For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೆ ನಮೀಬಿಯಾ ತಂಡ ಪ್ರಕಟ: ಭಾರತ ವಿರುದ್ಧ ಫೆ.12 ರಂದು ಹೋರಾಟ

ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್‌ಗಾಗಿ ನಮೀಬಿಯಾ ತಂಡವನ್ನು ಪ್ರಕಟಿಸಲಾಗಿದೆ. ನಾಲ್ಕನೇ ಟಿ20 ವಿಶ್ವಕಪ್ ಆಡುತ್ತಿದೆ. ಈ ವಿಶ್ವಕಪ್‌ಗೆ ನಮೀಬಿಯಾ ತಂಡವನ್ನು ಪ್ರಕಟಿಸಿದ್ದು, 30 ವರ್ಷದ ಅನುಭವಿ ಆಲ್‌ರೌಂಡರ್ ಗೆರ್ಹಾರ್ಡ್ ಎರಾಸ್ಮಸ್ ಅವರಿಗೆ ವಹಿಸಲಾಗಿದೆ. ನಾಯಕ ಗೆರ್ಹಾರ್ಡ್ ಎರಾಸ್ಮಸ್ ತಮ್ಮ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್‌ ಮೂಲಕ ತಂಡಕ್ಕೆ ಆಧಾರವಾಗಬಲ್ಲರು.

ಟಿ20 ವಿಶ್ವಕಪ್ ತಂಡದಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಈ ತಂಡಗಳನ್ನು ಒಟ್ಟು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಲೀಗ್ ಹಂತದಲ್ಲಿ ಎಲ್ಲ ತಂಡಗಳು ತಲಾ 4 ಪಂದ್ಯಗಳನ್ನು ಆಡಲಿವೆ. ಅರ್ಹತಾ ಸುತ್ತಿನಲ್ಲಿ ನಮೀಬಿಯಾ ಒಂದೇ ಒಂದು ಪಂದ್ಯವನ್ನು ಸೋಲದೇ ಅಮೋಘ ಪ್ರದರ್ಶನ ನೀಡಿದೆ. ನಮೀಬಿಯಾ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ, ನೆದರ್‌ಲ್ಯಾಂಡ್‌ ತಂಡಗಳು ಸ್ಥಾನ ಪಡೆದಿವೆ.

Namibia Announces T20 World Cup Squad Gerhard Erasmus to Lead the Charge Against India

ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ನಮೀಬಿಯಾ ಕಠಿಣ ಸವಾಲು ಎದುರಿಸಲಿವೆ. ನಮೀಬಿಯಾ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 10 ರಂದು ನೆದರ್‌ಲ್ಯಾಂಡ್‌ ವಿರುದ್ಧ ಆಡಲಿದೆ. ಫೆಬ್ರವರಿ 12 ರಂದು ಭಾರತದ ವಿರುದ್ಧದ ಎರಡನೇ ಪಂದ್ಯವನ್ನು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಲಿದೆ. ನಮೀಬಿಯಾದ ಲೀಗ್ ಪಂದ್ಯದ ಮೂರನೇ ಪಂದ್ಯವನ್ನು ಫೆಬ್ರವರಿ 15 ಯುಎಸ್ಎ ವಿರುದ್ಧ ಮತ್ತು ಫೆಬ್ರವರಿ 18 ರಂದು ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧ ಕಾದಾಟ ನಡೆಸಲಿದೆ.

ಹೇಗಿದೆ ನಮೀಬಿಯಾ ತಂಡ?

ವಿಶೇಷವಾಗಿ ಆಲ್‌ರೌಂಡರ್‌ಗಳ ದಂಡೇ ಇರುವ ಈ ತಂಡವು ದೊಡ್ಡ ತಂಡಗಳಿಗೆ ಶಾಕ್ ನೀಡುವ ಸಾಮರ್ಥ್ಯ ಹೊಂದಿದೆ. ಕಳೆದ ಆವೃತ್ತಿಗಳಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಗಳ ವಿರುದ್ಧ ನಮೀಬಿಯಾ ಕೆಚ್ಚೆದೆಯ ಆಟದ ಪ್ರದರ್ಶಿಸಿದೆ. ತಂಡದ ಪ್ರಮುಖ ವೇಗಿಗಳಾದ ರುಬೆನ್ ಟ್ರಂಪೆಲ್‌ಮನ್ ಮತ್ತು ಬೆನ್ ಶಿಕೊಂಗೊ ಅವರು ಹೊಸ ಚೆಂಡಿನ ಮೂಲಕ ಎದುರಾಳಿಗಳನ್ನು ಕಾಡಬಲ್ಲ ಕ್ಷಮತೆ ಹೊಂದಿದ್ದಾರೆ.

ಟಿ20 ವಿಶ್ವಕಪ್‌ಗೆ ಪ್ರಕಟಿ ನಮೀಬಿಯಾ ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ರುಬೆನ್ ಟ್ರಂಪೆಲ್‌ಮನ್, ಜೆಜೆ ಸ್ಮಿಟ್, ಜಾನ್ ಫ್ರೈಲಿಂಕ್, ಲಾರೆನ್ ಸ್ಟೀನ್‌ಕ್ಯಾಂಪ್, ಮಲನ್ ಕ್ರುಗರ್, ನಿಕೋಲ್ ಲಾಫ್ಟಿ-ಈಟನ್, ಜ್ಯಾಕ್ ಬ್ರಾಸೆಲ್, ಬೆನ್ ಶಿಕೊಂಗೊ, ಜೆಸ್ಸಿ ಬಾಲ್ಟ್, ಡೈಲನ್ ಲೀಚ್ಟರ್, ಡಬ್ಲ್ಯೂಪಿ ಮೈಬರ್ಗ್, ಮ್ಯಾಕ್ಸ್ ಹೆಂಗೊ.

Story first published: Saturday, January 3, 2026, 17:01 [IST]
Other articles published on Jan 3, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+