Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Neeraj Chopra Classic: ಬೆಂಗಳೂರಿನಲ್ಲಿ ನೀರಜ್‌ ಬಂಗಾರದ ಸಾಧನೆ

ಬೆಂಗಳೂರಿನ ಅಭಿಮಾನಿಗಳ ಸಮ್ಮುಖದಲ್ಲಿ ಭಾರತದ ಭರವಸೆಯ ಜಾವೆಲಿನ್ ಥ್ರೋ ಕ್ರೀಡಾಪಟು ನೀರಜ್‌ ಚೋಪ್ರಾ ಅಮೋಘ ಪ್ರದರ್ಶನ ನೀಡಿದ್ದು, ಬಂಗಾರದ ಸಾಧನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಅಬ್ಬರಿಸಿದರು. ಬೆಂಗಳೂರಿನ ಶ್ರೀ ಕಂಠೀರವಾ ಕ್ರೀಡಾಂಗಣದಲ್ಲಿ ನಡೆದ ನೀರಜ್ ಚೋಪ್ರಾ ಕ್ಲಾಸಿಕ್ ಟೂರ್ನಿಯ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದರು.

ಕಂಠೀರವಾ ಕ್ರೀಡಾಂಗಣದಲ್ಲಿ ತುಂಬಿದ್ದ ಅಭಿಮಾನಿಗಳು ನೀರಜ್‌ ಚೋಪ್ರಾ ಅಂಗಳಕ್ಕೆ ಇಳಿಯುತ್ತಿದ್ದಂತೆ ಕೂಗಲು ಆರಂಭಿಸಿದರು. ಅಭಿಮಾನಿಗಳ ಘೋಷದ ನಡುವೆ ಜಾವೆಲಿನ್ ಹಿಡಿದು ತಮ್ಮ ನೈಜ್ಯ ಶೈಲಿಯಲ್ಲಿ ಥ್ರೋ ಮಾಡಿದ ನೀರಜ್‌ ನೆರದ ಫ್ಯಾನ್ಸ್‌ಗೆ ಹಬ್ಬದ ಊಟವನ್ನು ಉಣಬಡಿಸಿದರು. ಇವರು 86.18 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬಂಗಾರದ ಸಾಧನೆಯನ್ನು ಮಾಡಿದರು.

Neeraj Chopra Claims Victory at Home with 86 18m Throw in Bengaluru

ಅಭಿಮಾನಿಗಳು ನೀರಜ್‌ರನ್ನು ಜೋರಾಗಿ ಹುರಿದುಂಬಿಸಿದರು. ನಿಜಕ್ಕೂ ಈ ದೃಷ್ಯ ನೀಡಲು ರೋಮಾಂಚಕಾರಿಯಾಗಿತ್ತು. ಭಾರತದ ಭರವಸೆಯ ಜಾವೆಲಿನ್ ಥ್ರೋ ತಮ್ಮ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಇವರು ಈ ಪ್ರಯತ್ನ ಫಾಲ್ ಆಯಿತು. ಈ ಬಳಿಕ ತಮ್ಮ ಶಕ್ತಿ ಬಳಸಿಕೊಂಡು ಎರಡನೇ ಥ್ರೋಗೆ ಸಿದ್ಧರಾದರು. ಈ ವೇಳೆ ನೀರಜ್ ಚೋಪ್ರಾ 82.99 ಮೀಟರ್ ದೂರ ಜಾವೆಲಿನ್ ಎಸೆದರು. ಇದೇ ಪ್ರದರ್ಶನವನ್ನು ಮುಂದುವರೆಸಿದ ನೀರಜ್‌ ತಮ್ಮ ಆರು ಪ್ರಯತ್ನಗಳು ಮುಗಿಯುವ ವೇಳೆ ನೀರಜ್‌ 86.18 ಮೀಟರ್ ಜಾವೆಲಿನ್ ಎಸೆದು ಬಂಗಾರಕ್ಕೆ ಕೊರಳೊಡ್ಡಿದರು.

ಯೆಗೊಗೆ ಬೆಳ್ಳಿ

ಕೀನ್ಯಾದ ಜೂಲಿಯಸ್ ಯೆಗೊ 84.51 ಮೀಟರ್‌ ದೂರ ಜಾವೆಲಿನ್‌ ಥ್ರೋ ಎಸೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇನ್ನು ಶ್ರೀಲಂಕಾದ ರುಮೇಶ್ ಪತಿರಾಜ್ 84.34 ಮೀಟರ್‌ ಜಾವೆಲಿನ್‌ ಥ್ರೋ ಎಸೆದು ಕಂಚಿನ ಪದಕ ಪಡೆದು ಬೀಗಿದರು. ಇದೇ ಸ್ಪರ್ಧೆಯಲ್ಲಿ ಜೆಕ್ ಗಣರಾಜ್ಯದ ಶ್ರೇಷ್ಠ ಜಾವೆಲಿನ್ ಎಸೆತಗಾರ ಜಾನ್ ಜೆಲೆಜ್ನಿ ಸಹ ಭಾಗವಹಿಸಿದ್ದರು. ಇವರು 98.48 ಮೀಟರ್‌ ಗಳ ವಿಶ್ವದಾಖಲೆಯನ್ನು ಬರೆದಿದ್ದಾರೆ. ಇವರಿಗೆ ಬೆಂಗಳೂರಿನಲ್ಲಿ ವಿಶೇಷವಾಗಿ ಗೌರವಿಸಲಾಯಿತು. ಆರಂಭದಲ್ಲಿ ಈ ಕ್ಲಾಸಿಕ್‌ ಟೂರ್ನಿಯನ್ನು ಹರಿಯಾಣದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಬೆಳಕಿನ ಕಾರಣದಿಂದ ಈ ಟೂರ್ನಿ ಬೆಂಗಳೂರಿಗೆ ಶಿಫ್ಟ್ ಮಾಡಲಾಯಿತು.

NC ಕ್ಲಾಸಿಕ್ ಅನ್ನು ಮೊದಲು ಹರಿಯಾಣದ ಪಂಚಕುಲದಲ್ಲಿ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಬೆಳಕಿನ ವ್ಯವಸ್ಥೆಗಳ ಕೊರತೆಯಿಂದಾಗಿ, ಅದನ್ನು ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರನ್ನು ಹೊರತು ಪಡಿಸಿ ಸಚಿನ್ ಯಾದವ್, ಸಾಹಿಲ್ ಸಿಲ್ವಾಲ್, ರೋಹಿತ್ ಯಾದವ್ ಮತ್ತು ಯಶ್ವೀರ್ ಸಿಂಗ್ ಭಾಗವಹಿಸಿದ್ದರು.

Story first published: Saturday, July 5, 2025, 23:11 [IST]
Other articles published on Jul 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+