Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆನಿಸ್‌ ಲಿಲ್ಲೀ ದಾಖಲೆ ಸರಿದೂಗಿದ ಆಫ್‌ ಸ್ಪಿನ್ನರ್‌ ನೇಥನ್‌ ಲಯಾನ್‌!

Nathan Lyon equals Dennis Lillee 2019

ಲಂಡನ್‌, ಆಗಸ್ಟ್‌ 16: ಆಸ್ಟ್ರೇಲಿಯಾ ತಂಡದ ಅನುಭವಿ ಆಫ್‌ ಸ್ಪಿನ್ನರ್‌ ನೇಥನ್‌ ಲಯಾನ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸೀಸ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದವರ ಪೈಕಿ ಮೂರನೇ ಸ್ಥಾನದಲ್ಲಿರುವ ಮಾಜಿ ವೇಗದ ಬೌಲರ್‌ ಡೆನಿಸ್‌ ಲಿಲ್ಲೀ (355 ವಿಕೆಟ್‌) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪ್ರಸಕ್ತ ಚಾಲ್ತಿಯಲ್ಲಿರುವ ಆ್ಯಷಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಗುರುವಾರ ಆಸೀಸ್‌ ಪರ 68ಕ್ಕೆ 3 ವಿಕೆಟ್‌ ಪಡೆದ ಲಯಾನ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಒಟ್ಟು ವಿಕೆಟ್‌ ಸಂಪಾದಬೆಯನ್ನು 355ಕ್ಕೆ ವಿಸ್ತರಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಇನ್ನೊಂದು ವಿಕೆಟ್‌ ಪಡೆದರೆ ಲಿಲ್ಲಿ ಅವರನ್ನು ಹಿಂದಿಕ್ಕಿ 3ನೇ ಸ್ಥಾನ ತಮ್ಮದಾಗಿಸಿಕೊಳ್ಳಲಿದ್ದಾರೆ.

ಇನ್ನು ಆಸ್ಟ್ರೇಲಿಯಾ ಪರ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್‌ ಪಡೆದವರ ಪೈಕಿ ವಿಶ್ವ ಶ್ರೇಷ್ಠ ಲೆಗ್‌ ಸ್ಪಿನ್ನರ್‌ ಶೇನ್‌ ವಾರ್ನ್‌ 708 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮಾಜಿ ವೇಗದ ಬೌಲರ್‌ ಗ್ಲೆನ್‌ ಮೆಗ್ರಾತ್‌ 563 ವಿಕೆಟ್‌ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

ಮಿಸ್ಬಾಗೆ ಪಾಕ್‌ ತಂಡದ ಪ್ರಧಾನ ಕೋಚ್‌ & ಮುಖ್ಯ ಆಯ್ಕೆದಾರನ ಹುದ್ದೆ

ಅಂದಹಾಗೆ ಲಯಾನ್‌ ಈ ಸಾಧನೆ ಮೆರೆಯಲು 88 ಪಂದ್ಯಗಳನ್ನು ತೆಗದುಕೊಂಡರೆ, 1984ರಲ್ಲಿ ವೃತ್ತಿ ಬದುಕಿನ ಕೊನೆ ಟೆಸ್ಟ್‌ ಪಂದ್ಯವನ್ನಾಡಿದ ಲಿಲ್ಲೀ ಕೇವಲ 70 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.

"ವಾರ್ನ್‌, ಮೆಗ್ರಾತ್, ಲಿಲ್ಲೀ ಅವರ ಸಾಲಿನಲ್ಲಿ ಗುರುತಿಸಿಕೊಳ್ಳುವುದು ನಿಜಕ್ಕೂ ಕಷ್ಟ. ನನ್ನ ಪ್ರಕಾರ ಈ ಎಲ್ಲಾ ಆಟಗಾರರು ಆಸ್ಟ್ರೇಲಿಯಾ ಕ್ರಿಕೆಟ್‌ನ ದಂತಕತೆ. ನಾನು ಒಬ್ಬ ಸಾಮಾನ್ಯ ಆಫ್‌ ಸ್ಪಿನ್ನರ್‌, ಆಸ್ಟ್ರೇಲಿಯಾ ತಂಡ ಮತ್ತು ಆಸ್ಟ್ರೇಲಿಯಾ ಅಭಿಮಾನಿಗಳಿಗಾಗಿ ಹೋರಾಡುತ್ತಿದ್ದೇನೆ ಅಷ್ಟೇ," ಎಂದು ಈ ಸಾಧನೆ ಬಳಿಕ ಲಯಾನ್‌ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ.

ಲಯಾನ್‌ ಟೆಸ್ಟ್‌ ಕ್ರಿಕೆಟ್‌ ಸಾಧನೆ
88* ಪಂದ್ಯ
355* ವಿಕೆಟ್‌
8/50 ಶ್ರೇಷ್ಠ ಸಾಧನೆ (ಇನಿಂಗ್ಸ್‌ವೊಂದರಲ್ಲಿ)
13/154 ಶ್ರೇಷ್ಠ ಸಾಧನೆ (ಪಂದ್ಯವೊಂದರಲ್ಲಿ)
31.87 ಸರಾಸರಿ
3.02 ಎಕಾನಮಿ
13 ನಾಲ್ಕು ವಿಕೆಟ್‌ ಸಾಧನೆ
15 ಐದು ವಿಕೆಟ್‌ ಸಾದನೆ
02 ಹತ್ತು ವಿಕೆಟ್‌ ಸಾಧನೆ

1
44039

Story first published: Friday, August 16, 2019, 17:13 [IST]
Other articles published on Aug 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+