ನಮಿಬಿಯಾ ಕ್ರಿಕೆಟರ್ ಸಾವಿಗೆ ಮೆದುಳಿನ ಆಘಾತ ಕಾರಣ!
ಬೆಂಗಳೂರು, ನ.22: ಕ್ರಿಕೆಟ್ ಆಡುತ್ತಿದ್ದಾಗ ಕುಸಿದು ಬಿದ್ದು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಮೀಬಿಯದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರೇಮಂಡ್ ವ್ಯಾನ್ ಸ್ಕೂರ್ ಸಾವನ್ನಪ್ಪಿದ್ದಾರೆ. ರೇಮಂಡ್ ಅವರ ಸಾವಿಗೆ ಮೆದುಳಿನ ಅಘಾತವೇ ಕಾರಣ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.
ನ.15ರಂದು ನಮೀಬಿಯ ತಂಡದ 25ರ ಹರೆಯದ ರೇಮಂಡ್ ಸಿಎಸ್‌ಎ ಪ್ರಾವಿನ್ಸಿಯಲ್ ಒನ್ ಡೇ ಚಾಲೆಂಜ್ ಟೂರ್ನಿಯಲ್ಲಿ ಆಡುತ್ತಿದ್ದರು. ಫ್ರೀ ಸ್ಟೇಟ್ ವಿರುದ್ಧದ ಈ ಪಂದ್ಯದಲ್ಲಿ ಮೆದುಳಿನ ಹಠಾತ್ ಆಘಾತದಿಂದಾಗಿ ಆಸ್ಪತ್ರೆ ಸೇರಿದ್ದರು.

ಗೆಲುವಿಗೆ 241 ರನ್ ಗಳಿಸಬೇಕಿದ್ದ ನಮೀಬಿಯ ತಂಡ 42.5ನೇ ಓವರ್‌ನಲ್ಲಿ 5 ವಿಕೆಟ್ ನಷ್ಟದಲ್ಲಿ 225 ರನ್ ಮಾಡಿತ್ತು. 15 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ರೇಮಂಡ್ ಅವರು ದಿಢೀರನೆ ಕ್ರೀಸ್ ಬಳಿ ಕುಸಿದು ಬಿದ್ದರು. ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು. ಈ ಪಂದ್ಯದಲ್ಲಿ ನಮೀಬಿಯ ತಂಡ 5 ವಿಕೆಟ್‌ಗಳ ಜಯ ಗಳಿಸಿತ್ತು.
ರೇಮಂಡ್ ಅವರು 170 ಪ್ರಥಮ ದರ್ಜೆ ಪಂದ್ಯಗಳಲ್ಲಿ 5 ಶತಕ ಮತ್ತು 20 ಅರ್ಧಶತಕಗಳು ಸೇರಿದಂತೆ 4,303 ರನ್ ಗಳಿಸಿದ್ದಾರೆ. 157 ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಬಲಗೈ ಮಧ್ಯಮ ವೇಗದ ಬೌಲರ್ ಆಗಿರುವ ರೇಮಂಡ್ 28 ವಿಕೆಟ್ ಗಳಿಸಿದ್ದರು.
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Cricketer dies after suffering stroke
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications