ಜಸ್ಪ್ರೀತ್ ಬುಮ್ರಾ ಬೌಲಿಂಗ್ ವೇಗ ಹೆಚ್ಚಿಸಲು ನೀರಜ್ ಚೋಪ್ರಾ ನೀಡಿದ ಸಲಹೆ ಏನು?
ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಒಲಿಂಪಿಕ್ ಚಿನ್ನದ ಪದಕ ಗೆದ್ದ ಅಥ್ಲೀಟ್ ನೀರಜ್ ಚೋಪ್ರಾ ಅವರು ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರಿಗೆ ಸಲಹೆ ನೀಡಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ನೀರಜ್ ಚೋಪ್ರಾ, 'ನನಗೆ ಟೀಮ್ ಇಂಡಿಯಾದ ಜಸ್ಪ್ರೀತ್ ಬುಮ್ರಾ ಇಷ್ಟ. ಅವರ ಬೌಲಿಂಗ್ ಕ್ರಮವು ಇತರರಿಗಿಂತ ಭಿನ್ನವಾಗಿದೆ. ಅವರ ಚೆಂಡುಗಳಿಗೆ ಹೆಚ್ಚಿನ ವೇಗವನ್ನು ನೀಡಲು ಅವರು ರನ್-ಅಪ್ ಅನ್ನು ಸ್ವಲ್ಪ ಹೆಚ್ಚು ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಜಾವೆಲಿನ್ ಎಸೆತಗಾರರಾಗಿ, ಒಬ್ಬ ಬೌಲರ್ ತನ್ನ ರನ್-ಅಪ್ ಅನ್ನು ಹೆಚ್ಚಿಸುವುದು ಹೇಗೆ? ಒಬ್ಬ ಬೌಲರ್ ಹೇಗೆ ವೇಗವಾಗಿ ಬೌಲ್ ಮಾಡಬಹುದು ಎಂಬುದನ್ನು ನಾವು ಯಾವಾಗಲೂ ಚರ್ಚಿಸುತ್ತೇವೆ. ಬುಮ್ರಾ ಅವರ ಚೆಂಡನ್ನು ಎಸೆಯುವ ಶೈಲಿ ನನಗೆ ತುಂಬಾ ಇಷ್ಟ ಎಂದಿದ್ದಾರೆ.

ಮೈದಾನದಲ್ಲಿ ಪಂದ್ಯ ವೀಕ್ಷಿಸಿದ್ದ ನೀರಜ್
ಅಹಮದಾಬಾದ್ ನಲ್ಲಿ ನಡೆದ ಏಕದಿನ ವಿಶ್ವಕಪ್‌ನ್ನು ಗೋಲ್ಡ್ ಬಾಯ್ ನೀರಜ್ ಚೋಪ್ರಾ ಮೈದಾನದಲ್ಲಿ ವೀಕ್ಷಿಸಿದ್ದರು. ಫೈನಲ್ ಪಂದ್ಯ ವೀಕ್ಷಿಸಿದ ಕುರಿತಾಗಿ ಮಾತನಾಡಿ ಅವರು, , 'ನಾನು ಕ್ರಿಕೆಟ್ ಪಂದ್ಯವನ್ನು ಪೂರ್ಣವಾಗಿ ವೀಕ್ಷಿಸಿದ್ದು ಇದೇ ಮೊದಲು. ಅಂದಹಾಗೆ, ನಾನು ಫ್ಲೈಟ್‌ನಲ್ಲಿದ್ದಾಗ ಟೀಂ ಇಂಡಿಯಾದ ಮೂರು ವಿಕೆಟ್‌ಗಳು ಬಿದ್ದಿದ್ದವು. ನಾನು ಮೈದಾನ ತಲುಪಿದಾಗ ವಿರಾಟ್ ಭಾಯ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದರು ಎಂದು ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ.
'ಕ್ರಿಕೆಟ್‌ನಲ್ಲಿ ನನಗೆ ಅರ್ಥವಾಗದ ಕೆಲವು ತಾಂತ್ರಿಕ ವಿಷಯಗಳಿವೆ. ಹಗಲಿನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ. ಆದರೆ ರಾತ್ರಿಯಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ ಎನಿಸಿತು. ಆದರೆ ನಮ್ಮ ಆಟಗಾರರು ಶ್ರಮಪಟ್ಟರು. ಕೆಲವೊಮ್ಮೆ ನಮಗೆ ಒಳ್ಳೆಯ ದಿನ ಇರುವುದಿಲ್ಲ. ಆದರೆ ನಿಜ ಹೇಳಬೇಕೆಂದರೆ, ಇಡೀ ಪಂದ್ಯಾವಳಿ ನಮಗೆಲ್ಲ ತುಂಬಾ ಖುಷಿ ನೀಡಿದೆ ಎಂದು ಒಲಿಂಪಿಕ್ಸ್ ಬಂಗಾರದ ಪದಕ ವಿಜೇತ ನೀರಜ್ ಚೋಪ್ರಾ ಹೇಳಿದ್ದಾರೆ.

ಆಸ್ಟ್ರೇಲಿಯ ತಂಡವನ್ನು ಶ್ಲಾಘಿಸಿದ ನೀರಜ್, 'ಆಸ್ಟ್ರೇಲಿಯಾ ತಂಡವು ಪಂದ್ಯದ ಆರಂಭದಿಂದಲೂ ಮಾನಸಿಕವಾಗಿ ಬಲಿಷ್ಠವಾಗಿರುವಂತೆ ಕಂಡು ಬಂದಿತು. ಅವರು ಬೌಲಿಂಗ್ ಮಾಡುವಾಗ, ಈ ಮನಸ್ಥಿತಿಯನ್ನು ಕಂಡುಕೊಂಡೆ. ಕೊನೆಯಲ್ಲಿ ಅವರು ಪಂದ್ಯದ ಮೇಲಿನ ಹಿಡಿತವನ್ನು ಸಂಪೂರ್ಣವಾಗಿ ಬಿಗಿಗೊಳಿಸಿದರು. ಅವರು ತಮ್ಮ ಆಟದ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ನೀರಜ್ ಚೋಪ್ರಾ ಭಾರತದ ಪ್ರತಿಭಾನ್ವಿತ ಅಥ್ಲೀಟ್.. ಇವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆಯನ್ನು ಮಾಡಿರುವ ಕ್ರೀಡಾಪಟು. ಅಲ್ಲದೆ ಜಾವೆಲಿನ್ ಎಸೆತದಲ್ಲಿ ಬಂಗಾರ ಪಡೆದ ಮೊದಲ ಅಥ್ಲೀಟ್.. ಇಷ್ಟೇ ಅಲ್ಲದೆ ಇವರು ಹಲವು ಟೂರ್ನಿಗಳಲ್ಲಿ ಭಾರತದ ಪರ ಅಮೋಘ ಪ್ರದರ್ಶನವನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಸತತ 2ನೇ ಬಾರಿಗೆ ಡೈಮಂಡ್ ಲೀಗ್ ಗೆದ್ದ ಸಾಧನೆಯನ್ನು ಸಹ ನೀರಜ್ ಚೋಪ್ರಾ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications