Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೋಪಿಂಗ್ ನಿಯಮ ಉಲ್ಲಂಘನೆ ಆರೋಪ: ಟೀಮ್ ಇಂಡಿಯಾದ ಇಬ್ಬರು ಆಟಗಾರರಿಗೆ NADA ನೋಟಿಸ್

ಟೀಮ್ ಇಂಡಿಯಾದ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್ ಹಾಗೂ ಸ್ಫೋಟಕ ಮಹಿಳಾ ತಂಡದ ಪ್ಲೇಯರ್‌ ಶಫಾಲಿ ವರ್ಮಾ ಅವರಿಗೆ ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ನೋಟಿಸ್ ಜಾರಿ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಸುದ್ದಿ ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಶಾಕ್‌ ನೀಡಿದೆ. ಈ ಇಬ್ಬರೂ ಆಟಗಾರರು ಕಳೆದ ವರ್ಷ ನಡೆಸಿದ ಡೋಪಿಂಗ್‌ ಪರೀಕ್ಷೆಯಲ್ಲಿ ಭಾಗವಹಿಸದ ಆರೋಪ ಹೊಂದಿದ್ದಾರೆ.

ಈ ಇಬ್ಬರೂ ಆಟಗಾರರು ನಾಡಾದ ನೋಂದಾಯಿತ ಪರೀಕ್ಷಾ ಪೂಲ್ (ಆರ್‌ಟಿಪಿ) ನ ಭಾಗವಾಗಿದ್ದಾರೆ. ಈ ಪರೀಕ್ಷೆಗೆ ಸೇರಿದ ಆಟಗಾರರು, ಮೊದಲೇ ತಮ್ಮ ಸ್ಥಳದ ಬಗ್ಗೆ ಮಾಹಿತಿಯನ್ನು ನಾಡಾಗೆ ನೀಡಬೇಕು. ಅಲ್ಲದೆ ನಿಗದಿತ ಪಡಿಸಿದ ಸಮಯದಲ್ಲಿ ಪರೀಕ್ಷೆಗೆ ಹಾಜರಿರಬೇಕು. ಯಶಸ್ವಿ ಹಾಗೂ ಶಫಾಲಿ ಪರೀಕ್ಷೆಗೆ ಭಾಗವಹಿಸಲು ಸ್ಪಷ್ಟ ಮಾಹಿತಿ ನೀಡದ ಕಾರಣ ಈ ಇಬ್ಬರಿಗೆ ನಾಡಾ ನೋಟಿಸ್‌‌ ಜಾರಿ ಮಾಡಿದೆ. ಸಂಬಂಧ ಪಟ್ಟ ಆಟಗಾರರಿಗೆ ನೋಟಿಸ್‌ ನೀಡಲಾಗಿದ್ದು, ಈ ಬಗ್ಗೆ ಬಿಸಿಸಿಐ ಹಾಗೂ ಐಸಿಸಿ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿವೆ.

NADA

ಈ ಬಗ್ಗೆ ಬಿಸಿಸಿಐ ಸಹ ಧೃಡಪಡಿಸಿದೆ. ಆಟಗಾರರು ಪರೀಕ್ಷೆ ತಪ್ಪಿಸಿಕೊಂಡ ಬಗ್ಗೆ ನಾಡಾದಿಂದ ನಮಗೆ ಮಾಹಿತಿ ಬಂದಿದೆ. ಈ ಘಟನೆಯ ಬಗ್ಗೆ ನಾವು ವಿಚಾರಣೆ ನಡೆಸುತ್ತಿದ್ದೇವೆ. ಅಲ್ಲದೆ ಇಂತಹ ಕ್ರಮಗಳನ್ನು ಭವಿಷ್ಯದಲ್ಲಿ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಮರಳಿರುವ ಸಂದರ್ಭದಲ್ಲಿ ಎಲ್ಲ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದು ಬಿಸಿಸಿಐ ಮೂಲಗಳು ಖಚಿತ ಪಡಿಸಿವೆ.

ನಾಡಾದ ನೋಂದಾಯಿತ ಪರೀಕ್ಷಾ ಪೂಲ್ (ಆರ್‌ಟಿಪಿ) ನಲ್ಲಿ 13 ಭಾರತೀಯ ಕ್ರಿಕೆಟ್ ಆಟಗಾರರು ಸೇರಿದಂತೆ ಒಟ್ಟು ಭಾರತದ 348 ಕ್ರೀಡಾಪಟುಗಳು ಇದ್ದಾರೆ. ಇದೇ ಪಟ್ಟಿಗೆ ಇತ್ತೀಚಿಗೆ ಅಭಿಷೇಕ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಅವರನ್ನು ಸೇರಿಸಲಾಗಿದೆ. ಟೆಸ್ಟ್ ಮತ್ತು ಏಕದಿನ ನಾಯಕರಾದ ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್ಪ್ರಿತ್ ಬುಮ್ರಾ, ಕೆಎಲ್ ರಾಹುಲ್, ಅರ್ಶ್ದೀಪ್ ಸಿಂಗ್ ಮತ್ತು ತಿಲಕ್ ವರ್ಮಾ ಕೂಡ ಈ ಪರೀಕ್ಷೆಯ ಭಾಗವಾಗಿದ್ದಾರೆ.

NADA

ನಿಯಮ ಏನು ಹೇಳುತ್ತದೇ?

ನಾಡಾ ನಿಯಮದ ಪ್ರಕಾರ ಆಟಗಾರ 12 ತಿಂಗಳಲ್ಲಿ ಮೂರು ಬಾರಿ ಪರೀಕ್ಷೆಗೆ ಲಭ್ಯರಾಗದೇ ಇದ್ದಲ್ಲಿ ಇದನ್ನು ನಿಯಮದ ಉಲ್ಲಂಘನೆ ಎಂದು ಪರಿಗಣಿಸಿ, ಈ ಸಂದರ್ಭಗಳಲ್ಲಿ ಆಟಗಾರರಿಗೆ ನಿಷೇಧ ಸಹ ಹೇರಬಹುದು. ಯಶಸ್ವಿ ಹಾಗೂ ಶಫಾಲಿಗೆ ಮೊದಲ ನೋಟಿಸ್ ಆಗಿದ್ದರಿಂದ ನಿಷೇಧದ ಭೀತಿ ಸದ್ಯಕ್ಕಿಲ್ಲ.

Story first published: Saturday, May 9, 2026, 16:02 [IST]
Other articles published on May 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+