ಮುಸ್ತುಫಿಜುರ್ ರೆಹಮಾನ್ ಬುಟ್ಟಿಗೆ ಮತ್ತೊಂದು ವಿಶ್ವದಾಖಲೆ
ಮೀರ್ ಪುರ್ , ಜೂ. 25 : ವಿಶ್ವ ದಾಖಲೆ ವೀರ ಬಾಂಗ್ಲಾದ ವೇಗಿ ಮುಸ್ತುಫಿಜುರ್ ರೆಹಮಾನ್ ಮತ್ತೊಂದು ದಾಖಲೆಯ ಶ್ರೇಯವನ್ನು ತಮ್ಮದಾಗಿರಿಸಿಕೊಂಡಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲೂ ರೆಹಮಾನ್ 57 ರನ್ ನೀಡಿ 2 ವಿಕೆಟ್ ಪಡೆದರು. ಆರಂಭಿಕ ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಅವರನ್ನು ಫೆವಿಲಿಯನ್ ಗೆ ಕಳಿಸಿದ ಮುಸ್ತುಫಿಜುರ್ ಒಟ್ಟು 3 ಪಂದ್ಯಗಳಿಂದ 13 ವಿಕೆಟ್ ಕಿತ್ತ ಸಾಧನೆ ಮಾಡಿದರು.[ನಾಚಿಕೆಗೇಡು: ಸಚಿನ್ ಭಕ್ತನ ಮೇಲೆ ಬಾಂಗ್ಲಾ 'ಟೈಗರ್ಸ್' ದಾಳಿ]

ಎರಡು ದೇಶಗಳ ಸರಣಿಯಲ್ಲಿ 3 ಪಂದ್ಯದಿಂದ 13 ವಿಕೆಟ್ ಹೊಸ ವಿಶ್ವದಾಖಲೆಯಾಗಿ ಹೊರಹೊಮ್ಮಿತು. ಆಸ್ಟ್ರೇಲಿಯಾದ ರೈನ್ ಹ್ಯಾರಿಸ್ ಪಾಕಿಸ್ತಾನದ ವಿರುದ್ಧ(2010) ಮೂರು ಪಂದ್ಯಗಳಿಂದ 13 ವಿಕೆಟ್ ಕಿತ್ತಿದ್ದರು. ಆದರೆ ಅದು 5 ಪಂದ್ಯಗಳ ಸರಣಿ ಆಗಿತ್ತು.[ಭಾರತದ ವಿರುದ್ಧ ವಿಶ್ವದಾಖಲೆ ಬರೆದ ಮುಸ್ತಫಿಜುರ್]
ಭಾರತದ ವಿರುದ್ಧ ಪದಾರ್ಪಣೆ ಮಾಡಿದ ಮುಸ್ತುಫಿಜುರ್ ಮೊದಲ ಪಂದ್ಯದಲ್ಲೇ 5 ವಿಕೆಟ್ ಗೊಂಚಲು ಪಡೆದು ಸಾಧನೆ ಮಾಡಿದ್ದರು. ನಂತರ 2 ನೇ ಪಂದ್ಯದಲ್ಲಿ ಆರು ವಿಕೆಟ್ ಕಿತ್ತು ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಮುಸ್ತುಫಿಜುರ್ ಅಮೋಘ ಬೌಲಿಂಗ್ ನೆರವಿನಿಂದ ಬಾಂಗ್ಲಾ ಭಾರತದ ವಿರುದ್ಧ ಐತಿಹಾಸಿಕ ಸರಣಿ ಜಯ ಸಾಧಿಸಿತ್ತು.
Story first published: Wednesday, January 3, 2018, 10:03 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications