ಭಾರತೀಯ ಅಭಿಮಾನಿಗಳಿಗೆ ಮೆಸ್ಸಿ ಭಾವನಾತ್ವಕ ಪೋಸ್ಟ್
ವಿಶ್ವದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಗೋಟ್ ಟೂರ್ ಆಫ್ ಇಂಡಿಯಾ ಮುಕ್ತಾಯವಾಗಿದೆ. ಡಿಸೆಂಬರ್ 13 ರಂದು ಕೋಲ್ಕತ್ತಾದಿಂದ ಆರಂಭವಾದ ಮೆಸ್ಸಿ ಪ್ರವಾಸ ಭಾರತದ ನಾಲ್ಕು ನಗರಗಳಲ್ಲಿ ನಡೆಯಿತು. ಮೆಸ್ಸಿ ಪ್ರವಾಸ 16 ರಂದು ವಂಟಾರಾದಲ್ಲಿ ಮುಕ್ತಾಯವಾಯಿತು. ಈ ವೇಳೆ ನೆಚ್ಚಿನ ಫುಟ್ಬಾಲ್ ತಾರೆಯನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾರಿ ಜನಸಂದಣಿ, ಅವ್ಯವಸ್ಥೆ ಪ್ರವಾಸಕ್ಕೆ ಕಪ್ಪು ಚುಕ್ಕೆ ಆಯಿತು. ಇದರ ಹೊರತಾಗಿ ಮೆಸ್ಸಿ ಪ್ರವಾಸವನ್ನು ಅಚ್ಚು ಕಟ್ಟಾಗಿ ಆಯೋಜಿಸಲಾಗಿತ್ತು. ಇದೇ ವೇಳೆ ಭಾರತೀಯ ಅಭಿಮಾನಿಗಳು ನೀಡಿದ ಪ್ರೀತಿಗೆ ಫುಟ್ಬಾಲ್ ದಿಗ್ಗಜ ಮೆಸ್ಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾರತದ ಭೇಟಿಯನ್ನು ನೆನಪಿಸಿಕೊಂಡಿರುವ ಮೆಸ್ಸಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಭಾವನಾತ್ವಕ ಸಂದೇಶ ರವಾನಿಸಿದ್ದಾರೆ. "ನಮಸ್ತೆ ಇಂಡಿಯಾ! ದೆಹಲಿ, ಮುಂಬೈ, ಹೈದರಾಬಾದ್, ಕೋಲ್ಕತ್ತಾ ಪ್ರವಾಸದ ಕ್ಷಣಗಳು ಸ್ಮರಣೀಯ. ನೀವು ನೀಡಿದ ಸ್ವಾಗತ, ಆತಿಥ್ಯ ಹಾಗೂ ಪ್ರವಾಸದುದ್ದಕ್ಕೂ ನೀಡಿದ ಪ್ರೀತಿಗೆ ಧನ್ಯವಾದಗಳು ಎಂದರು. ಇದೇ ವೇಳೆ ಭಾರತದಲ್ಲಿ ಫುಟ್ಬಾಲ್ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದ್ದಾರೆ.
ಭಾರತದಲ್ಲಿ ಇಷ್ಟೊಂದು ಪ್ರೀತಿ ಪಡೆದಿದ್ದು ಅದ್ಭುತ. ಈ ಪ್ರೀತಿ ತಮಗೆ ಸಿಗಲಿದೆ ಎಂಬ ವಿಶ್ವಾಸವಿತ್ತು. ಅಭಿಮಾನಿಗಳ ಪ್ರೀತಿ ಸ್ವೀಕರಿಸುವುದು ಉತ್ತಮ ಅನುಭವ ಎಂದಿದ್ದಾರೆ. ನಾವು ಭಾರತೀಯ ಅಭಿಮಾನಿಗಳು ನೀಡಿದ ಪ್ರೀತಿಯನ್ನು ಕೊಂಡೊಯ್ಯುತ್ತೇವೆ. ಒಂದು ಪಂದ್ಯವನ್ನು ಆಡಲು ಆಗಲಿ ಅಥವಾ ಭೇಟಿಗಾಗಿ ಬರುವ ಆಶಯವನ್ನು ಈ ಮೊದಲು ಮೆಸ್ಸಿ ಮಾಡಿದ ಪೋಸ್ಟ್‌ನಲ್ಲಿ ಬಹಿರಂಗ ಪಡಿಸಿದ್ದರು.
ಮೆಸ್ಸಿ ಭಾರತದ ಭೇಟಿ ಭಾರತದಲ್ಲಿ ಫುಟ್ಬಾಲ್‌ನ ಜನಪ್ರಿಯತೆ ಮತ್ತು ನಿರೀಕ್ಷೆಗಳಿಗೆ ಹೊಸ ಭರವಸೆ ನೀಡಿತು. ಇದೇ ವೇಳೆ ಹಲವು ಯುವ ಆಟಗಾರರು ಫುಟ್ಬಾಲ್ ಆಟದತ್ತ ಚಿತ್ತ ಹರಿಸಲು ಮೆಸ್ಸಿ ಭೇಟಿ ಸಹಾಯಕವಾಗಬಹುದು ಎಂದು ನಿರೀಕ್ಷಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications