National Cricket Academy: ಎನ್‌ಸಿಎಸ್ ಮುಖ್ಯಸ್ಥರಾಗಿ ಮುಂದುವರೆದ ವಿವಿಎಸ್ ಲಕ್ಷ್ಮಣ್
ಆಗಸ್ಟ್ 16 ಶುಕ್ರವಾರ, ಭಾರತದ ದಿಗ್ಗಜ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಲಕ್ಷ್ಮಣ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ವಿವಿಎಸ್ ಲಕ್ಷ್ಮಣ್ ಅವರ ಅಧಿಕಾರಾವಧಿಯನ್ನು ಕನಿಷ್ಠ ಒಂದು ವರ್ಷ ವಿಸ್ತರಿಸಲಾಗಿದೆ.
ವಿವಿಎಸ್ ಲಕ್ಷ್ಮಣ್ ಅವರ ಮೂರು ವರ್ಷಗಳ ಒಪ್ಪಂದವು ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಇದಾದ ನಂತರ ಲಕ್ಷ್ಮಣ್ ಮುಂದಿನ ಒಂದು ವರ್ಷದವರಗೆ ಎನ್‌ಸಿಎ ಮುಖ್ಯಸ್ಥರಾಗಿ ಮುಂದುವರೆಯಲಿದ್ದಾರೆ.

ಲಕ್ಷ್ಮಣ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಫರ್ ಅನ್ನು ತಿರಸ್ಕರಿಸಿದ ಲಕ್ಷ್ಮಣ್ ಎನ್‌ಸಿಎ ಮುಖ್ಯಸ್ಥರಾಗಿ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸುವ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ. ಇವರೊಂದಿಗೆ ಅವರ ಸಹೋದ್ಯೋಗಿಗಳಾದ ಸಿತಾಂಶು ಕೊಟಕ್, ಸಾಯಿರಾಜ್ ಬಹುತುಲೆ ಮತ್ತು ಹೃಷಿಕೇಶ್ ಕಾನಿಟ್ಕರ್ ಅವರ ಸೇವಾವಧಿಯೂ ವಿಸ್ತರಣೆಯಾಗಲಿದೆ.
ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಬದಲಿಸಲು ವಿವಿಎಸ್ ಲಕ್ಷ್ಮಣ್ ಬಿಸಿಸಿಐನ ಮೊದಲ ಆಯ್ಕೆಯಾಗಿದ್ದರು. ಆದರೆ ಲಕ್ಷ್ಮಣ್ ಅವರು ತಂಡದೊಂದಿಗೆ ಹೆಚ್ಚು ಪ್ರಯಾಣಿಸಲು ಇಷ್ಟವಿಲ್ಲದ ಕಾರಣದಿಂದ ಹೆಡ್ ಕೋಚ್ ಸ್ಥಾನವನ್ನು ನಿರಾಕರಿಸಿದರು. ಹೀಗಾಗಿ ಅವರು ಎನ್‌ಸಿಎ ಮುಖ್ಯಸ್ಥರಾದರು.
ಹೊಸ ಎನ್‌ಸಿಎ
ಪ್ರಸ್ತುತ ಎನ್‌ಸಿಎ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಆದರೆ ಶೀಘ್ರದಲ್ಲೇ ಬೆಂಗಳೂರಿನ ಹೊರವಲಯದಲ್ಲಿ ದೊಡ್ಡ ಎನ್‌ಸಿಎ ಕ್ಯಾಂಪಸ್ ಉದ್ಘಾಟನೆಗೊಳ್ಳಲಿದೆ. 2022ರಲ್ಲಿ ಎನ್‌ಸಿಎಗೆ ಅಡಿಪಾಯವನ್ನು ಹಾಕಲಾಯಿತು.
ಹೊಸ ಎನ್‌ಸಿಎ ಮೂರು ವಿಶ್ವ ದರ್ಜೆಯ ಕ್ರೀಡಾ ಮೈದಾನಗಳು, 45 ಅಭ್ಯಾಸ ಪಿಚ್‌ಗಳು, ಒಳಾಂಗಣ ಕ್ರಿಕೆಟ್ ಪಿಚ್, ಒಲಿಂಪಿಕ್ ಗಾತ್ರದ ಈಜುಕೊಳ ಮತ್ತು ಅತ್ಯಾಧುನಿಕ ತರಬೇತಿ, ವಿಶ್ರಾಂತಿ ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳನ್ನು ಹೊಂದಿದೆ. ಈ ಹೊಸ ಅಕಾಡೆಮಿ ಮುಂದಿನ ವರ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications