Neeraj Chopra: ನೀರಜ್ ಚೋಪ್ರಾ ಅಬ್ಬರಕ್ಕೆ ಒಲಿದ ಬಂಗಾರ
ಭಾರತದ ಖ್ಯಾತ ಜಾವೇಲಿನ್ ಥ್ರೋ ಕ್ರೀಡಾ ಪಟು ಪ್ರಸಕ್ತ ಋತುವನ್ನು ಬಂಗಾರದ ಪದಕ ಗೆಲ್ಲುವ ಮೂಲಕ ಮಾಡಿದ್ದಾರೆ. ಭಾರತದಲ್ಲಿ ಜಾವೆಲಿನ್ ಥ್ರೋ ಕ್ರೀಡೆಯತ್ತ ಕ್ರೀಡಾಪಟುಗಳನ್ನು ಸೆಳೆಯುವಲ್ಲಿ ಇವರ ಸಾಧನೆ ದೊಡ್ಡದು. ಇವರು ಭಾರತದಲ್ಲಿ ಸ್ಟಾರ್ ಗಿರಿ ಹೊಂದಿರುವ ಕ್ರೀಡಾ ಪಟು. ನೀರಜ್ ದಕ್ಷಿಣ ಆಫ್ರಿಕಾದಲ್ಲಿ ಅಮೋಘ ಪ್ರದರ್ಶನ ನೀಡಿದ್ದು, ಅಬ್ಬರಿಸಿದ್ದಾರೆ. ಪಾಟ್ ಇನ್ವಿಟೇಷನಲ್ ಟ್ರ್ಯಾಕ್ ಟೂರ್ನಮೆಂಟ್‌ನಲ್ಲಿ ತಮ್ಮ ಸ್ಥಿರ ಪ್ರದರ್ಶನ ನೀಡಿರುವ ನೀರಜ್ ಸ್ವರ್ಣದ ನಗೆ ಬೀರಿದ್ದಾರೆ. ಈ ಮೂಲಕ ಮುಂಬರುವ ಡೈಮಂಡ್ ಲೀಗ್‌ಗೆ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದ್ದಾರೆ.
ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಜಾವೆಲಿನ್ ಸರ್ಧೆಯಲ್ಲಿ ನೀರಜ್ ಅಮೋಘ ಪ್ರದರ್ಶನ ನೀಡಿದರು. ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಚಾಲೆಂಜರ್ ಟೂರ್ನಮೆಂಟ್‌ನಲ್ಲಿ ಭಾರತದ ಕ್ರೀಡಾ ಪಟು ಅಮೋಘ ಸಾಧನೆ ಮಾಡಿದ್ದಾರೆ. ಆರು ಜಾವೆಲಿನ್ ಪಟುಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ನೀರಜ್ ಆರ್ಭಟಿಸಿದ್ದಾರೆ. ಇವರು 84.52 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಅಗ್ರ ಸ್ಥಾನ ಪಡೆದಿದ್ಧಾರೆ.

27 ವರ್ಷದ ನೀರಜ್ ಹಾಗೂ ದಕ್ಷಿಣ ಆಫ್ರಿಕಾದ 25 ವರ್ಷದ ಡೌವೆ ಸ್ಮಿತ್‌ರ ನಡುವೆ ಜಿದ್ದಾಜಿದ್ದು ಕಂಡು ಬಂದಿತು. ಈ ಟೂರ್ನಿಯಲ್ಲಿ ಸ್ಮಿತ್ 82.44 ಮೀಟರ್ ದೂರ ಜಾವೆಲಿನ್ ಎಸೆದರು. ಈ ಮೂಲಕ ಇವರು ಬೆಳ್ಳೆ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ತಮ್ಮ ವೃತ್ತಿ ಜೀವನದಲ್ಲಿ 89.94 ಮೀಟರ್ ಜಾವೆಲಿನ್ ಎಸೆದಿರುವ ದಾಖಲೆ ಹೊಂದಿದ್ದಾರೆ. ಈ ಪಂದ್ಯದಲ್ಲಿ ಈ ಇಬ್ಬರು ಕ್ರೀಡಾ ಪಟುಗಳು ಮಾತ್ರ 80ಕ್ಕೂ ಹೆಚ್ಚು ದೂರ ಜಾವೆಲಿನ್ ಎಸೆದಿದ್ದಾರೆ. ಉಳಿದ ಕ್ರೀಡಾ ಪಟುಗಳಿಗೆ ಈ ಮಾರ್ಕ್ ಪಾಸ್ ಮಾಡಲು ಆಗಲೇ ಇಲ್ಲ.
ಆತಿಥೇಯ ದೇಶದ ಮತ್ತೊಬ್ಬ ಸ್ಪರ್ಧಿ ಡಂಕನ್ ರಾಬರ್ಟ್ಸನ್ 71.22 ಮೀಟರ್ ದೂರ ಜಾವೆಲಿನ್ ಎಸೆದು ಮೂರನೇ ಸ್ಥಾನ ಪಡೆದಿದ್ದಾರೆ. ಇವರು ಜೆಕ್ ಗಣರಾಜ್ಯದ ಜಾನ್ ಝೆಲೆಜ್ನಿ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ಝೆಲೆಜ್ನಿ ಮೂರು ಬಾರಿ ಒಲಿಂಪಿಕ್ಸ್ ಚಾಂಪಿಯನ್.
90 ಮೀಟರ್ ಗುರಿ
ನೀರಜ್ ಚೋಪ್ರಾ ತಮ್ಮ ವೃತ್ತಿ ಜೀವನದಲ್ಲಿ ಸದ್ಯ 90 ಮೀಟರ್ ಜಾವೆಲಿನ್ ಎಸೆಯುವ ಗುರಿಯನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅವರು ಸತತ ಪರಿಶ್ರಮ ಪಡುತ್ತಿದ್ದಾರೆ. ಈ ಸಾಧನೆ ಇವರಿಂದ ಯಾವಾಗ ಮೂಡಿ ಬರುತ್ತದೋ ಎಂಬುದನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನೀರಜ್ ಮೇ 16 ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ ಎಲೈಟ್ ಪಂದ್ಯಾವಳಿಗಳಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

ಡಬಲ್ ಪದಕ ವಿಜೇತ
ನೀರಜ್ ಚೋಪ್ರಾ ಭಾರತದ ಪರ ಟ್ರ್ಯಾಕ್ ಆಂಡ್ ಫೀಲ್ಡ್ ಇವೆಂಟ್‌ನಲ್ಲಿ ಮೊದಲ ಬಂಗಾರದ ಸಾಧನೆಯನ್ನು ಮಾಡಿದ ಹಿರಿಮೆ ಹೊಂದಿದ್ದಾರೆ. ಇವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರ ಸಾಧನೆ ಮಾಡಿದ್ದಾರೆ. ಇನ್ನು ಪ್ಯಾರೀಸ್‌ನಲ್ಲಿ ನಡೆದ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಕೆಲವೇ ಕೆಲವೇ ಭಾರತೀಯರಲ್ಲಿ ಇವರಿಗೂ ಸ್ಥಾನ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications