
ಕೊರೊನಾವೈರಸ್ ಆತಂಕದ ನಡುವೆ ಕ್ರಿಕೆಟ್ ಹಬ್ಬ ಇಂಡಿಯ ಪ್ರೀಮಿಯರ್ ಲೀಗ್ (ಐಪಿಎಲ್) 2020 ಯಶಸ್ವಿಯಾಗಿ ಸಂಪನ್ನವಾಗಿದೆ. ಯುಎಇಯಲ್ಲಿ ಕೊವಿಡ್ 19 ಸುರಕ್ಷಿತ ನಿಯಮ, ಬಯೋ ಬಬ್ಬಲ್, ಪ್ರೇಕ್ಷಕರಿಲ್ಲದೆ ವಿನೂತನ ವ್ಯವಸ್ಥೆಯಲ್ಲಿ ಕ್ರಿಕೆಟರ್ಸ್ ಪಾಸಾಗಿದ್ದಾರೆ.
ಹತ್ತು ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿ, ಉತ್ತಮ ವೇದಿಕೆ ಒದಗಿಸುತ್ತಾ ಬಂದಿರುವ ಐಪಿಎಲ್ ಈ ಬಾರಿ ಅತ್ಯಂತ ಸ್ಪರ್ಧಾತ್ಮಕವಾಗಿ ಕೂಡಿತ್ತು. ಕೊನೆ ಲೀಗ್ ಪಂದ್ಯದ ತನಕ ಪ್ಲೇ ಆಫ್ ತಂಡದ ಆಯ್ಕೆ ಕಷ್ಟವಾಗಿತ್ತು. ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಶಿಪ್ ಉಳಿಸಿಕೊಂಡರೆ, ಡೆಲ್ಲಿ ಮೊದಲ ಬಾರಿಗೆ ಅಂತಿಮ ಹಣಾಹಣಿ ಆಡಿದ ಸಾಧನೆ ಮಾಡಿತು. ಹಿರಿಯರ ತಂಡ ಎನಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೇ ಮೊದಲ ಬಾರಿಗೆ ಪ್ಲೇ ಆಫ್ ಹಂತಕ್ಕೇರದೆ ನಿರ್ಗಮಿಸಿತು.
ಮಾಜಿ ಕ್ರಿಕೆಟರ್ಸ್, ಕಾಮೆಂಟೆಟರ್ ಐಪಿಎಲ್ 2020ಕ್ಕಾಗಿ ತಮ್ಮ ಆಯ್ಕೆಯ ಅತ್ಯುತ್ತಮ ಇಲೆವೆನ್ ಪ್ರಕಟಿಸುತ್ತಿದ್ದಾರೆ. ನಮ್ಮ ಕ್ರಿಕೆಟ್ ಡೆಸ್ಕ್ ಆಯ್ಕೆಯ ತಂಡ ಇಲ್ಲಿದೆ.
2020ರಲ್ಲಿ ನಿರೀಕ್ಷೆಗೂ ಮೀರಿ, ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿ, ಗಮನ ಸೆಳೆದರೆ, ಐಪಿಎಲ್ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರು ಈ ಬಾರಿ ಫ್ಲಾಪ್ ಶೋ ನೀಡಿದ್ದಾರೆ. ಮೈದಾನದಲ್ಲಿ ಆರ್ಭಟಿಸಿದರು. ಮೈಖೇಲ್ ಆಯ್ಕೆಯ ಶ್ರೇಷ್ಠ ಹನ್ನೊಂದು ಆಟಗಾರರ ಪಟ್ಟಿ ಇಲ್ಲಿದೆ...
1. ಕೆಎಲ್ ರಾಹುಲ್ (ಕಿಂಗ್ಸ್ ಎಲೆವನ್ ಪಂಜಾಬ್) (ನಾಯಕ)
2. ಶಿಖರ್ ಧವನ್ (ಡೆಲ್ಲಿ ಕ್ಯಾಪಿಟಲ್ಸ್)
3. ಎಬಿ ಡಿ ವಿಲಿಯರ್ಸ್ (ವಿದೇಶಿ) (ವಿಕೆಟ್ ಕೀಪರ್) (ರಾಯಲ್ ಚಾಲೆಂಜರ್ಸ್ ಬೆಂಗಳೂರು)
4. ಸೂರ್ಯ ಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್)
5. ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್)
6. ರಾಹುಲ್ ತೇವಾಟಿಯಾ (ರಾಜಸ್ಥಾನ್ ರಾಯಲ್ಸ್) (ಆಲ್ ರೌಂಡರ್)
7. ರಶೀದ್ ಖಾನ್ (ವಿದೇಶಿ) (ಸನ್ ರೈಸರ್ಸ್ ಹೈದರಾಬಾದ್)
8. ಜೋಫ್ರಾ ಆರ್ಚರ್ (ವಿದೇಶಿ) (ರಾಜಸ್ಥಾನ್ ರಾಯಲ್ಸ್)
9. ಕಾಗಿಸೊ ರಬಾಡ (ವಿದೇಶಿ) (ಡೆಲ್ಲಿ ಕ್ಯಾಪಿಟಲ್ಸ್)
10. ಜಸ್ ಪ್ರೀತ್ ಬೂಮ್ರಾ (ಮುಂಬೈ ಇಂಡಿಯನ್ಸ್)
11. ಯುಜುವೇಂದ್ರ ಚಾಹಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಇದರ ಜೊತೆಗೆ ನಿಮ್ಮ ಆಯ್ಕೆಯ ತಂಡವನ್ನು ನಮಗೆ ತಿಳಿಸಿ.. [email protected] ಇಮೇಲ್ ಮಾಡಿ ಅಥವಾ ಫೇಸ್ಬುಕ್ ಪುಟದಲ್ಲಿ ಕಾಮೆಂಟ್ ಮಾಡಿ.. ನಿಮ್ಮ ಆಯ್ಕೆಗೆ ಕಾರಣವನ್ನು ಸಾಧ್ಯವಾದರೆ ಹೇಳಿ.