
ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ಭಾರತ ಕುಟುಂಬ ಎಂದು ಈ ಫೋಟೋಗೆ ಒಕ್ಕಣೆಯನ್ನು ಬರೆದಿದ್ದು ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ.
ಅಂದಹಾಗೆ ಡೇವಿಡ್ ವಾರ್ನರ್ ತನ್ನ ಕುಟುಂಬ ಎಂದು ಪರಿಚಯಿಸಿ ಫೋಟೋ ಯಾವುದು ಗೊತ್ತಾ? ಅದು ಸನ್ ರೈಸರ್ಸ್ ಹೈದರಾಬಾದ್ ತಂಡದ ಫೋಟೋವನ್ನು. ಈ ಫೋಟವನ್ನು ತನ್ನ ಭಾರತೀಯ ಕುಟುಂಬ ಎಂದು ಡೇವಿಡ್ ವಾರ್ನರ್ ಹೇಳಿಕೊಂಡಿದ್ದಾರೆ.
ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರು. 2016ರಲ್ಲಿ ಡೇವಿಡ್ ವಾರ್ನರ್ ನೇತೃತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಚೊವ್ವಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿತ್ತು. ಆ ಡೇವಿಡ್ ವಾರ್ನರ್ ಐಪಿಎಲ್ ತಂಡವನ್ನು ಮುನ್ನಡೆಸಿದ್ದರು. ಆ ಫೋಟೋವನ್ನು ವಾರ್ನರ್ ಹಂಚಿಕೊಂಡಿದ್ದಾರೆ.
View this post on InstagramMy favourite IPL moment would have to be this for sure. My Indian family @sunrisershyd
A post shared by David Warner (@davidwarner31) on
2016ರಲ್ಲಿ ಸನ್‌ರೈಸರ್ನ್ ಹೈದರಾಬಾದ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಎದುರಿಸಿತ್ತು. ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ರೋಚಕವಾಗಿ ಮಣಿಸಿ ಮೊದಲ ಬಾರಿಗೆ ಕಪ್ ಗೆದ್ದುಕೊಂಡಿತ್ತು.
ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಈ ಸಂದರ್ಭವನ್ನು ಡೇವಿಡ್ ವಾರ್ನರ್ ಐಪಿಎಎಲ್‌ನಲ್ಲಿ ತನ್ನ ಸ್ಮರೀಯ ಕ್ಷಣ ಎಂದು ಈ ಫೋಟೋ ಜೊತೆಗೆ ವಾರ್ನರ್ ಹೇಳಿಕೊಂಡಿದ್ದಾರೆ. ಕಳೆದ ಬಾರಿ ನಾಯಕತ್ವವನ್ನು ಕಳೆದುಕೊಮಡಿದ್ದ ಡೇವಿಡ್ ವಾರ್ನರ್ ಈ ವಾರಿ ಅಂದುಕೊಂಡಂತೆ ಐಪಿಎಲ್ ನಡೆದಿದ್ದರೆ ಮತ್ತೆ ನಾಯಕತ್ವವನ್ನು ವಹಿಸಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿದ್ದರು.