ಚಿಯರ್ ಲೀಡರ್ಸ್‌ಗಳಿಂದ ಚಂಚಲಗೊಳ್ಳುವ ಆಟಗಾರ ಯಾರು? ಕಠಿಣ ಪ್ರಶ್ನೆಗೆ ರೈನಾ ಉತ್ತರ

ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಇತ್ತೀಚೆಗೆ ನಡೆದ ಐಪಿಎಲ್‌ನಿಂದ ಅಂತಿಮ ಕ್ಷಣದಲ್ಲಿ ಹೊರನಡೆದರು. ಕೌಟುಂಬಿಕ ಕಾರಣಗಳಿಂದಾಗಿ ಈ ನಿರ್ಧಾರವನ್ನು ತೆಗದುಕೊಂಡಿದ್ದರು. ಸುರೇಶ್ ರೈನಾ. ಈಗ ಅವರು ತಮ್ಮ ಪತ್ನಿಯ ಜೊತೆಗೆ ಖಾಸಗೀ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು.
ಕಪಿಲ್ ಶರ್ಮಾ ಶೋನಲ್ಲಿ ಪಾಲ್ಗೊಂಡಿದ್ದ ಸುರೇಶ್ ರೈನಾ ಹಾಗೂ ಪ್ರೀಯಾಂಕಾ ರೈನಾ ಉತ್ತಮ ಸಮಯ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್ ರೈನಾಗೆ ಕೆಲ ಕಠಿಣ ಪ್ರಶ್ನೆಗಳು ಎದುರಾಗಿದ್ದವು. ಇದಕ್ಕೆ ಸುರೇಶ್ ರೈನಾ ಜಾಣತನದ ಉತ್ತರವನ್ನು ನೀಡಿದ್ದಾರೆ.
ಕಪಿಲ್ ಶರ್ಮಾ ಶೋನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಅರ್ಚನಾ ಪುರಾನ್ ಸಿಂಗ್ ವಿವಾದಾತ್ಮಕವಾದ ಪ್ರಶ್ನೆಯನ್ನು ಮುಂದಿಟ್ಟರು. ಕ್ರಿಕೆಟ್ ಆಡುತ್ತಿರುವ ಸಂದರ್ಭದಲ್ಲಿ ಚಿಯರ್ ಲೀಡರ್‌ಗಳಿಂದ ಚಂಚಲಗೊಲ್ಳುವ ಆಟಗಾರ ಯಾರು ಎಂಬ ಪ್ರಶ್ನೆ ಅದಾಗಿತ್ತು.
ಈ ಪ್ರಶ್ನೆಗೆ ಸುರೇಶ್ ರೈನಾ ಬುದ್ದಿವಂತಿಕೆಯಿಂದ ಉತ್ತರವನ್ನು ನೀಡಿದರು. "ಆಟಗಾರರು ಚೀಯರ್‌ಲೀಡರ್‌ಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅವರು ಪ್ರೇಕ್ಷಕರಿಗಾಗಿ ಮಾತ್ರವೇ ನೃತ್ಯವನ್ನು ಮಾಡುತ್ತಾರೆ. ಆಟಗಾರರು ಬೌಂಡರಿ ಅಥವಾ ಸಿಕ್ಸರ್‌ಗಳನ್ನು ಬಾರಿಸಿದ ಸಂದರ್ಭದಲ್ಲಿ ಟಿವಿಯಲ್ಲಿ ಬರುವ ಸಂದರ್ಭದಲ್ಲಿ ಮಾತ್ರವೇ ಚಿಯರ್ ಲೀಡರ್‌ಗಳನ್ನು ನೋಡಲು ಸಾಧ್ಯವಿದೆ" ಎಂದು ರೈನಾ ಉತ್ತರಿಸಿದರು.
ಬಳಿಕ ಕಪಿಲ್ ಶರ್ಮಾ ತಮಾಷೆಯಾಗಿ ಸುರೇಶ್ ರೈನಾ ಅವರ ಪತ್ನಿಗೆ ಆಟಗಾರರ ಪತ್ನಿಯರು ಜೊತೆಯಾಗಿ ಪಂದ್ಯವನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಪತಿ ಶೂನ್ಯಕ್ಕೆ ಓಟಾದಾಗ ಆಟಗಾರನ ಪತ್ನಿಯ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಪ್ರಶ್ನಿಸಿದರು. ಜೊತೆಗೆ ಪತಿ ಔಟಾದ ಬಳಿಕ ಪತ್ನಿ ಶಾಪಿಂಗ್‌ಗೆ ತೆರಳುತ್ತಾರಾ? ಎಂದು ತಮಾಷೆಯಾಗಿ ಕೇಳಿದರು. ಅದಕ್ಕೆ ಪ್ರಿಯಾಂಕಾ ರೈನಾ "ಖಂಡಿತಾ ಇಲ್ಲ, ನಾವು ತಂಡವನ್ನು ಬೆಂಬಲಿಸಲೇಬೇಕು"ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications