ಭಾರತದ ವಿರುದ್ಧ ವಿಶ್ವದಾಖಲೆ ಬರೆದ ಮುಸ್ತಫಿಜುರ್
ಮೀರ್ ಪುರ್, ಜೂ.22: ಬಾಂಗ್ಲಾ ಎಡಗೈ ವೇಗಿ ಭಾರತದ ವಿರುದ್ಧ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಎರಡು ಪಂದ್ಯಗಳಿಂದ 11 ವಿಕೆಟ್ ಕಿತ್ತ ಸಾಧನೆ ಮಾಡಿದ ಮುಸ್ತಫಿಜುರ್ ವಿಶ್ವದಾಖಲೆಗೆ ಭಾಜನರಾಗಿದ್ದಾರೆ.
ಪದಾಪರ್ಣೆ ಪಂದ್ಯದಲ್ಲಿ 5 ವಿಕೆಟ್ ಕಿತ್ತು ಭಾರತದ ಗೆಲುವನ್ನು ಕಸಿದುಕೊಂಡಿದ್ದ ಮುಸ್ತಫಿಜುರ್ ಎರಡನೇ ಪಂದಲ್ಲೂ ಅದೇ ರೀತಿ ಬೌಲಿಂಗ್ ನಡೆಸಿದರು. ಒಂದು ವಿಕೆಟ್ ಹೆಚ್ಚು ಪಡೆದು ಭಾರತವನ್ನು 200 ರನ್ ಗೆ ಕಟ್ಟಿಹಾಕಿದರು.[ಎರಡನೇ ಪಂದ್ಯದಲ್ಲೂ ಭಾರತಕ್ಕೆ ಹೀನಾಯ ಸೋಲು]

43 ರನ್ ನೀಡಿ 6 ವಿಕೆಟ್ ಕಿತ್ತ ಮುಸ್ತಫಿಜುರ್ ಸಾಧನೆ ವಿಶ್ವದಾಖಲೆಯಾಯಿತು. ಎರಡು ಪಂದ್ಯಗಳಿಂದ 11 ವಿಕೆಟ್ ಕಿತ್ತ ಶ್ರೇಯ ಅವರ ಪಾಲಾಯಿತು. ಎರಡು ಪಂದ್ಯಗಳಲ್ಲಿ 5 ವಿಕೆಟ್ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎಂಬ ದಾಖಲೆಗೂ ಮುಸ್ತಫಿಜುರ್ ಪಾತ್ರರಾದರು. ಇದಕ್ಕೂ ಮುನ್ನ ಜಿಂಬಾಬ್ವೆಯ ಬ್ರೀಯಾನ್ ವೆಟೋರಿ ಬಾಂಗ್ಲಾ ವಿರುದ್ಧ (30ಕ್ಕೆ 5, 20 ಕ್ಕೆ 5, 2011, ಹರಾರೆ)ವೇ ಸಾಧನೆ ಮಾಡಿದ್ದರು.[ಸರಣಿ ಸೋಲು, ಧೋನಿಯಿಂದ 'ಪದತ್ಯಾಗ'ದ ಬೆದರಿಕೆ]
ಆರಂಭಿಕ ದಾಂಡಿಗ ರೋಹಿತ್ ಶರ್ಮಾ ಅವರು ಮುಸ್ತಫಿಜುರ್ ಮೊದಲ ಬಲಿ. 5 ಓವರ್ ನ ಮೊದಲ ಸ್ಪೆಲ್ ನಲ್ಲಿ ಮುಸ್ತಫಿಜುರ್ ಗೆ ದಕ್ಕಿದ್ದು ಒಂದೇ ವಿಕೆಟ್. ಆದರೆ ನಂತರ 2ನೇ ಸ್ಪೆಲ್ ನಲ್ಲಿ ಮಾರಕ ದಾಳಿ ಸಂಘಟಿಸಿದರು. ಸುರೇಶ್ ರೈನಾ, ಎಂಎಸ್ ಧೋನಿ, ಅಕ್ಷರ್ ಪಟೇಲ್, ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಫೆವಿಲಿಯನ್ ಗೆ ಸೇರಿಸಿ ವಿಶ್ವ ದಾಖಲೆ ಬರೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications