For Quick Alerts
ALLOW NOTIFICATIONS  
For Daily Alerts
 

NAM vs NEP: ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿ ವಿಶ್ವದಾಖಲೆ ಬರೆದ ನಮೀಬಿಯಾ ದಾಂಡಿಗ

ಮಂಗಳವಾರ, ಫೆಬ್ರವರಿ 27ರಂದು ನೇಪಾಳ ವಿರುದ್ಧದ ನಡೆದ ದ್ವಿಪಕ್ಷೀಯ ಪಂದ್ಯದಲ್ಲಿ ಟಿ20 ಅಂತಾರಾಷ್ಟ್ರೀಯ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವನ್ನು ಗಳಿಸುವ ಮೂಲಕ ನಮೀಬಿಯಾದ ಜಾನ್ ನಿಕೋಲ್ ಲಾಫ್ಟಿ-ಈಟನ್ ಇತಿಹಾಸ ಬರೆದಿದ್ದಾರೆ.

2023ರ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ 34 ಎಸೆತಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದ ನೇಪಾಳದ ಕುಶಾಲ್ ಮಲ್ಲಾ ಹೆಸರಿನಲ್ಲಿದ್ದ ಹಿಂದಿನ ದಾಖಲೆಯನ್ನು ಕೇವಲ 33 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಈ ಅಮೋಘ ಸಾಧನೆಯನ್ನು ಜಾನ್ ನಿಕೋಲ್ ಲಾಫ್ಟಿ-ಈಟನ್ ಮುರಿದಿದ್ದಾರೆ.

NAM vs NEP: Namibias Jan Nicol Loftie-Eaton Hits World Record Fastest Century in T20 Cricket

ನೇಪಾಳ ವಿರುದ್ಧದ ಪಂದ್ಯದ ವೇಳೆ ಈ ಗಮನಾರ್ಹ ಇನ್ನಿಂಗ್ಸ್ ಬಂದಿದ್ದು, ಹಿಂದಿನ ವೇಗದ ಶತಕವೀರ ಕುಶಾಲ್ ಮಲ್ಲಾ ಸ್ವತಃ ಮೈದಾನದಲ್ಲಿ ಹಾಜರಿದ್ದಂತೆ ವಿಶ್ವದಾಖಲೆ ಶತಕ ಮೂಡಿಬಂದಿದೆ ಮತ್ತು ಆತನ ಎದುರಲ್ಲೇ ಅವರ ದಾಖಲೆಯನ್ನು ಮೀರಿಸಿತು.

22ರ ಹರೆಯದ ಜಾನ್ ನಿಕೋಲ್ ಲಾಫ್ಟಿ-ಈಟನ್ ನೇಪಾಳ ವಿರುದ್ಧದ ಟಿ20 ಪಂದ್ಯದಲ್ಲಿ 36 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಸೇರಿದಂತೆ 101 ರನ್ ಸಿಡಿಸಿದರು. ಯುವ ಎಡಗೈ ದಾಂಡಿಗ ತನ್ನ ಇನ್ನಿಂಗ್ಸ್ ಅನ್ನು 280.56ರ ಸ್ಟ್ರೈಕ್ ರೇಟ್‌ನೊಂದಿಗೆ ಮುಕ್ತಾಯಗೊಳಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 206 ರನ್‌ಗಳನ್ನು ಕಲೆ ಹಾಕಲು ಲಾಫ್ಟಿ-ಈಟನ್ ದಾಖಲೆಯ ಶತಕ ಸಹಾಯ ಮಾಡಿತು.

ಆರಂಭಿಕರಾದ ಮೈಕಲ್ ವ್ಯಾನ್ ಲಿಂಗೆನ್ 19 ಎಸೆತಗಳಲ್ಲಿ 20 ರನ್ ಮತ್ತು ಮಲನ್ ಕ್ರುಗರ್ 48 ಎಸೆತಗಳಲ್ಲಿ ಅಜೇಯ 59 ರನ್‌ ಗಳಿಸಿ ಮೊದಲ ವಿಕೆಟ್‌ಗೆ ಆರು ಓವರ್‌ಗಳಲ್ಲಿ 36 ರನ್‌ಗಳ ಕೊಡುಗೆಯೊಂದಿಗೆ ನಮೀಬಿಯಾ ಉತ್ತಮ ಆರಂಭವನ್ನು ಪಡೆಯಿತು.

ಕರಣ್ ಕೆಸಿ ಬೌಲಿಂಗ್‌ನಲ್ಲಿ ವ್ಯಾನ್ ಲಿಂಗನ್ ಅವರು ಔಟಾದರು ಮತ್ತು ರೋಹಿತ್ ಪೌಡೆಲ್ ಅವರು 11 ರನ್ ಗಳಿಸಿ ಆಡುತ್ತಿದ್ದ ಜೆಪಿ ಕೋಟ್ಜೆ ಮತ್ತು 5 ರನ್ ಗಳಿಸಿದ ಜಾನ್ ಫ್ರಿಲಿಂಕ್ ವಿಕೆಟ್ ಪಡೆದರು.

NAM vs NEP: Namibias Jan Nicol Loftie-Eaton Hits World Record Fastest Century in T20 Cricket

ನಮೀಬಿಯಾ 62 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ, ಜಾನ್ ನಿಕೋಲ್ ಲಾಫ್ಟಿ-ಈಟನ್ ಅವರು ಮಲನ್ ಕ್ರುಗರ್ ಜೊತೆ ಸೇರಿಕೊಂಡರು ಮತ್ತು ಇಬ್ಬರೂ ನಾಲ್ಕನೇ ವಿಕೆಟ್‌ಗೆ 135 ರನ್‌ಗಳ ಜೊತೆಯಾಟ ನಿರ್ಮಿಸಿರು.

ನಮೀಬಿಯಾದ ಅಂತಿಮ ಓವರ್‌ನಲ್ಲಿ ಅಬಿನಾಶ್ ಬೋಹರಾ ಅವರ ಬೌಲಿಂಗ್‌ನಲ್ಲಿ ಗುಲ್ಸನ್ ಝಾ ಅವರಿಗೆ ಕ್ಯಾಚ್ ನೀಡಿ ಜಾನ್ ನಿಕೋಲ್ ಲಾಫ್ಟಿ-ಈಟನ್ ಪೆವಿಲಿಯನ್ ಸೇರಿದರು.

ವಿಸ್ಮಯಕಾರಿಯಾಗಿ, ಮಂಗಳವಾರ ಜಾನ್ ನಿಕೋಲ್ ಲಾಫ್ಟಿ-ಈಟನ್ ಅವರ ವಿಶ್ವದಾಖಲೆಯ ವೇಗದ ಶತಕದ ಮೊದಲು, ಅವರು ಕಳಪೆ ಟಿ20 ಬ್ಯಾಟಿಂಗ್ ದಾಖಲೆಯನ್ನು ಹೊಂದಿದ್ದರು. ಲಾಫ್ಟಿ-ಈಟನ್ ಆಡಿದ 32 ಪಂದ್ಯಗಳಲ್ಲಿ 10.70ರ ಸರಾಸರಿ ಹೊಂದಿದ್ದರು ಮತ್ತು 100.55ರ ಸ್ಟ್ರೈಕ್ ರೇಟ್‌ನಲ್ಲಿ 182 ರನ್ ಗಳಿಸಿದರು.

ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕಗಳು

ನೇಪಾಳ ವಿರುದ್ಧ ಶತಕ ಬಾರಿಸಿದ ನಂತರ ಜಾನ್ ನಿಕೋಲ್ ಲಾಫ್ಟಿ-ಈಟನ್ ಇದೀಗ ವೇಗದ ಟಿ20 ಶತಕದೊಂದಿಗೆ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕುಶಾಲ್ ಮಲ್ಲಾ 34 ಎಸೆತಗಳಲ್ಲಿ ಟಿ20 ಶತಕದೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್, ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಜೆಕ್ ಗಣರಾಜ್ಯದ ಸುದೇಶ್ ವಿಕ್ರಮಶೇಖರ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮೂವರೂ ಬ್ಯಾಟರ್‌ಗಳು 35 ಎಸೆತಗಳಲ್ಲಿ ಟಿ20 ಶತಕಗಳನ್ನು ಬಾರಿಸಿದ್ದಾರೆ. ಅಕ್ಟೋಬರ್ 2017ರಲ್ಲಿ ಪಾಚೆಫ್‌ಸ್ಟ್ರೂಮ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಡೇವಿಡ್ ಮಿಲ್ಲರ್ 36 ಎಸೆತಗಳಿಂದ ಅಜೇಯ 101 ರನ್ ಬಾರಿಸಿದಾಗ ಈ ಸಾಧನೆ ಮಾಡಿದ್ದರು.

ಡಿಸೆಂಬರ್ 2017ರಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 43 ಎಸೆತಗಳಲ್ಲಿ 12 ಬೌಂಡರಿ ಮತ್ತು 10 ಸಿಕ್ಸರ್ ಸೇರಿದಂತೆ 118 ರನ್ ಗಳಿಸಿದಾಗ ವೇಗದ ಟಿ20 ಶತಕ ಬಾರಿಸಿದ್ದರು. ಇನ್ನು ಆಗಸ್ಟ್ 2019ರಲ್ಲಿ ಇಲ್ಫೊವ್ ಕೌಂಟಿಯಲ್ಲಿ ನಡೆದ ಕಾಂಟಿನೆಂಟಲ್ ಕಪ್‌ನಲ್ಲಿ ಜೆಕ್ ಗಣರಾಜ್ಯದ ಸುದೇಶ್ ವಿಕ್ರಮಶೇಖರ ಅವರು ಟರ್ಕಿ ವಿರುದ್ಧ 36 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿದ್ದರು.

Story first published: Tuesday, February 27, 2024, 20:27 [IST]
Other articles published on Feb 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+