Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Nathan Lyon: ಮೆಗ್ರಾತ್‌ ದಾಖಲೆ ಮೀರಿದ ನಾಥನ್‌ ಲಿಯಾನ್‌

ಆಡಿಲೇಡ್‌: ಆಸ್ಟ್ರೇಲಿಯಾದ ದಿಗ್ಗಜ ವೇಗದ ಬೌಲರ್‌ ಗ್ಲೇನ್‌ ಮೆಗ್ರಾತ್‌ ಅವರ ದಾಖಲೆಯನ್ನು ಸ್ಪಿನ್ ಮಾಂತ್ರಿಕ ನಾಥನ್‌ ಲಿಯಾನ್‌ ಮೀರಿನಿಂತಿದ್ದಾರೆ. ಆಶಸ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಲಿಯಾನ್‌ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಎರಡನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗುರುವಾರ ನಡೆದ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನ್ನು 8 ವಿಕೆಟ್‌ಗೆ 326 ರನ್‌ಗಳಿಂದ ಮುಂದುವರೆಸಿ 371 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಮೊದಲು ಇನಿಂಗ್ಸ್‌ ಆರಂಭಿಸಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 213 ರನ್‌ ಸೇರಿಸಿದೆ. ನಾಯಕ ಬೆನ್‌ ಸ್ಟೋಕ್ಸ್‌ (ಅಜೇಯ 45), ಜೋಫ್ರಾ ಆರ್ಚರ್ (ಅಜೇಯ 30) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 158 ರನ್‌ಗಳ ಹಿನ್ನಡೆ ಅನುಭವಿಸುತ್ತಿದೆ.

Nathan Lyon Surpasses Glenn McGrath to Become Australia s Second-Highest Test Wicket-Taker

ಇಂಗ್ಲೆಂಡ್ ಮೊದಲ ಇನಿಂಗ್ಸ್‌ ಆರಂಭಿಸಿತು. ಪ್ರವಾಸಿ ತಂಡಕ್ಕೆ ಆರಂಭದಲ್ಲಿ ಪ್ಯಾಟ್‌ ಕಮಿನ್ಸ್‌ ಪೆಟ್ಟು ನೀಡಿದರು. ಇವರು ಜಾಕ್‌ ಕ್ರಾಲಿ ಅವರಿಗೆ ಖೆಡ್ಡಾ ತೋಡಿದರು. ಇನಿಂಗ್ಸ್‌ನ 10ನೇ ಓವರ್‌ ಬೌಲ್‌ ಮಾಡಿದ ನಾಥನ್‌ ಲಿಯಾನ್‌ ಇಂಗ್ಲೆಂಡ್ ತಂಡಕ್ಕೆ ಡಬಲ್ ಶಾಕ್‌ ನೀಡಿದರು. ಲಿಯಾನ್‌ ಎಸೆದ ಚೆಂಡನ್ನು ಒಲಿ ಪೋಪ್‌ ಮಿಡ್‌ ವಿಕೆಟ್‌ನತ್ತ ಫ್ಲಿಕ್‌ ಮಾಡಿದರು. ಆದರೆ ಅಲ್ಲಿದ್ದ ಜಾಸ್‌ ಇಂಗ್ಲಿಷ್‌ ಉತ್ತಮ ಕ್ಯಾಚ್‌ ಪಡೆದು, ಪೋಪ್‌ ಇನಿಂಗ್ಸ್‌ಗೆ ಬ್ರೇಕ್ ಹಾಕಿದರು.

ದಾಖಲೆ ಬರೆದ ಲಿಯಾನ್‌

10ನೇ ಓವರ್‌ನಲ್ಲಿ ಲಿಯಾನ್‌ ಆರಂಭಿಕ ಬೆನ್‌ ಡಕೆಟ್‌ ಅವರಿಗೆ ಖೆಡ್ಡ ತೋಡಿದರು. ಇವರು ಎಸೆದ ಆಫ್‌ ಸ್ಪಿನ್ ಎಸೆತವನ್ನು ಅರಿಯುವಲ್ಲಿ ವಿಫಲರಾದ ಡಕೆಟ್‌ ಬೋಲ್ಡ್ ಆದರು. ಈ ವಿಕೆಟ್‌ ಪಡೆಯುತ್ತಲೇ ಲಿಯಾನ್ ಹೊಸ ಇತಿಹಾಸ ಸೃಷ್ಟಿಸಿದರು. ಈ ಮೂಲಕ ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದರು. ಲೆಜೆಂಡರಿ ಬೌಲರ್ ಗ್ಲೆನ್ ಮೆಗ್ರಾತ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಿದ 141 ಪಂದ್ಯಗಳಲ್ಲಿ 564 ವಿಕೆಟ್‌ ಕಬಳಿಸಿದ್ದಾರೆ. ಈಗ ನಾಥನ್ ಲಿಯಾನ್‌ ಈ ಸಾಧನೆ ಮೀರಿ ನಿಂತಿದ್ದಾರೆ.

ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ದಿಗ್ಗಜ ಲೆಗ್‌ ಸ್ಪಿನ್ ಬೌಲರ್‌ ಶೇನ್ ವಾರ್ನ್‌ ಹೆಸರಿನಲ್ಲಿದೆ. ಇವರು 145 ಟೆಸ್ಟ್‌ ಪಂದ್ಯಗಳಲ್ಲಿ 708 ವಿಕೆಟ್‌ ಕಬಳಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ದಿಗ್ಗಜ ಬೌಲರ್‌ ಮುತ್ತಯ್ಯ ಮುರಳೀಧರನ್ ಅಗ್ರ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚಿನ ವಿಕೆಟ್‌ಗಳು

ಕ್ರಮ ಸಂಖ್ಯೆ ಆಟಗಾರ ಟೆಸ್ಟ್ ವಿಕೆಟ್‌ಗಳು
1 ಮುತ್ತಯ್ಯ ಮುರಳೀಧರನ್ 800
2 ಶೇನ್ ವಾರ್ನ್ 708
3 ಜೇಮ್ಸ್ ಆಂಡರ್ಸನ್ 704
4 ಅನಿಲ್ ಕುಂಬ್ಳೆ 619
5 ಸ್ಟುವರ್ಟ್ ಬ್ರಾಡ್ 604
6 ನಾಥನ್ ಲಿಯಾನ್ 564*
7 ಗ್ಲೆನ್ ಮೆಕ್‌ಗ್ರಾತ್ 563

Story first published: Thursday, December 18, 2025, 13:01 [IST]
Other articles published on Dec 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+