ಕೊಹ್ಲಿ ಬ್ಯಾಟಿಂಗ್‌ಗೆ ಬಂದಾಗ ಎಚ್ಚರಿಸಲು ಮಗ ಹೇಳ್ತಾನೆ: ಮೈಕಲ್ ವಾನ್

ಕ್ಯಾನ್ಬೆರಾ: ಈಗಿನ ಕ್ರಿಕೆಟ್ ಯುಗದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಚ್ಚು ಜನಪ್ರಿಯ ಆಟಗಾರ. ಕೊಹ್ಲಿಗೆ ಬರೀ ಭಾರತದಲ್ಲಷ್ಟೇ ಅಭಿಮಾನಿಗಳಿಲ್ಲ, ವಿದೇಶಗಳಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕಿಚ್ಚಿನ ಹೊಡೆತಗಳಿಗೆ ಕೊಹ್ಲಿ ಹೆಚ್ಚು ಫೇಮಸ್ ಆಗಿರುವ ಕೊಹ್ಲಿ ಏಕದಿನ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸದ್ಯ ನಂ.1 ಸ್ಥಾನದಲ್ಲಿದ್ದಾರೆ.
ಪ್ರವಾಸ ಸರಣಿಗಾಗಿ ಸದ್ಯ ಭಾರತ ತಂಡ ಆಸ್ಟ್ರೇಲಿಯಾದಲ್ಲಿದೆ. ಭಾರತ-ಆಸ್ಟ್ರೇಲಿಯಾ ಕೊನೇಯ ಏಕದಿನ ಪಂದ್ಯದ ವೇಳೆ, ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಮೈಕಲ್ ವಾನ್, ತನ್ನ ಮಗನೂ ವಿರಾಟ್ ಕೊಹ್ಲಿಯ ಬಲುದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.
'ನನ್ನ ಪುಟಾಣಿ ಮಗನೂ ಸಣ್ಣ ಆಟಗಾರ. ವಿರಾಟ್ ಕೊಹ್ಲಿ ಬಂದಾಗ ತನ್ನನ್ನು ಎಚ್ಚರಿಸುವಂತೆ ಆತ ನನ್ನಲ್ಲಿ ಯಾವಾಗಲೂ ಹೇಳುತ್ತಿರುತ್ತಾನೆ. ಕೊಹ್ಲಿ ಔಟಾದ ಬಳಿಕ ಆತ ಮತ್ತೆ ತನ್ನದೇ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ಮಕ್ಕಳನ್ನು ಕೊಹ್ಲಿ ಅಷ್ಟರ ಮಟ್ಟಿಗೆ ಆಕರ್ಷಿಸುತ್ತಾರೆ,' ಎಂದು ಕ್ರಿಕ್‌ಬಝ್ ಜೊತೆ ಮಾತನಾಡಿದ ಕೊಹ್ಲಿ ಹೇಳಿದ್ದಾರೆ.
ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 78 ಎಸೆತಗಳಿಗೆ 63 ರನ್ ಬಾರಿಸಿದ್ದರು. ಹಾರ್ದಿಕ್ ಪಾಂಡ್ಯ 92, ರವೀಂದ್ರ ಜಡೇಜಾ 66, ಶುಬ್ಮನ್ ಗಿಲ್ 33 ರನ್‌ನೊಂದಿಗೆ ಭಾರತ 50 ಓವರ್‌ಗೆ 5 ವಿಕೆಟ್ ಕಳೆದು 302 ರನ್ ಗಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications