Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ನಾಯಕತ್ವದಲ್ಲಿ ನಟರಾಜನ್ ಚೆನ್ನಾಗಿ ಆಡ್ತಾರೆ: ಕರ್ಸನ್ ಘವ್ರಿ

Natarajan can do well under Virats captaincy, says Karsan Ghavri

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಕೊನೇಯ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಟಿ ನಟರಾಜನ್ 2 ವಿಕೆಟ್‌ನೊಂದಿಗೆ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ ಭಾರತ ತಂಡ 13 ರನ್‌ಗಳ ಜಯ ಗಳಿಸಿತ್ತು. ಮುಂಬರಲಿರುವ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲೂ ನಟರಾಜ್ ಆಡಲಿದ್ದಾರೆ.

ಚೆನ್ನಾಗಿ ಯಾರ್ಕರ್ ಬೌಲಿಂಗ್ ಮಾಡುವ ಟಿ ನಟರಾಜನ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿ ಉತ್ತಮ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಟರಾಜನ್ ಇನ್ನೂ ಚೆನ್ನಾಗಿ ಪ್ರದರ್ಶನ ನೀಡುತ್ತಾರೆ ಎಂದು ಭಾರತದ ಮಾಜಿ ಆಟಗಾರ ಕರ್ಸನ್ ಘವ್ರಿ ಹೇಳಿದ್ದಾರೆ.

29ರ ಹರೆಯದ ತಮಿಳುನಾಡಿನ ವೇಗಿಯನ್ನು ಶ್ಲಾಘಿಸಿ ಮಾತನಾಡಿರುವ ಕರ್ಸನ್, 'ಭಾರತ ತಂಡದಲ್ಲಿ ಟಿ ನಟರಾಜನ್‌ಗೆ ಉಜ್ವಲ ಭವಿಷ್ಯವಿದೆ. ಅವರು ಒಳ್ಳೆಯ ಪ್ರತಿಭೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಟರಾಜನ್ ಇನ್ನೂ ಚೆನ್ನಾಗಿ ಆಡುತ್ತಾರೆ,' ಎಂದಿದ್ದಾರೆ.

ಐಪಿಎಲ್‌ನಲ್ಲಿ ನಟರಾಜನ್ 22 ಇನ್ನಿಂಗ್ಸ್‌ಗಳಲ್ಲಿ 18 ವಿಕೆಟ್‌ ಪಡೆದಿದ್ದಾರೆ. ಭಾರತ-ಆಸ್ಟ್ರೇಲಿಯಾ ಟಿ20ಐ ಮೊದಲ ಪಂದ್ಯ ಡಿಸೆಂಬರ್ 4ಕ್ಕೆ 1.40 pmಗೆ ಆರಂಭಗೊಳ್ಳಲಿದೆ. ಕ್ಯಾನ್ಬೆರಾದ ಮನುಕಾ ಓವಲ್ ಸ್ಟೇಡಿಯಂನಲ್ಲಿ ಟಿ20ಐ ಸರಣಿ ಆರಂಭಗೊಳ್ಳಲಿದೆ.

Story first published: Thursday, December 3, 2020, 21:56 [IST]
Other articles published on Dec 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+