ಕುಟುಂಬದ ಮುದ್ದಾದ ಫೋಟೋ ಹಂಚಿಕೊಂಡು ಮಗುವಿನ ಹೆಸರು ಘೋಷಿಸಿದ ನಟರಾಜನ್

ಟೀಮ್ ಇಂಡಿಯಾದ ವೇಗಿ ಟಿ ನಟರಾಜನ್ ಟ್ವಿಟ್ಟರ್‌ನಲ್ಲಿ ತಮ್ಮ ಕುಟುಂಬದ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಟಿ ನಟರಾಜನ್ ತಮ್ಮ ಪುತ್ರಿಗೆ ಹನ್ವಿಕಾ ಎಂದು ನಾಮಕರಣ ಮಾಡಿರುವುದನ್ನು ನಟರಾಜನ್ ಘೋಷಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಿ ನಟರಾಜನ್ ತಮ್ಮ ಪುತ್ರಿಯ ಜನನದ ಸಂದರ್ಭದಲ್ಲಿ ಟಿ ನಟರಾಜನ್ ಕುಟುಂಬದಿಂದ ದೂರವಿದ್ದರು. ಆರಂಭದಲ್ಲಿ ಐಪಿಎಲ್‌ಗಾಗಿ ದುಬೈಗೆ ತೆರಳಿದ್ದ ಟಿ ನಟರಾಜನ್ ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಸೆಪ್ಟೆಂಬರ್ ತಿಂಗಳಿನಿಂದ ಜನವರಿವರೆಗೆ ಟಿ ನಟರಾಜನ್ ಕುಟುಂಬದಿಮದ ದೂರವಿದ್ದರು.
ಟ್ವಿಟ್ಟರ್‌ನಲ್ಲಿ ನಟರಾಜನ್, " ನಮ್ಮ ಪುಟ್ಟ ದೇವತೆ ಹನ್ವಿಕಾ, ನೀನು ನಮ್ಮ ಬದುಕಿನ ಸುಂದರವಾದ ಉಡುಗೊರೆ. ನಮ್ಮ ಜೀವನ ಮತ್ತಷ್ಟು ಸುಂದರವಾಗಲು ನೀನು ಕಾರಣ. ನಮ್ಮನ್ನು ಹೆತ್ತವರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ" ಎಂದು ಟಿ ನಟರಾಜನ್ ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿ ತವರಿಗೆ ಬಂದ ಟಿ ನಟರಾಜನ್ ಸದ್ಯ ಕುಟುಂಬದ ಜೊತೆಗೆ ತವರಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆಯದಿರುವ ನಟರಾಜನ್ ಈ ಅವಕಾಶವನ್ನು ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ಮುಂದೆ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ನಟರಾಜನ್ ಪಾಳ್ಗೊಳ್ಳಲಿದ್ದು ಮಿಂಚುವ ಭರವಸೆಯಲ್ಲಿದ್ದಾರೆ.
ಕಳೆದ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಕಣಕ್ಕಿಳಿದು ಅದ್ಭುರ ಪ್ರದರ್ಶನ ನೀಡಿದ ನಟರಾಜನ್ ಎಲ್ಲರ ಗಮನಸೆಳೆದಿದ್ದರು. ಈ ಶ್ರೇಷ್ಠ ಪ್ರದರ್ಶನ ಟೀಮ್ ಇಂಡಿಯಾ ಆಯ್ಕೆಗಾರರ ಗಮನವನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿತ್ತು. ಹೀಗಾಗಿ ಭಾರತ ತಂಡಕ್ಕೆ ತಕ್ಷಣವೇ ಅವಕಾಶವನ್ನು ಗಿಟ್ಟಿಸಿಕೊಂಡರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications