ನೈ ಟೆಸ್ಟ್‌ನ ಮೂರನೇ ದಿನ ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್‌ನಲ್ಲಿ ಮುಶ್ಫಿಕರ್ ರಹೀಮ್ 13 ರನ್ ಗಳಿಸಿ ಔಟಾದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಪರ ಅತಿ ಹೆಚ್ಚು 15205 ರನ್ ಗಳಿಸಿದ ದಾಖಲೆಯನ್ನು ಮುಷ್ಫಿಕರ್ ರಹೀಮ್ ಬರೆದರು. ಇದುವರಗೆ ಅವರು 20 ಶತಕ ಮತ್ತು 82 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಬಾಂಗ್ಲಾದೇಶ ಪರ ತಮೀಮ್ ಇಕ್ಬಾಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನ 387 ಪಂದ್ಯಗಳಲ್ಲಿ 15192 ರನ್ ಗಳಿಸಿದ್ದು, 25 ಶತಕ ಮತ್ತು 94 ಅರ್ಧ ಶತಕಗಳನ್ನು ಹೊಂದಿದ್ದಾರೆ. ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ 446 ಪಂದ್ಯಗಳಲ್ಲಿ 14 ಶತಕ ಮತ್ತು 100 ಅರ್ಧ ಶತಕಗಳೊಂದಿಗೆ 14701 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದೇಶ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್

ಮುಶ್ಫಿಕರ್ ರಹೀಮ್ - 464* ಪಂದ್ಯಗಳಲ್ಲಿ 15205 ರನ್
ತಮೀಮ್ ಇಕ್ಬಾಲ್ - 387 ಪಂದ್ಯಗಳಲ್ಲಿ 15192 ರನ್
ಶಕೀಬ್ ಅಲ್ ಹಸನ್ - 446* ಪಂದ್ಯಗಳಲ್ಲಿ 14701 ರನ್
ಮಹಮ್ಮದುಲ್ಲಾ ರಿಯಾದ್ - 420 ಪಂದ್ಯಗಳಲ್ಲಿ 10694 ರನ್
ಲಿಟನ್ ದಾಸ್ - 224* ಪಂದ್ಯಗಳಲ್ಲಿ 7183 ರನ್

Story first published: Sunday, September 22, 2024, 13:32 [IST]
Other articles published on Sep 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+