ಕಳೆದ ಭಾನುವಾರ, ನವೆಂಬರ್ 19ರಂದು ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳ ಸೋಲು, ಮೂರನೇ ಏಕದಿನ ವಿಶ್ವಕಪ್ ಟ್ರೋಫಿ ಎತ್ತುವ ಭಾರತ ತಂಡದ ಕನಸು ಭಗ್ನಗೊಂಡಿತು.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಪಂದ್ಯಾವಳಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್‌ಗೆ ತಲುಪಿತ್ತು. ಆದರೆ, ಅಂತಿಮ ಪಂದ್ಯದಲ್ಲಿ ಗೆಲುವಿನ ಆವೇಗ ಕಡಿಮೆಯಾಯಿತು.

ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಹೃದಯ ವಿದ್ರಾವಕ ಸೋಲು ಅರಗಿಸಿಕೊಳ್ಳಲು ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಈಗಲೂ ಕಷ್ಟವಾಗಿದೆ. ಅಲ್ಲದೆ ಭಾರತೀಯ ತಂಡದ ಕೆಲವು ಸದಸ್ಯರು ಕಣ್ಣೀರು ಹಾಕಿರುವ ಘಟನೆಯೂ ನಡೆದಿದೆ.
ವಿಶ್ವಕಪ್ ಫೈನಲ್ ಸೋಲು ಭಾರತ ತಂಡದ ನಾಯಕ ರೋಹಿತ್ ಶರ್ಮಾಗೂ ದೊಡ್ಡ ಘಾಸಿಯನ್ನುಂಟು ಮಾಡಿದೆ. ಇದೀಗ ರೋಹಿತ್ ಶರ್ಮಾ ಮಗಳ ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಮನಾರ್ಹವಾಗಿ, ಒಂದು ವರ್ಷದ ಹಿಂದೆ ಕಾಣಿಸಿಕೊಂಡ ವಿಡಿಯೋ ಇದಾಗಿದೆ. ರೋಹಿತ್ ಶರ್ಮಾ ಮಗಳು ಸಮೈರಾ ಹೇಳುವುದನ್ನು ಕೇಳಬಹುದು, ""ಅವರು ಕೋಣೆಯಲ್ಲಿ ಇದ್ದಾರೆ, ಅಪ್ಪ ಬಹುತೇಕ ಸಕಾರಾತ್ಮಕವಾಗಿದ್ದಾನೆ ಮತ್ತು ಒಂದು ತಿಂಗಳೊಳಗೆ ಅವರು ಮತ್ತೆ ನಗುತ್ತಾರೆ,'' ಎಂದು ಮುಗ್ಧವಾಗಿ ಹೇಳಿದ್ದಾಳೆ.
ಇದು 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಬಳಿಕದ ವಿಡಿಯೋ ಎಂದು ಹೇಳಲಾಗುತ್ತಿದೆ.
ರೋಹಿತ್ ಶರ್ಮಾ ಇನ್ಮುಂದೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಸಾಧ್ಯತೆಯಿಲ್ಲ ಎಂದು ವರದಿಗಳು ಹೇಳುತ್ತಿವೆ. ಇದೇ ವೇಳೆ 50-ಓವರ್‌ಗಳ ವಿಶ್ವಕಪ್‌ನ ಆರಂಭಕ್ಕೂ ಮುನ್ನ ಚುಟುಕು ಸ್ವರೂಪದಲ್ಲಿ ಅವರ ಭವಿಷ್ಯದ ಬಗ್ಗೆ ಚರ್ಚಿಯಾಗಿತ್ತು.
2022ರ ನವೆಂಬರನ್‌ಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ನಿರ್ಗಮನದ ನಂತರ, ರೋಹಿತ್ ಶರ್ಮಾ ಕಡಿಮೆ ಸ್ವರೂಪದಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅಂದಿನಿಂದ ಟಿ20 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಹೆಚ್ಚಾಗಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
36 ವರ್ಷದ ಭಾರತ ತಂಡದ ನಾಯಕ ರೋಹಿತ್ ಶರ್ಮಾ 148 ಟಿ20 ಪಂದ್ಯಗಳನ್ನು ಆಡಿದ್ದು, ನಾಲ್ಕು ಶತಕಗಳೊಂದಿಗೆ ಸುಮಾರು 140 ಸ್ಟ್ರೈಕ್ ರೇಟ್‌ನಲ್ಲಿ 3853 ರನ್ ಗಳಿಸಿದ್ದಾರೆ.
"ಇದೇನು ಹೊಸ ಬೆಳವಣಿಗೆಯಲ್ಲ. ರೋಹಿತ್ ಶರ್ಮಾ ಸೇರಿದಂತೆ ವಿರಾಟ್ ಕೊಹ್ಲಿ ಕಳೆದ ಒಂದು ವರ್ಷದಲ್ಲಿ ಯಾವುದೇ ಟಿ20 ಪಂದ್ಯಗಳನ್ನು ಆಡಿಲ್ಲ ಏಕೆಂದರೆ, ಏಕದಿನ ವಿಶ್ವಕಪ್ ಮೇಲೆ ಕೇಂದ್ರೀಕೃತವಾಗಿತ್ತು".
"ಈ ನಿಟ್ಟಿನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರೊಂದಿಗೆ ಅವರು ದೊಡ್ಡಮಟ್ಟದ ಚರ್ಚೆ ನಡೆಸಿದ್ದಾರೆ. ಅವರೇ ಸ್ವಯಂಪ್ರೇರಿತರಾಗಿ ಟಿ20 ಪಂದ್ಯಗಳಿಂದ ದೂರ ಉಳಿಯಲು ಮುಂದಾಗಿದ್ದಾರೆ. ಇದು ಸಂಪೂರ್ಣವಾಗಿ ರೋಹಿತ್ ಶರ್ಮಾ ಅವರ ನಿರ್ಧಾರವಾಗಿದೆ," ಎಂದು ಬಿಸಿಸಿಐನ ಅನಾಮಧೇಯ ಮೂಲಗಳು ತಿಳಿಸಿವೆ.