Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಅದೃಷ್ಟ ಮತ್ತು ಜಡೇಜ ಗಡ್ಡದ ರಹಸ್ಯ

ಪರ್ತ್, ಮಾ.6: ಕ್ರಿಕೆಟರ್ಸ್ ಹಾಗೂ ಅವರ ನಂಬಿಕೆಗಳ ಬಗ್ಗೆ ಡ್ರೆಸಿಂಗ್ ರೂಮಿನಿಂದ ಅನೇಕ ರಹಸ್ಯ ಕಥೆಗಳು ಆಗಾಗ ಕೇಳಿ ಬರುತ್ತಿರುತ್ತದೆ. ಸಚಿನ್ ತೆಂಡೂಲ್ಕರ್ ಕೂಡಾ ಎಡಗಾಲಿನ ಪ್ಯಾಡ್ ಮೊದಲು ಕಟ್ಟಿಕೊಳ್ಳುತ್ತಿದ್ದದ್ದು ಅಭ್ಯಾಸ ಬಲದಿಂದಲೋ ಅಥವಾ ನಂಬಿಕೆಬಲದಿಂದಲೋ ಎಂಬ ಚರ್ಚೆ ಈಗಲೂ ಚಾಲ್ತಿಯಲ್ಲಿದೆ. ಈ ನಡುವೆ 'ಸರ್' ಜಡೇಜ ಅವರು ತಮ್ಮ ಗಡ್ಡದ ರಹಸ್ಯವನ್ನು ಬಹಿರಂಗವಾಗಿ ಹೊರ ಹಾಕಿದ್ದಾರೆ.

ವಿಶ್ವಕಪ್ 2015 ಟೂರ್ನಿಯಲ್ಲಿ ಕೊನೆಗಳಿಗೆಯಲ್ಲಿ ತಂಡವನ್ನು ಸೇರಿಕೊಂಡ ಆಲ್ ರೌಂಡರ್ ರವೀಂದ್ರ ಜಡೇಜರ ಜೊತೆಗೆ ಅದೃಷ್ಟ ದೇವತೆ ಇದ್ದಾಳೆ ಎಂದು ಎಲ್ಲರೂ ಹೇಳುತ್ತಿದ್ದರು. ಇದನ್ನೇ ಮತ್ತೊಂದು ರೀತಿಯಲ್ಲಿ ಜಡೇಜ ಪುನರುಚ್ಚರಿಸಿದ್ದಾರೆ. ತಮ್ಮ ಗಡ್ಡವನ್ನು ನೀವಿಕೊಳ್ಳುತ್ತಾ, ಗಡ್ಡಧಾರಿಯಾಗಿರುವ ರಹಸ್ಯ ಹೇಳಿದ್ದಾರೆ.

My beard is a lucky charm for India at World Cup: Ravindra Jadeja

ನಾನು ಈ ಟೂರ್ನಿ ಮುಗಿಯುವ ತನಕ ಗಡ್ಡ ತೆಗೆಯುವುದಿಲ್ಲ. ಭಾರತದ ಅದೃಷ್ಟಕ್ಕೂ ನನ್ನ ಗಡ್ಡಕ್ಕೂ ಲಿಂಕ್ ಇದೆ. ನನ್ನ ಗಡ್ಡದ ಲುಕ್ ಭಾರತಕ್ಕೆ ಲಕ್ಕಿಯಾಗಿದೆ ಎಂದು ರವೀಂದ್ರ ಜಡೇಜ ಹೇಳಿದ್ದಾರೆ.

ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರು ರವೀಂದ್ರ ಜಡೇಜ ಅವರನ್ನು ಅವರ ಗಡ್ಡದ ಬಗ್ಗೆ ಕೇಳಿದಾಗ "Firstly, it is a lucky charm." ಎಂದು ಎಡಗೈ ಬ್ಯಾಟ್ಸ್ ಮನ್ ಹೇಳಿದ್ದಾರೆ.

'ನಾನು ಈ ಟೂರ್ನಿಯಲ್ಲಿ ಸತತವಾಗಿ ಮೂರು ಪಂದ್ಯ ಗೆದ್ದಿದ್ದೇವೆ. ನಿಜ ಹೇಳಬೇಕೆಂದರೆ ಗಡ್ಡ ಇಲ್ಲದಿದ್ದರೆ ನಾನು ಚೆನ್ನಾಗಿ ಕಾಣುವುದಿಲ್ಲ. ಹೀಗಾಗಿ ಇದೇ ಲುಕ್ ಮುಂದುವರೆಸಿದ್ದೇನೆ' ಎಂದು ಜಡೇಜ ಪ್ರತಿಕ್ರಿಯಿಸಿದ್ದಾರೆ. ಗಡ್ಡ ಭಾರತಕ್ಕೆ ಜಯ ತಂದುಕೊಡುವುದೋ ಇಲ್ಲವೋ ಗೊತ್ತಿಲ್ಲ. ಜಡೇಜ ಆಡುವ XIನಲ್ಲಿ ಇರುವ ತನಕ ಸ್ಟುವರ್ಟ್ ಬಿನ್ನಿ ಹಾಗೂ ಅಕ್ಷರ್ ಪಟೇಲ್ ಗಂತೂ ಸ್ಥಾನ ಸಿಗುವುದಿಲ್ಲ

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+