
ಕೋಚ್ ಕೊಡುಗೆ ಸ್ಮರಿಸಿದ ನಮೀಬಿಯಾ ನಾಯಕ
ಮುಂದುವರಿದು ಮಾತನಾಡಿದ ಅವರು "ಈ ಟೂರ್ನಿಯಲ್ಲಿ ಮುಂದುವರಿಯಬೇಕಾದರೆ ನಾವು ಇನ್ನು ಕೂಡ ಸಾಕಷ್ಟು ಪರಿಶ್ರಮ ಪಡಬೇಕಿದೆ. ಆದರೆ ಖಂಡಿತವಾಗಿಯೂ ಇದು ನಮ್ಮ ಪಾಲಿಗೆ ಐತಿಹಾಸಿಕವಾದ ದಿನ" ಎಂದಿದ್ದಾರೆ. ಇನ್ನು ಈ ಗೆಲುವಿನಲ್ಲಿ ತಂಡದ ಕೋಚ್ ಪೆರಿ ಡಿ ಬ್ರೂನ್ ಅವರ ಪರಿಶ್ರಮ ದೊಡ್ಡದಾಗಿದೆ ಎಂದು ಎರಾಸ್ಮಸ್ ಕೋಚ್‌ಗೆ ಗೆಲುವಿನ ಶ್ರೇಯಸ್ಸು ನೀಡಿದ್ದಾರೆ.
ಮೊದಲಿಗೆ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ನಮೀಬಿಯಾ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು. ಸವಾಲಿನ ಮೊತ್ತ ಪೇರಿಸಿದ ನಮೀಬಿಯಾ ತಂಡ ಬಳಿಕ ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಇದರ ಪರಿಣಾಮವಾಗಿ ಶ್ರೀಲಂಕಾ ತಂಡವನ್ನು 108 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ನಮೀಬಿಯಾ ಯಶಸ್ವಿಯಾಗಿದ್ದು ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಈ ಭಾರಿಯ ವಿಶ್ವಕಪ್‌ನಲ್ಲಿಯೂ ಮಿಂಚುವ ವಿಶ್ವಾಸ ಮೂಡಿಸಿದೆ ನಮೀಬಿಯಾ ತಂಡ.

ಭರ್ಜರಿ ಆಟ ಪ್ರದರ್ಶಿಸಿದ ನಮೀಬಿಯಾ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ನಮೀಬಿಯಾ ತಂಡದ ಆರಂಭ ಕಳಪೆಯಾಗಿತ್ತು. ಆದರೆ ಕೆಳ ಮಧ್ಯಮ ಕ್ರಮಾಂಕದ ಆಟಗಾರರಿಂದ ಬಂದ ಅಧ್ಭುತ ಪ್ರದರ್ಶನದ ಕಾರಣದಿಂದಾಗಿ ಶ್ರೀಲಂಕಾ ವಿರುದ್ಧ ಸವಾಲಿನ ಗುರಿ ನಿಗದಿಪಡಿಸುವಲ್ಲಿ ನಮೀಬಿಯಾ ಯಶಸ್ವಿಯಾಗಿತ್ತು. ಜಾನ್ ಫ್ರಿಲಿಂಕ್ 28 ಎಸೆತಗಳಲ್ಲಿ 44 ರನ್ ಸಿಡಿಸಿ ಮಿಂಚಿದರೆ ಸ್ಮಿತ್ 16 ಎಸೆತಗಳಲ್ಲಿ 31 ರನ್ ಸಿಡಿಸಿ ಮಿಂಚಿದ್ದರು. ಈ ಮೂಲಕ ನಮೀಬಿಯಾ ತಂಡ 7 ವಿಕೆಟ್ ಕಳೆದುಕೊಂಡು 163 ಗಳಿಸುವಲ್ಲಿ ಯಶಸ್ವಿಯಾಗಿತ್ತು
ಈ ಪಂದ್ಯದಲ್ಲಿ ನಮೀಬಿಯಾ ತಂಡದ ಬೌಲಿಂಗ್ ವಿಭಾಗ ನೀಡಿದ ಸಂಘಟಿತ ಪ್ರದರ್ಶನದ ಕಾರಣದಿಂದಾಗಿ ಶ್ರೀಲಂಕಾ ಭಾರೀ ಆಘಾತ ಅನುಭವಿಸಿದೆ. ಪ್ರತಿಭಾವಂತ ಆಟಗಾರರ ಪಡೆಯನ್ನೇ ಹೊಂದಿದ್ದರೂ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಕೇವಲ 108 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗವನ್ನು ಅನುಭವಿಸಿದೆ. ನಾಯಕ ದಸುನ್ ಶನಕಾ ಬಾರಿಸಿದ 29 ರನ್ ಶ್ರೀಲಂಕಾ ಪರ ದಾಖಲಾದ ಹೈಯೆಸ್ಟ್ ಸ್ಕೋರ್ ಎನಿಸಿದೆ. ಈ ಮೂಲಕ ಶ್ರೀಲಂಕಾ ತಂಡ 55 ರನ್‌ಗಳ ಬೃಹತ್ ಅಂತರದಿಂದ ನಮೀಬಿಯಾ ಪಡೆಗೆ ಶರಣಾಗಿದೆ.

ಇತ್ತಂಡಗಳ ಆಡುವ ಬಳಗ
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ, ಮಹೇಶ್ ತೀಕ್ಷಣ
ಬೆಂಚ್: ಪ್ರಮೋದ್ ಮದುಶನ್, ಜೆಫ್ರಿ ವಾಂಡರ್ಸೆ, ಲಹಿರು ಕುಮಾರ, ಚರಿತ್ ಅಸಲಂಕಾ
ನಮೀಬಿಯಾ: ಸ್ಟೀಫನ್ ಬಾರ್ಡ್, ಡೇವಿಡ್ ವೈಸ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜಾನ್ ನಿಕೋಲ್ ಲಾಫ್ಟಿ-ಈಟನ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ಝೇನ್ ಗ್ರೀನ್ (ವಿಕೆಟ್ ಕೀಪರ್), ದಿವಾನ್ ಲಾ ಕಾಕ್, ಮೈಕೆಲ್ ವ್ಯಾನ್ ಲಿಂಗೆನ್, ಬರ್ನಾರ್ಡ್ ಸ್ಕೋಲ್ಟ್ಜ್, ಬೆನ್ ಶಿಕೊಂಗೊ
ಬೆಂಚ್: ಪಿಕ್ಕಿ ಯಾ ಫ್ರಾನ್ಸ್, ರೂಬೆನ್ ಟ್ರಂಪೆಲ್ಮನ್, ತಂಗೇನಿ ಲುಂಗಮೆನಿ, ಲೋಹಾಂಡ್ರೆ ಲೌರೆನ್ಸ್, ಕಾರ್ಲ್ ಬಿರ್ಕೆನ್‌ಸ್ಟಾಕ್


Click it and Unblock the Notifications












