IND vs BAN 2nd Test: ಒಂದೇ ಕೈಯಲ್ಲಿ ಕ್ಯಾಚ್ ಹಿಡಿದು ಗಮನ ಸೆಳೆದ ಸಿರಾಜ್, ರೋಹಿತ್: ವಿಡಿಯೋ ವೈರಲ್
ಕ್ರಿಕೆಟ್ ನಲ್ಲಿ ಕ್ಯಾಚ್‌ಸ ವಿನ್ ದಿ ಮ್ಯಾಚ್ ಎನ್ನುವ ಮಾತಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ನಾಲ್ಕನೇ ದಿನದಾಟದಲ್ಲಿ ಆತಿಥೇಯ ಆಟಗಾರರು ಸ್ಟನ್ನಿಂಗ್ ಕ್ಯಾಚ್ ಪಡೆದಿದ್ದಾರೆ. ಈ ಕ್ಯಾಚ್‌ಗಳನ್ನು ಒಮ್ಮೆ ನೋಡಿದರೆ ಪದೆ ಪದೇ ನೋಡಬೇಕು ಎನ್ನುವ ಹಾಗೆ ಇವೆ. ಈ ಕ್ಯಾಚ್‌ಗಳು ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಕಾನ್ಪುರ್‌ದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾ ನಡುವಣ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಸೋಮವಾರ ನಡೆಯುತ್ತಿದೆ. ಈ ಪಂದ್ಯದಲ್ಲಿ ಎರಡು ಹಾಗೂ ಮೂರನೇ ದಿನದಾಟ ಸಂಪೂರ್ಣ ರದ್ದಾಗಿತ್ತು. ಪರಿಣಾಮ ಸೋಮವಾ ಬಾಂಗ್ಲಾ ಮೊದಲ ಇನಿಂಗ್ಸ್ ಮುಂದುರೆಸಿತು. ಈ ವೇಳೆ ಭಾರತದ ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ ಕ್ಲಾಸಿಕ್ ಕ್ಯಾಚ್‌ಗಳನ್ನು ಪಡೆದು ಎಲ್ಲರ ಗಮನ ಸೆಳೆದರು.

ರೋಹಿತ್ ಶರ್ಮಾ ಕ್ಲಾಸಿಕ್ ಕ್ಯಾಚ್
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸೋಮವಾರ ಎಲ್ಲರ ಚಿತ್ತವನ್ನು ಕದ್ದರು. ಇವರು ಲಿಟನ್ ದಾಸ್ ಅವರನ್ನು ಔಟ್ ಮಾಡಲು ಹಿಡಿದ ಕ್ಯಾಚ್ ಸಖತ್ ವೈರಲ್ ಆಗುತ್ತಿದೆ. ಪಂದ್ಯದ 50ನೇ ಓವರ್‌ನ್ನು ಮೊಹಮ್ಮದ್ ಸಿರಾಜ್ ಮಾಡಲು ಮುಂದೆ ಬಂದರು. ಈ ಓವರ್‌ನ ನಾಲ್ಕನೇ ಎಸೆತವನ್ನು ಲಿಟನ್ ದಾಸ್ ಎದುರಿಸಲು ಮುಂದಾಗಿದ್ದರು. ಆಗ ಸಿರಾಜ್ ಆಫ್ ಸೈಡ್ ಆಚೆಗೆ ಚೆಂಡನ್ನು ಎಸೆದರು.
ಲಿಟನ್ ದಾಸ್ ಚೆಂಡು ತನ್ನ ರೆಡಾರ್‌ನಲ್ಲಿದೆ ಎಂದು ತಿಳಿದು ಬೌಂಡರಿ ಬಾರಿಸಲು ಮುಂದಾದರು. ಕ್ರೀಸ್‌ನಿಂದ ಹೊರ ಬಂದ ಲಿಟನ್ ಮಿಡ್ ಆಫ್ ಮೇಲಿನಿಂದ ಚೆಂಡನ್ನು ಬೌಂಡರಿ ಗೆರೆಯತ್ತ ನೂಕಲು ಸಿದ್ಧರಾದರು. ಇದೇ ವೇಳೆ ಅಲ್ಲಿಯೇ ಫೀಲ್ಡ್ ಮಾಡುತ್ತಿದ್ದ ರೋಹಿತ್ ಜಸ್ಟ್ ಜಂಪ್ ಮಾಡಿ ಬಲಗೈನಲ್ಲಿ ಸ್ಟನಿಂಗ್ ಕ್ಯಾಚ್ ಪಡೆದರು. ಈ ಕ್ಯಾಚ್ ಪಡೆದಿದ್ದನ್ನು ನೋಡಿದ ಲಿಟನ್ ದಾಸ್‌ಗೆ ನಂಬಲು ಅಸಾಧ್ಯವೇ ಆಗಲಿಲ್ಲ. ಈ ಕ್ಯಾಚ್ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿರಾಜ್ ಒನ್ ಹ್ಯಾಂಡ್ ಕ್ಯಾಚ್
ರೋಹಿತ್ ಶರ್ಮಾ ಹಿಡಿದ ಕ್ಯಾಚ್ ಸ್ಮೃತಿ ಪಟಿಲದಿಂದ ಮಾಸುವ ಮುನ್ನವೇ ವೇಗದ ಬೌಲರ್ ಸಿರಾಜ್ ಮನಮೋಹಕ ಕ್ಯಾಚ್ ಪಡೆದು ಅಭಿಮಾನಿಗಳ ಹೃದಯ ಗೆದ್ದರು. ಅಶ್ವಿನ್ ಇನಿಂಗ್ಸ್‌ನ 56ನೇ ಓವರ್ ಬೌಲ್ ಮಾಡಲು ಮುಂದಾದರು. ಈ ವೇಳೆ ಬಾಂಗ್ಲಾ ತಂಡದ ಭರವಸೆಯ ಬ್ಯಾಟರ್ ಶಕೀಬ್ ಅಲ್ ಹಸನ್ ಬ್ಯಾಟ್ ಮಾಡುತ್ತಿದ್ದರು. ಇದೇ ಓವರ್‌ನಲ್ಲಿ ಬೌಂಡರಿ ಬಾರಿಸಿ ಅಶ್ವಿನ್ ಮೇಲೆ ಒತ್ತಡ ಹೇರುವ ತಂತ್ರವನ್ನು ಶಕೀಬ್ ಅನುಸರಿಸಿದರು. ಆದರೆ ಅಶ್ವಿನ್ ತಮ್ಮ ಚಾಣಕ್ಯತನ ಪ್ರದರ್ಶಿಸಿದರು.
56ನೇ ಓವರ್‌ನ ಕೊನೆಯ ಎಸೆತದಲ್ಲಿ ಶಕೀಬ್ ಒನ್ ಹ್ಯಾಂಡ್ ಶಾಟ್ ಬಾರಿಸಿದರು. ಚೆಂಡು ಮಿಡ್ ಆಫ್ ಮೇಲೆ ಆಗಸದಲ್ಲಿ ಸಾಗಿತು. ಈ ಪ್ಲೇಸ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಹಿಮ್ಮುಖವಾಗಿ ಓಡಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದರು. ಚೆಂಡಿನ ಮೇಲಿನ ಕಣ್ಣನ್ನು ತೆಗೆಯದೇ ಓಡಿದ ಸಿರಾಜ್ ಒನ್ ಹ್ಯಾಂಡ್ ಕ್ಯಾಚ್ ಪಡೆದು ಅಬ್ಬರಿಸಿದರು. ಈ ಕ್ಯಾಚ್ ಸಹ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications