Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಂಡದ ಹೆಸರು ಬದಲಾವಣೆಯಾಗಿರುವುದರಿಂದ ನಮ್ಮ ತಂಡಕ್ಕೆ ಒಳಿತಾಗಲಿದೆ: ಕೆಎಲ್ ರಾಹುಲ್

Name change will bring us good fortune, says KL Rahul

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹೊಸ ಹೆಸರಿನೊಂದಿಗೆ ಕಣಕ್ಕಿಳಿಯಲಿದೆ. ಐಪಿಎಲ್ ಹರಾಜು ಪ್ರಕ್ರಿಯೆಯ ಒಂದು ದಿನ ಮುನ್ನ ಪಂಜಾಬ್ ಮೂಲದ ಫ್ರಾಂಚೈಸಿ ತನ್ನ ಹೊಸ ಲಾಂಛನವನ್ನು ಬಿಡುಗಡೆಗೊಳಿಸಿತು.

ಹೆಸರು ಬದಲಾವಣೆ ಮಾಡಿಕೊಂಡು ಪಂಜಾಬ್ ಕಿಂಗ್ಸ್ ಆಗಿ ಬದಲಾಗಿರುವ ತಂಡದ ನಾಯಕ ಕೆಎಲ್ ರಾಹುಲ್ ತಂಡದ ಹೆಸರು ಬದಲಾವಣೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಂಡದ ಹೆಸರು ಬದಲಾವಣೆಯಾಗಿರುವುದರಿಂದಾಗಿ ತಂಡಕ್ಕೆ ಒಳಿತಾಗಲಿದೆ ಎಂಬ ಭರವಸೆಯನ್ನು ರಾಹುಲ್ ವ್ಯಕ್ಯಪಡಿಸಿದ್ದಾರೆ.

ತಂಡದ ಹೊಸ ಹೆಸರು ನಮ್ಮ ತಂಡವನ್ನು ಮತ್ತಷ್ಟು ಒಗ್ಗಟ್ಟಾಗಿರುವಂತೆ ಮಾಡಲಿದೆ ಎಂದು ಕೆಎಲ್ ರಾಹುಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನಗೆ ಕಿಂಗ್ಸ್ XI ಪಂಜಾಬ್ ಎಂಬ ಹೆಸರು ಇಷ್ಟ, ಆದರೆ ತಂಡದಲ್ಲಿ 11ಕ್ಕಿಂತ ಹೆಚ್ಚಿನ ಆಟಗಾರರಿದ್ದಾರೆ ಎಂದು ಪಂಜಾಬ್ ಕಿಂಗ್ಸ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಅವರು ಹೇಳಿದ್ದಾರೆ.

"ನಾವು ಒಂದು ಕುಟುಂಬದಂತೆಯೇ ಇರಬೇಕು. ಒಂದೇ ಕುಟಂಬದಂತೆ ಭಾವನೆಯನ್ನು ಹೊಂದಿರಬೇಕು. ಎಲ್ಲರೂ ಒಂದೇ ತಂಡ ಎಂಬ ಭಾವನೆ ಇರಬೇಕು. ತಂಡದ ಹೆಸರು ಬದಲಾವಣೆಯಾಗಿರುವುದು ತಂಡಕ್ಕೆ ಒಳಿತನ್ನು ಮಾಡಲಿದೆ ಎಂಬ ಭರವಸೆಯನ್ನು ನಾನು ಹೊಂದಿದ್ದೇನೆ" ಎಂದಿದ್ದಾರೆ ಕೆಎಲ್ ರಾಹುಲ್.

ಇನ್ನು ಇದೇ ಸಂದರ್ಭದಲ್ಲಿ ಹಿರಿಯ ಆಟಗಾರ ಕ್ರಿಸ್ ಗೇಲ್ ಕೂಡ ಹೊಸ ಹೆಸರಿಗೆ ಸಂತಸವನ್ನು ವ್ಯಕ್ತಪಡಿಸಿದರು. "ನನಗೆ ಸಂಪೂರ್ಣವಾಗಿ ಇಷ್ಟವಾಗಿದೆ. ಕೆಲವು ಬಾರಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ತುಂಬಾ ಒಳ್ಳೆಯದು" ಎಂದಿದ್ದಾರೆ ಕ್ರಿಸ್ ಗೇಲ್.

Story first published: Thursday, February 18, 2021, 15:52 [IST]
Other articles published on Feb 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+