Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಸುಳೆ ಮುಂದೆ ಮಂಡಿಯೂರಿದ ಜಗದೇಕ ವೇಗಿ

ಬೆಂಗಳೂರು, ಅ.07: ವಿಶ್ವದ ನಂ.1 ವೇಗಿ, ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ ಅವರನ್ನು ಫಿಟ್ನೆಸ್ ಟೆಸ್ಟ್ ನಲ್ಲಿ ಒಂದೂವರೆ ವರ್ಷದ ಹಸುಳೆ ಸೋಲಿಸಿರುವ ವಿಡಿಯೋ ಇಲ್ಲಿದೆ. ಸುಮಾರು 4.47 ನಿಮಿಷದ ವಿಡಿಯೋ ನಿಮ್ಮ ಮನಸ್ಸಿಗೆ ಮುದ ನೀಡದೆ ಇರದು.

'ನ್ಯೂ ಬ್ಯಾಲೆನ್ಸ್ ಸೌತ್ ಆಫ್ರಿಕಾ' ಹೆಸರಿನಲ್ಲಿ ಕ್ರೀಡಾ ಉತ್ಪನ್ನ ಸಂಸ್ಥೆ ಪ್ರಕಟಿಸಿರುವ ವಿಡಿಯೋದಲ್ಲಿ 3 ತಿಂಗಳ ನಡಿಗೆ ಅಭ್ಯಾಸ ಅನುಭವವಿರುವ ಕೂಸಿನ ಜೊತೆ ಒಂದು ದಿನ ಕಳೆಯುವ ಚಾಲೆಂಜ್ ಅನ್ನು ಸ್ಟೈನ್ ತೆಗೆದುಕೊಳ್ಳುತ್ತಾರೆ. ಮುಂದೇನಾಯಿತು ಎಂಬುದನ್ನು ನೋಡಿ ಆನಂದಿಸಬೇಕು.

World's No. 1 fast bowler Dale Steyn loses to a baby

32ವರ್ಷ ವಯಸ್ಸಿನ ಡೇಲ್ ಸ್ಟೈನ್ ಅವರು ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ತಂಡವನ್ನು ಸೇರಿಕೊಂಡಿಲ್ಲ. ಅಕ್ಟೋಬರ್ ತಿಂಗಳ ಕೊನೆಗೆ ತಂಡವನ್ನು ಸೇರಲಿದ್ದು, 5 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 600ಕ್ಕೂ ಅಧಿಕ ವಿಕೆಟ್ ಪಡೆದುಕೊಂಡಿದ್ದರೂ ಮಗುವನ್ನು ಸಂಭಾಳಿಸಲು ಸಾಧ್ಯವಾಗಲಿಲ್ಲ.

ಬೆಳಗ್ಗಿನ ಉಪಹಾರ ಸೇವಿಸುವ ಸಮಯದಿಂದ ಆರಂಭವಾದ ಚಾಲೆಂಜ್ ದಿನಪೂರ್ತಿ ನಡೆದಿದೆ. ಬೆಳಗ್ಗೆ 6.01 ಇಂದ ರಾತ್ರಿ 7.12 ರ ತನಕ ನಡೆದ ಜಟಾಪಟಿಯಲ್ಲಿ ಕೊನೆಗೆ ಸೋಲೊಪ್ಪಿಕೊಂಡಿದ್ದಾರೆ.

150 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆತವನ್ನು ಸುಲಭವಾಗಿ ಎಸೆಯಬಲ್ಲೆ ಆದರೆ, ಈ ಕಿಡ್ ಜೊತೆ ಆಟವಾಡಲು ಸಾಧ್ಯವಿಲ್ಲ ಎಂದು ಡೇಲ್ ಪ್ರತಿಕ್ರಿಯಿಸಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+