ನಮ್ಮೂರ ಪ್ರತಿಭೆ: ಮತ್ತೊಂದು ಚಿನ್ನ ಗೆದ್ದು ಕಾಮನ್‌ವೆಲ್ತ್ ಅರ್ಹತೆ ಗಿಟ್ಟಿಸಿದ ಐಶ್ವರ್ಯ ಬಾಬು

ಇತ್ತೀಚೆಗಷ್ಟೆ ಚೆನ್ನೈನ ಜವಹರಲಾಲ್ ಕ್ರೀಡಾಂಗಣದಲ್ಲಿ ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ಮೂಲದ ಐಶ್ವರ್ಯ ಬಾಬು ಚಿನ್ನದ ಪದಕಕ್ಕೆ ಮುತ್ತಿಟ್ಟು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಲಾಂಗ್ ಜಂಪ್ ವಿಭಾಗದಲ್ಲಿ ಭಾಗವಹಿಸಿದ್ದ ಐಶ್ವರ್ಯ ಬಾಬು 6.73 ಮೀಟರ್ ಉದ್ದಕ್ಕೆ ಜಿಗಿದು ಚಿನ್ನದ ಪದಕ ಗೆದ್ದು, ಅತಿ ಉದ್ದಕ್ಕೆ ಜಿಗಿದ ಭಾರತದ ಎರಡನೇ ಮಹಿಳಾ ಕ್ರೀಡಾಪಟು ಎಂಬ ದಾಖಲೆ ಬರೆದರು. ಈ ಹಿಂದೆ 6.83 ಮೀಟರ್ ಜಿಗಿದಿದ್ದ ಅಂಜು ಬಾಬಿ ಜಾರ್ಜ್ ಅತಿ ಉದ್ದಕ್ಕೆ ಲಾಂಗ್ ಜಂಪ್ ಜಿಗಿದ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.
ಇನ್ನು ಲಾಂಗ್ ಜಂಪ್‌ನಲ್ಲಿ 6.73 ಮೀಟರ್ ಜಿಗಿದ ನಂತರ ತ್ರಿಪಲ್ ಲಾಂಗ್ ಜಂಪ್‌ನಲ್ಲಿ ಭಾಗವಹಿಸಿದ ಐಶ್ವರ್ಯ ಬಾಬು 14.14 ಮೀಟರ್ ಜಿಗಿದು ದಶಕದ ಹಿಂದೆ ನಿರ್ಮಾಣವಾಗಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. 5 ಅಡಿ ಎತ್ತರದ 24 ವರ್ಷದ ಈ ಪ್ರತಿಭೆ ಅಂಜು ಬಾಬಿ ಜಾರ್ಜ್ ನಿರ್ಮಿಸಿರುವ ಅತಿ ಉದ್ದದ ಜಿಗಿತದ ದಾಖಲೆಯನ್ನು ಮುರಿಯುವ ಗುರಿಯನ್ನು ಹೊಂದಿದ್ದಾರೆ ಹಾಗೂ ದಶಕದ ದಾಖಲೆ ಮುರಿದ ಇವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಇತರೆ ಕ್ರೀಡಾಪಟುಗಳು ಹಾಗೂ ಕೋಚ್‌ಗಳಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.

ಐಶ್ವರ್ಯ ಬಾಬು ಪ್ರಸ್ತುತ ವಿಶ್ವ ಶ್ರೇಯಾಂಕ ಪಟ್ಟಿ
ಮಹಿಳೆಯರ ಟ್ರಿಪಲ್ ಜಂಪ್ 47ನೇ ಸ್ಥಾನ 1119 ಅಂಕಗಳು
ಮಹಿಳೆಯರ ಲಾಂಗ್ ಜಂಪ್ 71ನೇ ಸ್ಥಾನ 1126 ಅಂಕಗಳು
ಮಹಿಳೆಯರ ಒಟ್ಟಾರೆ ಶ್ರೇಯಾಂಕ 934ನೇ ಸ್ಥಾನ 1176 ಅಂಕಗಳು

ದಶಕದ ಹಿಂದಿನ ದಾಖಲೆ ಮುರಿದ ಐಶ್ವರ್ಯ
ಮಯೂಖಾ ಜಾನಿ 2011ರಲ್ಲಿ ತ್ರಿಪಲ್ ಲಾಂಗ್ ಜಂಪ್‌ನಲ್ಲಿ 14.11ರಲ್ಲಿ ಮೀಟರ್ ಸಾಧನೆ ಮಾಡಿ ದಾಖಲೆ ನಿರ್ಮಿಸಿದ್ದರು. ಆದರೆ ಈ ಬಾರಿ 14.14 ಮೀಟರ್ ಜಿಗಿದ ಐಶ್ವರ್ಯ ಬಾಬು ಮಯೂಖಾ ಜಾನಿ ಅವರ ದಾಖಲೆಯನ್ನು ಬರೋಬ್ಬರಿ 11 ವರ್ಷದ ಬಳಿಕ ಮುರಿದು ಹಾಕಿದ್ದಾರೆ. ಈ ಬಾರಿ ಲಾಂಗ್ ಜಂಪ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿರುವ ಐಶ್ವರ್ಯ ಈ ಹಿಂದೆ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಪಾಲ್ಗೊಂಡು ತ್ರಿಪಲ್ ಜಂಪ್ ವಿಭಾಗದಲ್ಲಿ 13.94 ಮೀಟರ್ ಜಿಗಿಯುವ ಮೂಲಕ ಕಾಮನ್‌ವೆಲ್ತ್ ಅರ್ಹತೆಯನ್ನು ಗಿಟ್ಟಿಸಿಕೊಂಡರು.

ಭಾಗವಹಿಸಿರುವ ಪ್ರಮುಖ ಕ್ರೀಡಾಕೂಟಗಳು
ಚೆನ್ನೈ ಇಂಡಿಯಾ ಓಪನ್ ಚಾಂಪಿಯನ್‌ಶಿಪ್ - 25 ಸೆಪ್ಟೆಂಬರ್ 2017 - 3ನೇ ಸ್ಥಾನ
ಮೂಡಬಿದರಿ ಇಂಟರ್ ಯೂನಿವರ್ಸಿಟಿ ಚಾಂಪಿಯನ್‌ಶಿಪ್ - 24 ನವೆಂಬರ್ 2018 - 3ನೇ ಸ್ಥಾನ
ಇಂಡಿಯನ್ ಯೂನಿವರ್ಸಿಟಿ ಚಾಂಪಿಯನ್‌ಶಿಪ್ - 2 ಜನವರಿ 2020 - ಪ್ರಥಮ ಸ್ಥಾನ
ಇಂಡಿಯನ್ ಯೂನಿವರ್ಸಿಟಿ ಚಾಂಪಿಯನ್‌ಶಿಪ್ - 3 ಜನವರಿ 2020 - ದ್ವಿತೀಯ ಸ್ಥಾನ
ನ್ಯಾಷನಲ್ ಓಪನ್ ಚಾಂಪಿಯನ್‌ಶಿಪ್ - 17 ಸೆಪ್ಟೆಂಬರ್ 2021 - ಪ್ರಥಮ ಸ್ಥಾನ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications