Nathan Lyon: 'ಇವರೇ ನನ್ನ ಬೌಲಿಂಗ್ ಗುರು'; ಟೀಮ್ ಇಂಡಿಯಾ ಸ್ಪಿನ್ನರ್ ಹೆಸರಿಸಿದ ನಾಥನ್ ಲಿಯಾನ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೋಲ್ಟೇಜ್ ಟೆಸ್ಟ್ ಸರಣಿ ನೋಡಲು ಕಾದು ಕುಳಿದಿದ್ದಾರೆ. ಉಭಯ ತಂಡಗಳ ನಡುವೆ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯಲಿದೆ. ಈ ಟೆಸ್ಟ್ ಸರಣಿಯ ಮೊದಲ ಪಂದ್ಯವು ನವೆಂಬರ್ 22 ರಿಂದ (ಶುಕ್ರವಾರ) ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 7.50ಕ್ಕೆ ಆರಂಭವಾಗಲಿದೆ.
ಇದಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಸ್ಟಾರ್ ಸ್ಪಿನ್ನರ್ ನಾಥನ್ ಲಿಯಾನ್ ತಮ್ಮ ನೆಚ್ಚಿನ ಟೀಮ್ ಇಂಡಿಯಾ ಆಟಗಾರನ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್‌ರಂತಹ ವಿಶ್ವದ ಅಗ್ರ ವೇಗದ ಬೌಲರ್‌ಗಳನ್ನು ಆಸ್ಟ್ರೇಲಿಯಾ ಹೊಂದಿದೆ. ಆದರೂ, ಭಾರತ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಕಳೆದ ಹತ್ತುಗಳಿಂದ ಗೆಲ್ಲಲು ಸಾಧ್ಯವಾಗಿಲ್ಲ.
ಜೊತೆಗೆ ಈ ಸ್ಟಾರ್ ವೇಗದ ಬೌಲರ್‌ಗಳು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಅತಿಹೆಚ್ಚು ವಿಕೆಟ್ ಪಡೆಯುವಲ್ಲಿ ಹಿಂದೆ ಉಳಿದಿದ್ದಾರೆ. ನಾಥನ್ ಲಿಯಾನ್ ಈ ದಾಖಲೆಯನ್ನು ಮಾಡುವಲ್ಲಿ ಮುಂದೆ ಇದ್ದಾರೆ. ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೂ ಮುನ್ನ ನಾಥನ್ ಲಿಯಾನ್ ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ತನ್ನ ಗುರು ಆಗಿದ್ದು, ಈ ಸಾಧನೆ ಮಾಡಲು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.
ನಾಥನ್ ಲಿಯಾನ್ ತನ್ನ ಬೌಲಿಂಗ್ ಗುರು ಎಂದಿರುವ ಟೀಮ್ ಇಂಡಿಯಾ ಆಟಗಾರರ ಬೇರೆ ಯಾರು ಅಲ್ಲ, ರವಿಚಂದ್ರನ್ ಅಶ್ವಿನ್. 2011-12 ರ ಬಾರ್ಡರ್-ಗವಾಸ್ಕರ್ ಸರಣಿಯಿಂದ ನಾಥನ್ ಲಿಯಾನ್ ಮತ್ತು ರವಿಚಂದ್ರನ್ ಅಶ್ವಿನ್ ನಡುವೆ ಪೈಪೋಟಿ ಪ್ರಾರಂಭವಾಯಿತು. ಭಾರತದ ದಿಗ್ಗಜ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 536 ವಿಕೆಟ್‌ಗಳನ್ನು ಪಡೆದಿದ್ದಾರೆ. ನಾಥನ್ ಲಿಯಾನ್ ಅವರು ಕೂಡ 530 ಟೆಸ್ಟ್ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರವಿಚಂದ್ರನ್ ಅಶ್ವಿನ್ ಮತ್ತು ನಾಥನ್ ಲಿಯಾನ್ ಇಬ್ಬರೂ ಯಾವಾಗಲೂ ಒಬ್ಬರನ್ನೊಬ್ಬರು ಮೀರಿಸುವ ಸ್ಪರ್ಧೆಯಲ್ಲಿದ್ದಾರೆ. ನವೆಂಬರ್ 22 ರಿಂದ ಪ್ರಾರಂಭವಾಗುವ 5 ಪಂದ್ಯಗಳ ಹೈ ಪ್ರೊಫೈಲ್ ಟೆಸ್ಟ್ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ಪೈಪೋಟಿ ನೀಡಲು ನಾಥನ್ ಲಿಯಾನ್ ಮತ್ತೊಮ್ಮೆ ಸಿದ್ಧರಾಗಿದ್ದಾರೆ.
ನಾಥನ್ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಥನ್ ಲಿಯಾನ್, 'ಆಶ್ (ರವಿಚಂದ್ರನ್ ಅಶ್ವಿನ್) ಒಬ್ಬ ಶ್ರೇಷ್ಠ ಬೌಲರ್. ನನ್ನ ಇಡೀ ವೃತ್ತಿಜೀವನದಲ್ಲಿ ನಾನು ಅವರೊಂದಿಗೆ ಸ್ಪರ್ಧಿಸಿದ್ದೇನೆ. ಆಶ್ ಅವರಿಂದ ನಾನು ಕೂಡ ಸಾಕಷ್ಟು ಕಲಿತಿದ್ದೇನೆ. ಅವರು ತುಂಬಾ ಸ್ಮಾರ್ಟ್ ಬೌಲರ್. ವಿಶ್ವದ ಅತ್ಯುತ್ತಮ ಬೌಲರ್‌ಗಳು ಇದನ್ನು ಮಾಡಲು ಸಮರ್ಥರಾಗಿದ್ದಾರೆ ಅಂದುಕೊಳ್ಳುತ್ತೇನೆ ಎಂದಿದ್ದಾರೆ.
ಬಹಳಷ್ಟು ಕಲಿಸಿದ್ದಾರೆ
ನಾಥನ್ ಲಿಯಾನ್ ಅವರು ಟೆಸ್ಟ್ ಸರಣಿ ಆಡಲು ಭಾರತಕ್ಕೆ ಬಂದಾಗಲೆಲ್ಲಾ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ಶೈಲಿ ನೋಡಿ ಸಾಕಷ್ಟು ಕಲಿತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಾಥನ್ ಲಿಯಾನ್, 'ಅಶ್ವಿನ್ ನನಗೆ ಸಾಕಷ್ಟು ಕಲಿಸಿದ್ದಾರೆ. ನೀವು ಸ್ಪರ್ಧಿಸುವ ಆಟಗಾರರು ನಿಮ್ಮ ಅತ್ಯುತ್ತಮ ತರಬೇತುದಾರರು ಅಂದುಕೊಳ್ಳುತ್ತೇನೆ. ನಾನು ಭಾರತಕ್ಕೆ ಭೇಟಿ ನೀಡಿದಾಗ ಅವರ ಅನೇಕ ವೀಡಿಯೊಗಳನ್ನು ವೀಕ್ಷಿಸಿದ್ದೇನೆ. ಅವರು ಆಸ್ಟ್ರೇಲಿಯಾದಲ್ಲಿ ಆಡುವ ರೀತಿ, ಅವರಿಂದ ನಾನು ಇನ್ನೇನು ಕಲಿಯಬಹುದು ಎಂದು ನಾನು ನೋಡುತ್ತಿದ್ದೇನೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications