ವಿಡಿಯೋ: ಸೂಪರ್ ಮ್ಯಾನ್ ನಂತೆ ಹಾರಿ ಕ್ಯಾಚ್ ಹಿಡಿದ ಸಹಾ!
ಪುಣೆ, ಫೆಬ್ರವರಿ 23: ಆಸ್ಟ್ರೇಲಿಯಾ ವಿರುದ್ಧ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಅತಿಥೇಯ ಭಾರತ ಮೇಲುಗೈ ಸಾಧಿಸಿದೆ. ಮೊದಲ ದಿನವೇ 9 ವಿಕೆಟ್ ಕಳೆದುಕೊಂಡಿದೆ. ಈ ನಡುವೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಅದ್ಭುತ ಕ್ಯಾಚ್ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸಹಾ ನೆಗೆದು ಕ್ಯಾಚ್ ಹಿಡಿದಿದ್ದು ನೋಡಿ ಸಹ ಆಟಗಾರರು, ಕಾಮೆಂಟೆಟರ್ಸ್, ಪ್ರೇಕ್ಷಕರು ಬೆಕ್ಕಸ ಬೆರಗಾದರು.

ಪಂದ್ಯದ 82ನೇ ಓವರ್ ನಲ್ಲಿ ಉಮೇಶ್ ಯಾದವ್ ಅವರ ಔಟ್ ಸ್ವಿಂಗರ್ ಎಸೆತವೊಂದನ್ನು ಕೆಣಕಲು ಹೋದಾಗ ನಂ 9 ಬ್ಯಾಟ್ಸ್ ಮನ್ ಸ್ಟೀವ್ ಓ ಕೀಫೆ ಅವರು ನೀಡಿದ ಕ್ಯಾಚನ್ನು ಸಹಾ ನೆಗೆದು ಹಿಡಿದರು.
ಪಕ್ಕದಲ್ಲಿ ಮೊದಲ ಸ್ಲಿಪ್ ನಲ್ಲಿದ್ದ ನಾಯಕ ಕೊಹ್ಲಿ ಒಂದು ಕ್ಷಣ ನಂಬಲಿಕ್ಕೆ ಆಗಲಿಲ್ಲ. ನಂತರ ಸಹಾರನ್ನು ತಬ್ಬಿ ಅಭಿನಂದಿಸಿದರು. ದಿನದ ಅಂತ್ಯಕ್ಕೆಆಸ್ಟ್ರೇಲಿಯಾ ತಂಡ 94 ಓವರ್ ಗಳಲ್ಲಿ 256/9 ಸ್ಕೋರ್ ಮಾಡಿದೆ. ಉಮೇಶ್ ಯಾದವ್ 4/32 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು. ಸಹಾ ಹಿಡಿದ ಕ್ಯಾಚಿನ ಪೂರ್ತಿ -ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ (ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications