Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರಧಾನಿ ಮೋದಿ ಭೇಟಿಯಾದ ನೀರಜ್‌ ಚೋಪ್ರಾ

ಒಲಿಂಪಿಕ್ಸ್‌ನಲ್ಲಿ ಡಬಲ್‌ ಪದಕ ವಿಜೇತ ಕ್ರೀಡಾ ಪಟು ನೀರಜ್‌ ಚೋಪ್ರಾ ಅವರು ಮಂಗಳವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಜಾವೆಲಿನ್ ಥ್ರೋ ನೀರಜ್‌ ಚೋಪ್ರಾ ಅವರನ್ನು ಭೇಟಿ ಮಾಡಿದ ಬಗ್ಗೆ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ನೀರಜ್‌ ಚೋಪ್ರಾ ಅವರೊಂದಿಗೆ ಪತ್ನಿ ಹಿಮಾನಿ ಮೋರ್‌ ಸಹ ಹಾಜರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಈ ಭೇಟಿಯ ವೇಳೆ ಕ್ರೀಡೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ನೀರಜ್ ಚೋಪ್ರಾ ಅವರೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ. ಈ ಭೇಟಿಯ ಬಗ್ಗೆ ಬರೆದುಕೊಂಡಿರುವ ನರೇಂದ್ರ ಮೋದಿ ಅವರು "ಇಂದು ಬೆಳಿಗ್ಗೆ ನಾನು ನೀರಜ್ ಚೋಪ್ರಾ ಮತ್ತು ಅವರ ಪತ್ನಿ ಹಿಮಾನಿ ಮೋರ್ ಅವರನ್ನು ಭೇಟಿಯಾದೆ. ಈ ಭೇಟಿಯ ವೇಳೆ ನಾವು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದೆವು ಎಂದು ಮೋದಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Neeraj Chopra and Wife Himani Mor Meet PM Narendra Modi Following Historic 90m Javelin Throw

ನೀರಜ್‌ ಚೋಪ್ರಾ ಅವರು ಪ್ರದರ್ಶನ ಈ ವರ್ಷ ಪ್ರಭಾವಶಾಲಿಯಾಗಿತ್ತು. ಇವರು ಈ ವರ್ಷದಲ್ಲಿ ತಮ್ಮ ವೃತ್ತಿ ಬದುಕಿನಲ್ಲಿ ವಿಶೇಷವಾದ ಸಾಧನೆ ಮಾಡಿದ್ದಾರೆ. ದೋಹಾದಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಚೋಪ್ರಾ ಮೊದಲ ಬಾರಿಗೆ ಜಾವೆಲಿನ್ ಎಸೆತದಲ್ಲಿ 90 ಮೀಟರ್ ಮಾರ್ಕ್‌ ದಾಟಿಸಿ ದಾಖಲೆ ಬರೆದಿದ್ದರು. ಇದು ಇವರು ಜೀವನ ಶ್ರೇಷ್ಠ ಸಾಧನೆ ಆಗಿದೆ. ಟೋಕಿಯೊದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪದಕ ಗೆಲ್ಲಲು ಅವರು ವಿಫಲರಾದರು.

ನೀರಜ್‌ ಚೋಪ್ರಾ ಭಾರತದ ಪರ ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಟ್ರ್ಯಾಕ್‌ ಆಂಡ್‌ ಫೀಲ್ಡ್‌ ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದ ಹಿರಿಮೆ ಹೊಂದಿದ್ದಾರೆ.

Story first published: Tuesday, December 23, 2025, 23:45 [IST]
Other articles published on Dec 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+