Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs PAK ಚಾಂಪಿಯನ್ಸ್ ಟ್ರೋಫಿ 2025: ಟೀಮ್ ಇಂಡಿಯಾಕ್ಕೆ ಉತ್ಸಾಹ ತುಂಬಿದ ಮಾಜಿ ಆಟಗಾರರು

ದುಬೈನಲ್ಲಿ ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯವು ಭಾರೀ ಕುತೂಹಲ ಮೂಡಿಸಿದೆ. 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ. ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಇಂತಹ ಸಂದರ್ಭದಲ್ಲಿ ಚಾಂಪಿಯನ್ ಟ್ರೋಫಿ 2025ರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಹೀಗಾಗಿ ಟೀಮ್ ಇಂಡಿಯಾಕ್ಕೆ ಮಾಜಿ ಬ್ಯಾಟರ್ ನವಜೋತ್ ಸಿಂಗ್ ಸಿಧು ಉತ್ಸಾಹ ತುಂಬಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಇಲ್ಲಿಯವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ 5 ಪಂದ್ಯಗಳು ನಡೆದಿದೆ. ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದರೆ, ಭಾರತ 2 ಪಂದ್ಯಗಳಲ್ಲಿ ಗೆದ್ದಿದೆ. ಹೀಗಾಗಿ ಒತ್ತಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ತಂಡಕ್ಕೆ ಬ್ಲಾಕ್‌ಬಸ್ಟರ್ ಪಂದ್ಯವನ್ನು ಗೆಲ್ಲುವ ಅವಕಾಶವಿರುತ್ತದೆ ಎಂದು ಟೀಮ್ ಇಂಡಿಯಾ ಪರ ನವಜೋತ್ ಸಿಂಗ್ ಸಿಧು ಬ್ಯಾಟ್ ಬೀಸಿದ್ದಾರೆ.

Navjot Singh Sidhu cheered for Team India before the match against Pakistan

ಸಂದರ್ಶನವೊಂದರಲ್ಲಿ ಮಾತನಾಡಿರುವ ನವಜೋತ್ ಸಿಂಗ್ ಸಿಧು, 'ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅತ್ಯಂತ ದೊಡ್ಡ ಹೋರಾಟ. ಇದಕ್ಕಿಂತ ದೊಡ್ಡದು ಇನ್ನೊಂದಿಲ್ಲ. ಎಲ್ಲರನ್ನೂ ಒಟ್ಟಿಗೆ ಇಡುವುದು ಆ ಒತ್ತಡ ಅಂತ ನನಗನ್ನಿಸುತ್ತದೆ. 150 ಕೋಟಿ ಜನರು ನೀವು ಗೆಲ್ಲುತ್ತೀರಿ ಎಂದು ನಿರೀಕ್ಷಿಸುತ್ತಾರೆ. ಆದರೆ ಅವರು ಎಂದಿಗೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಸೇಡಿನ ಸಂಸ್ಕೃತಿ ಇದೆ. ಈ ಆಟವನ್ನು ಕೈಗಳ ನಡುವೆ ಆಡುವುದಕ್ಕಿಂತ ಕಿವಿಗಳ ನಡುವೆ ಹೆಚ್ಚು ಆಡಲಾಗುತ್ತದೆ. ಇದು ಮಾನಸಿಕ ಯುದ್ಧ. ಬಹಳಷ್ಟು ನರ ಶಕ್ತಿಯು ಸುತ್ತಲೂ ತೇಲುತ್ತಿದೆ. ಆದರೆ ಅದನ್ನು ಸಕಾರಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸುವ ತಂಡವು ಗೆಲ್ಲುತ್ತದೆ ಎಂದು ಟೀಮ್ ಇಂಡಿಯಾಕ್ಕೆ ಬೆಂಬಲ ನೀಡಿದ್ದಾರೆ.

ಯುವಿ ಹೇಳಿದ್ದೇನು?

ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಕೂಡ ಈ ಬ್ಲಾಕ್‌ಬಸ್ಟರ್ ಪಂದ್ಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2003ರಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ತಮ್ಮ ಮೊದಲ ಅನುಭವವನ್ನು ಯುವಿ ನೆನಪಿಸಿಕೊಂಡಿದ್ದಾರೆ. 'ನಾನು ಆಡಿದ ಅತ್ಯುತ್ತಮ ಏಕದಿನ ಪಂದ್ಯಗಳಲ್ಲಿ ಇದು ಒಂದು. ಆ ಪಂದ್ಯದಲ್ಲಿ ನನ್ನ ಸ್ನೇಹಿತ ಶಾಹಿದ್ ಅಫ್ರಿದಿ ನನ್ನನ್ನು ಸ್ವಾಗತಿಸಿದರು. ಆಗ ನನಗೆ ಭಾರತ-ಪಾಕಿಸ್ತಾನ ಪೈಪೋಟಿ ಎಂದರೆ ಏನು ಎಂದು ನಿಜವಾಗಿಯೂ ಅರ್ಥವಾಯಿತು. ಟಿವಿಯಲ್ಲಿ ನೋಡುವುದು ಒಂದು ವಿಷಯ, ಆದರೆ ಮೈದಾನದಲ್ಲಿ ಆಡುವುದು ಸಂಪೂರ್ಣವಾಗಿ ಭಿನ್ನವಾಗಿತ್ತು. ನನಗೆ ಅಗಾಧ ಒತ್ತಡ ನೆನಪಿದೆ, ಆದರೆ ಆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಭವಿಷ್ಯದಲ್ಲಿ ಉತ್ತಮ ಆಟಗಾರನಾಗುವ ವಿಶ್ವಾಸ ಸಿಕ್ಕಿತು ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯ ಯಾವಾಗಲೂ ಫೈನಲ್‌ನಂತೆ ಇರುತ್ತದೆ. ಅದು ಗುಂಪು ಪಂದ್ಯವಾಗಿರಬಹುದು, ಸೆಮಿಫೈನಲ್ ಆಗಿರಬಹುದು ಅಥವಾ ಚಾಂಪಿಯನ್‌ಶಿಪ್ ಆಗಿರಬಹುದು. ಪಂದ್ಯದಲ್ಲಿ ಒತ್ತಡ ತುಂಬಾ ಇದೆ. ನಾನು ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದಾಗ, ನಾವು ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದೆವು, ಆದರೆ ಅವರು ಫೈನಲ್‌ನಲ್ಲಿ ನಮ್ಮನ್ನು ಸೋಲಿಸಿದರು ಎಂದು ಯುವಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Story first published: Friday, February 21, 2025, 16:08 [IST]
Other articles published on Feb 21, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+