2024ರ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೈಸೂರು ಮಹಾರಾಜ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಮೈಸೂರು ವಾರಿಯರ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 207 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು 8 ವಿಕೆಟ್‌ಗಳನ್ನು ಕಳೆದುಕೊಂಡು 162 ರನ್‌ಗಳನ್ನಲಷ್ಟೇ ಶಕ್ತವಾಯಿತು. ಇದರೊಂದಿಗೆ ಮೈಸೂರು 45 ರನ್‌ಗಳ ಅಮೋಘ ಜಯ ಸಾಧಿಸಿದೆ.

ಮೊದಲು ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಇನ್ನಿಂಗ್ಸ್ ಶುರು ಮಾಡಿದ ಮೈಸೂರು ಆರಂಭದಲ್ಲೇ ಆಘಾತ ಎದುರಿಸಿತು. 3 ರನ್ ಗಳಿಸಿದ ಕಾರ್ತಿಕ್ ಸಿಎ ಔಟಾದರು. ಬಳಿಕ ಎರಡನೇ ವಿಕೆಟ್‌ಗೆ ಒಂದಾದ ನಾಯಕ ಕರುಣ್ ನಾಯರ್ ಮತ್ತು ಎಸ್‌ಯು ಕಾರ್ತಿಕ್ ಉತ್ತಮ ಜೊತೆಯಾಟವಾಡಿದರು. ಈ ಜೋಡಿ 81 ರನ್ ಕಲೆಹಾಕಿದರು.
ಬೀರುಸಿನ ಬ್ಯಾಟಿಂಗ್ ಮಾಡಿದ ಕಾರ್ತಿಕ್ 44 ಎಸೆತಗಳಲ್ಲಿ 7 ಬೌಂಡರಿ ಹಾಗು 3 ಸಿಕ್ಸರ್‌ಗಳ ನೆರವಿನಿಂದ 71 ರನ್ ಬಾರಿಸಿದರು. ಇನ್ನೊಂದೆಡೆ ಅಬ್ಬರಿಸಿದ ಕರುಣ್ ನಾಯರ್ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಮೂಲಕ 66 ರನ್ ಗಳಿಸಿದರು.
ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಮನೋಜ್ ಭಾಂಡಗೆ ಕೇವಲ 13 ಎಸೆತಗಳಲ್ಲಿ 2 ಬೌಂಡರಿ 5 ಭರ್ಜರಿ ಸಿಕ್ಸರ್‌ಗಳ ಸಹಾಯದಿಂದ ಅಜೇಯ 44 ರನ್ ಸಿಡಿಸಿದರು. ಅಂತಿಮವಾಗಿ ಮೈಸೂರು ವಾರಿಯರ್ಸ್ 4 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು.
ಮೈಸೂರು ನೀಡಿ ಬಿಗ್ ಸ್ಕೋರ್ ಚೇಸ್ ಮಾಡಕು ಬೆಂಗಳೂರು ತಂಡಕ್ಕೆ ವೇಗದ ಬೌಲರ್ ವಿದ್ಯಾಧರ್ ಪಾಟೀಲ್ ಶಾಕ್ ನೀಡಿದರು. ಆರಂಭಿಕ ಜೋಡಿ ನಾಯಕ ಮಯಾಂಕ್ ಅಗರ್ವಾಲ್ (6) ಮತ್ತು ಭುವನ್ ರಾಜು (1) ಪೆವಲಿಯನ್‌ಗೆ ಕಳುಹಿಸಿದರು.
ಕುಸಿತ ಬೆಂಗಳೂರು ತಂಡಕ್ಕೆ ಆಸೆಯಾದ ಎಲ್‌ಆರ್ ಚೇತನ್‌ಗೆ ಮತ್ತೊಂದು ಕಡೆಯಿಂದ ಉಳಿದ ಬ್ಯಾಟರ್‌ಗಳ ಸಾಥ್ ಬರಲಿಲ್ಲ. ಚೇತನ್ 32 ಎಸೆತಗಳಲ್ಲಿ 51 ರನ್ ಗಳಿಸಿ ತಮ್ಮ ಹೋರಾಟ ನಿಲ್ಲಿಸಿದರು. ಮೈಸೂರು ಬೌಲರ್‌ಗಳು ಬಿಗಿ ಬೌಲಿಂಗ್ ದಾಳಿ ನಡೆಸಿದರು. ವಿದ್ಯಾಧರ್ ಪಾಟಿಲ್ 3 ವಿಕೆಟ್ ಪಡೆದರೆ, ಕೃಷ್ಣಪ್ಪ ಗೌತಮ್2 ವಿಕೆಟ್‌ಗಳನ್ನು ಉರುಳಿಸಿದರು.