ಭಾರತೀಯರ ಸಹಿಯಿರುವ ಜೆರ್ಸಿಯ ಫೋಟೋ ಶೇರ್ ಮಾಡಿದ ಲಿಯಾನ್

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-1ರ ಜಯ ಸಾದಿಸಿ ಎರಡು ವಾರದ ಬಳಿಕ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಿಯಾನ್ ಭಾರತೀಯರಿಗೆ ಪ್ರೀತಿಯಿಂದ ಅಭಿನಂದಿಸಿದ್ದಾರೆ. ಜೊತೆಗೆ ಭಾರತೀಯರು ನೀಡಿದ ಆಟಗಾರರ ಸಹಿಯಿರುವ ಜೆರ್ಸಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಸಂದರ್ಭ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನೇಥನ್ ಲಿಯಾನ್ 100ನೇ ಟೆಸ್ಟ್‌ಕ್ಕಾಗಿ ಮೈದಾನಕ್ಕಿಳಿದಿದ್ದರು. ಇಲ್ಲೀವರೆಗೆ ಲಿಯಾನ್ ಟೆಸ್ಟ್‌ನಲ್ಲಿ ಒಟ್ಟಿಗೆ 399 ವಿಕೆಟ್ ಗಳಿಸಿದ್ದಾರೆ. ಗಬ್ಬಾದಲ್ಲಿ ಇನ್ನೊಂದು ಹೆಚ್ಚುವರಿ ವಿಕೆಟ್ ಲಭಿಸಿದ್ದರೂ ಲಿಯಾನ್ ಟೆಸ್ಟ್‌ನಲ್ಲಿ 400 ವಿಕೆಟ್‌ಗಳ ಮೈಲಿಗಲ್ಲು ಸ್ಥಾಪಿಸುತ್ತಿದ್ದರು.

ಆಸ್ಟ್ರೇಲಿಯಾ ಪರ 100+ ಟೆಸ್ಟ್ ಪಂದ್ಯಗಳನ್ನಾಡಿರುವ 13 ಆಟಗಾರರಲ್ಲಿ ಲಿಯಾನ್ ಕೂಡ ಒಬ್ಬರು. ಹೀಗಾಗಿ ಅಪರೂಪದ ಸಾಧನೆ ತೋರಿದ ಆಸೀಸ್ ಸ್ಪಿನ್ನರ್‌ಗೆ ಅಜಿಂಕ್ಯ ರಹಾನೆ ಪಡೆ ಎಲ್ಲಾ ಆಟಗಾರರ ಸಹಿಯಿರುವ ಭಾರತದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿತ್ತು.
ಭಾರತೀಯ ಆಟಗಾರರು ನೀಡಿರುವ ಜೆರ್ಸಿಯ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿರುವ ನೇಥನ್, 'ಟೆಸ್ಟ್ ಸರಣಿಯ ಜಯಕ್ಕೆ ಅಜಿಂಕ್ಯ ರಹಾನೆ ಮತ್ತು ಬಳಗಕ್ಕೆ ಅಭಿನಂದನೆಗಳು. ನಿಮ್ಮ ಕ್ರೀಡಾಸ್ಫೂರ್ತಿ, ಸಹಿ ಹಾಕಿದ ಟೀಮ್ ಇಂಡಿಯಾ ಜೆರ್ಸಿ ನೀಡಿ ತೋರಿದ ಪ್ರೀತಿಯ ನಡೆಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications