Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Devdutt Padikkal: ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡೋದು ನನ್ನ ಅಂತಿಮ ಗುರಿ

My Ultimate goal is to play Test cricket for India: Devdutt Padikkal

ನವದೆಹಲಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ಹೆಚ್ಚು ಗಮನ ಸೆಳೆದವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಯುವ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್. ಆರ್‌ಸಿಬಿ ಪರ ಪಡಿಕ್ಕಲ್ 472 ರನ್ ಗಳಿಸಿದ್ದರು. ಪಡಿಕ್ಕಲ್ ಬೆಂಬಲದೊಂದಿಗೆ ಆರ್‌ಸಿಬಿ ಈ ಬಾರಿ ಪ್ಲೇ ಆಫ್‌ಗೆ ಪ್ರವೇಶಿಸಿತ್ತು.

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದಿಂದಲೇ ದೇವದತ್ ಪಡಿಕ್ಕಲ್ ಮುಂದೊಮ್ಮೆ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುವ ಭರವಸೆ ಮೂಡಿಸಿದ್ದಾರೆ. ಅಂದ್ಹಾಗೆ ದೇವದತ್ ಪಡಿಕ್ಕಲ್‌ಗೆ ಭಾರತ ತಂಡದಲ್ಲಿ ಅದರಲ್ಲೂ ಟೆಸ್ಟ್ ತಂಡದಲ್ಲಿ ಆಡುವ ಬಯಕೆಯಿದೆಯಂತೆ. ಇತ್ತೀಚೆಗೆ ಸಂದರ್ಶನದಲ್ಲಿ ಪಡಿಕ್ಕಲ್ ಇದನ್ನು ಹೇಳಿಕೊಂಡಿದ್ದಾರೆ.

ಟೈಮ್ಸ್ ನೌವ್ ನ್ಯೂಸ್ ಸಂದರ್ಶನದ ವೇಳೆ ಪಡಿಕ್ಕಲ್ ಅವರಲ್ಲಿ, 'ಕ್ರಿಕೆಟರ್ ಆಗಿ ನಿಮ್ಮ ಅಂತಿಮ ಗುರಿಯೇನು ಎಂದು ಪ್ರಶ್ನಿಸಲಾಯ್ತು. ಆಗ ಪಡಿಕ್ಕಲ್ ತನಗೆ ಜೀವನದಲ್ಲಿರುವ ಆಸೆಯೇನೆಂದು ಹೇಳಿಕೊಂಡಿದ್ದಾರೆ.

'ಕ್ರಿಕೆಟರ್ ಒಬ್ಬನನ್ನು ಟೆಸ್ಟ್ ಕ್ರಿಕೆಟ್ ವ್ಯಾಖ್ಯಾನಿಸುತ್ತದೆ, ಅದೇ ಪ್ರತೀ ಕ್ರಿಕೆಟರ್‌ಗೆ ಅಂತಿಮ ಗುರಿ. ನಾನು ಮುಂದೊಮ್ಮೆ ಏನಾದರೂ ಮಾಡಲು ಬಯಸುವುದಿದ್ದರೆ ಅದು ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡೋದು,' ಎಂದು ಪಡಿಕ್ಕಲ್ ಹೇಳಿದ್ದಾರೆ.

Story first published: Saturday, November 14, 2020, 9:52 [IST]
Other articles published on Nov 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+