ವಿಡಿಯೋ : ಆಟೋರಿಕ್ಷಾ ಓಡಿಸಿದ ಆಸ್ಟ್ರೇಲಿಯಾದ ದಿಗ್ಗಜ
ಬೆಂಗಳೂರು, ಮಾರ್ಚ್ 02: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ, ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರು ಬೆಂಗಳೂರಿನಲ್ಲಿ ಬಿಂದಾಸ್ ಆಗಿ ಸಂತಸ ಅನುಭವಿಸುತ್ತಿದ್ದಾರಂತೆ. ಟೀಂ ಇಂಡಿಯಾ ನಾಯಕ ಕೊಹ್ಲಿಯನ್ನು ಭೇಟಿ ಮಾಡಿ ಮಾತನಾಡಿದ ಕ್ಲಾರ್ಕ್ ಅವರು ನಗರದ ರಸ್ತೆಯೊಂದರಲ್ಲಿ ಆಟೋರಿಕ್ಷಾ ಓಡಿಸಿದ್ದಾರೆ.
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯ(ಮಾರ್ಚ್ 04ರಿಂದ ಶುರು) ಕ್ಕಾಗಿ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಕಸರತ್ತು ನಡೆಸಿವೆ.
ಈ ಸಂದರ್ಭದಲ್ಲಿ ಮೈದಾನಕ್ಕೆ ಬಂದ ಮಾಜಿ ಕ್ರಿಕೆಟರ್ ಹಾಗೂ ಹಾಲಿ ಕಾಮೆಂಟೆಟರ್ ಮೈಕಲ್ ಕ್ಲಾರ್ಕ್ ಅವರು ಕೊಹ್ಲಿ ಜತೆ ಮಾತುಕತೆ ನಡೆಸಿ, ಫೋಟೋ ತೆಗೆಸಿಕೊಂಡರು.

ನಂತರ ರಸ್ತೆಯಲ್ಲಿ ನಿಂತಿದ್ದ ಆಟೋರಿಕ್ಷಾ ಕಂಡು, ಟುಕ್ ಟುಕ್ ಸವಾರಿ ಮಾಡುವೆ ಎಂದು ಚಾಲಕನ ಬಳಿ ವಾಹನ ಚಲಾಯಿಸುವುದರ ಬಗ್ಗೆ ತಿಳಿದುಕೊಂಡು ಆಟೋರೈಡ್ ಮಾಡಿ ಖುಷಿ ಪಟ್ಟರು.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದು, ಟುಕ್ ಟುಕ್ (ಆಟೋರಿಕ್ಷಾ) ಓಡಿಸುವುದನ್ನು ಕಲಿತೆ. ಬೆಂಗಳೂರಿಗೆ ಬರಲು ಖುಷಿಯಾಗುತ್ತದೆ. ಇಲ್ಲಿಂದಲೇ ಎಲ್ಲವೂ ಶುರುವಾಗಿತ್ತು ಎಂದಿದ್ದಾರೆ. ಆಟೋರಿಕ್ಷಾ ಓಡಿಸಿದ ವಿಡಿಯೋ ಕೂಡಾ ಹಾಕಿದ್ದಾರೆ.

Mastered the art of driving the tuk tuk 😜Nice to be back in Bengaluru where it all started 🏏

A post shared by Michael Clarke (@michaelclarkeofficial) on <time style=" font-family:Arial,sans-serif; font-size:14px; line-height:17px;" datetime="2017-03-01T11:10:18+00:00">Mar 1, 2017 at 3:10am PST</time>

2004ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಮೈಕಲ್ ಕ್ಲಾಕ್ ಅವರು ಬೆಂಗಳೂರಿನಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ 151ರನ್ ಚೆಚ್ಚಿದ್ದರು. ಈ ಪಂದ್ಯವನ್ನು ಆಸ್ಟ್ರೇಲಿಯಾ ತಂಡ 217ರನ್ ಗಳಿಂದ ಗೆದ್ದುಕೊಂಡಿತ್ತು.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Clarke drives auto rickshaw in Bengaluru
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+

Click it and Unblock the Notifications