For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್

My words never intended to insult: Dale Steyn apologizes for remark on IPL

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಬಗ್ಗೆ ಹೇಳಿಕೆ ನೀಡಿದ್ದ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್ ತನ್ನ ಹೇಳಿಕೆಗಾಗಿ ಕ್ಷಮೆ ಯಾಚಿಸಿದ್ದಾರೆ. ನನ್ನ ಮಾತುಗಳು ಐಪಿಎಲ್‌ ಅನ್ನು ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಸ್ಟೇನ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಸಿಗುವ ಪುರಸ್ಕಾರ, ಗೌರವಕ್ಕಿಂತ ಪಾಕಿಸ್ತಾನ್ ಸೂಪರ್ ಲೀಗ್‌, ಇತರ ಲೀಗ್‌ನಲ್ಲಿ ಹೆಚ್ಚಿನ ಪುರಸ್ಕಾರ ಸಿಗುತ್ತದೆ. ಐಪಿಎಲ್‌ನಲ್ಲಿ ದೊಡ್ಡ ದೊಡ್ಡ ಆಟಗಾರರು ಇರುವುದರಿಂದ ಅಲ್ಲಿ ಪ್ರತಿಭೆಗಿಂತ ದುಡ್ಡು ಹೆಚ್ಚು ಆದ್ಯತೆ ಪಡೆದುಕೊಳ್ಳುತ್ತದೆ, ಪ್ರತಿಭಾನ್ವಿತ ಕೆಲ ಆಟಗಾರರನ್ನು ಕಡೆಗಣಿಸಲಾಗುತ್ತದೆ ಎಂದು ಡೇಲ್ ಸ್ಟೇನ್ ಈ ಹಿಂದೆ ಹೇಳಿದ್ದರು.

ಈಗ ತನ್ನ ಮಾತಿಗೆ ಕ್ಷಮೆ ಯಾಚಿಸಿರುವ ಸ್ಟೇನ್, 'ನನ್ನ ಮಾತುಗಳು ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ. ಇದರಿಂದ ಯಾರನ್ನೇ ನೋಯಿಸುವ ಉದ್ದೇಶ ಇರಲಿಲ್ಲ. ನನ್ನ ಮಾತುಗಳಿಗೆ ನಾನು ಕ್ಷಮೆ ಯಾಚಿಸುತ್ತೇನೆ,' ಎಂದು ಸ್ಟೇನ್ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಸ್ಟೇನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್ ತಂಡಗಳಲ್ಲಿ ಆಡಿದ್ದಾರೆ. ಸದ್ಯ ಸ್ಟೇನ್ ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಸ್‌ಎಲ್)ನಲ್ಲಿ ಕ್ವೆಟ್ಟ ಗ್ಲಾಡಿಯೇಟರ್ಸ್ ಪರ ಆಡುತ್ತಿದ್ದಾರೆ.

Story first published: Thursday, March 4, 2021, 7:46 [IST]
Other articles published on Mar 4, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+