ವಿಶ್ವಕಪ್ ತಂಡದಲ್ಲಿ ಪಂತ್ ಸೇರ್ಪಡೆಗೆ 5 ಕಾರಣಗಳನ್ನು ಕೊಟ್ಟ ಆಶೀಷ್ ನೆಹ್ರಾ

ನವದೆಹಲಿ, ಫೆಬ್ರವರಿ 14: ಪಂದ್ಯ ಗೆಲ್ಲಿಸುವ ಅಪ್ಪಟ ಆಟಗಾರ, ಮಾಜಿ ಕ್ರಿಕೆಟಿಗ ಆಶೀಷ್ ನೆಹ್ರಾ ಅವರು ನಿರಾಯಾಸವಾಗಿ ಸಿಕ್ಸ್ ಬಾರಿಸೋ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಪಂತ್ ಇದ್ದರೆ ಆಗುವ ಲಾಭಗಳನ್ನು ನೆಹ್ರಾ ಹೇಳಿಕೊಂಡಿದ್ದಾರೆ.
ರಿಷಬ್ ಪಂತ್ ಅವರು ಭಾರತದ ವಿಶ್ವಕಪ್ ತಂಡದಲ್ಲಿ ಯಾಕಿರಬೇಕು ಅನ್ನೋದಕ್ಕೆ ನೆಹ್ರಾ ಒಟ್ಟು 5 ಕಾರಣಗಳನ್ನು ಕೊಟ್ಟಿದ್ದಾರೆ. ತಂಡದ ನಿಟ್ಟಿನಲ್ಲಿ ಯೋಚಿಸಿದರೆ ನ್ರೆಹ್ರಾ ಮಾತಿನಲ್ಲಿ ಅರ್ಥವಿದೆ. ಪಂತ್ ನಿಜಕ್ಕೂ ತಂಡದ ಬಲವಾಗಿ ನಿಲ್ಲಬಲ್ಲ ಆಟಗಾರ ಹೌದು.
ಡೆಲ್ಲಿ ತಂಡದವರೇ ಆಗಿರುವುದರಿಂದ ದಿಲ್ಲಿ ಆಟಗಾರ ಪಂತ್ ಅವರು ಬೆಳೆದ ಬಂದ ಬಗೆ ನೆಹ್ರಾಗೆ ಗೊತ್ತಿದೆ. ಡೆಲ್ಲಿ ತಂಡ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಂತ್ ಸಾಧನೆ, ಶಕ್ತಿಯನ್ನು ಮನಗಂಡಿರುವ ನೆಹ್ರಾ ನೀಡಿರುವ 5 ಕಾರಣಗಳೂ ಮೌಲ್ಯಯುತವಾದುದೆ.

1. ಸೂಕ್ತ ಆಟಗಾರ
ಶಿಖರ್ ಧವನ್ ಅವರನ್ನು ಹೊರತುಪಡಿಸಿ ಭಾರತದ ಬ್ಯಾಟಿಂಗ್ ಕ್ರಮಾಂಕವನ್ನು ಗಮನಿಸಿದರೆ ಅಲ್ಲಿ ಬೇರೆ ಯಾರಾದರೂ ಎಡಗೈ ಬ್ಯಾಟ್ಸ್ಮನ್ ಇದ್ದಾರಾ? ತಂಡದಲ್ಲಿ ಎಡ-ಬಲಗೈ ಬ್ಯಾಟ್ಸ್ಮನ್‌ಗಳ ವೈವಿದ್ಯತೆ ಬೇಕು. ಈ ಲೆಕ್ಕದಲ್ಲಿ ಪಂತ್ ಸಂಪೂರ್ಣ ಸೂಕ್ತ ಆಟಗಾರ.

2. ಯಾವುದೇ ಕ್ರಮಾಂಕವನ್ನು ನಿಭಾಯಿಸಬಲ್ಲ
ರಿಷಬ್ ಪಂತ್‌ಗೆ ಯಾವುದೇ ಬ್ಯಾಟಿಂಗ್ ಕ್ರಮಾಂಕ ನೀಡಿದರೂ ಆತ ಅದಕ್ಕೆ ಒಗ್ಗಿಕೊಳ್ಳುತ್ತಾನೆ. 1ರಿಂದ 7 ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲೂ ಪಂತ್ ತಂಡಕ್ಕೆ ಬಲವಾಗಿ ನಿಲ್ಲಬಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಬಳಗ ಪ್ರತಿಭಾವಂತನನ್ನು ಬಳಸಿಕೊಳ್ಳಬೇಕು.

3. ನಿರಾಯಾಸ ಸಿಕ್ಸರ್‌ಗಳು
ಸಿಕ್ಸ್ ಬಾರಿಸುವಿಕೆ ವಿಚಾರಕ್ಕೆ ಬಂದರೆ ರೋಹಿತ್ ಶರ್ಮಾ ಬಿಟ್ಟರೆ ತಂಡದಲ್ಲಿ ನಿರಾಯಾಸವಾಗಿ ಸಿಕ್ಸರ್ ಬಾರಿಸುವ ಎರಡನೇ ಆಟಗಾರನೆಂದರೆ ಅದು ರಿಷಬ್ ಪಂತ್. ವಿಶ್ವಕಪ್‌ನಂತ ಪ್ರಮುಖ ಪಂದ್ಯದಲ್ಲಿ ಇಂಥ ಆಟಗಾರನ ಅವಶ್ಯಕತೆ ತಂಡಕ್ಕೆ ಇರುತ್ತದೆ.

4. ವಾಸ್ತವಗಳನ್ನು ಪರಿಗಣಿಸಬೇಕು
ಪ್ರಮುಖ ಪಂದ್ಯಕ್ಕೆ ತಂಡವನ್ನು ಆರಿಸುವಾಗ ವಾಸ್ತವ ಸಂಗತಿಗಳನ್ನು ಗಮನದಲ್ಲಿಟ್ಟು ಆಯ್ಕೆ ನಡೆಸಬೇಕು. ಇಲ್ಲಿ ಮುಲಾಜುಗಳಿರಬಾರದು. ಆಟಗಾರ ಪ್ರಮುಖ ಪಂದ್ಯಕ್ಕೆ ಅರ್ಹನಾದರೆ ಮಾತ್ರ ಅವಕಾಶ ನೀಡಬೇಕು. ಪಂತ್ ಕೊಡ್ಡ ಕೊಡುಗೆ ಕೊಡಬಲ್ಲ ಎಂದಲ್ಲ. ಆದರೆ ಆತ ಪಂದ್ಯ ಗೆಲ್ಲಿಸಲು ಸಮರ್ಥ.

5. ಏಕಾಂಗಿಯಾಗಿ ಹೋರಾಡಬಲ್ಲ
ನಮ್ಮ ತಂಡದಲ್ಲಿ ಮುಖ್ಯವಾಗಿ ಮೂರು ಮಂದಿ ಪಂದ್ಯ ಗೆಲ್ಲಿಸಬಲ್ಲ ಆಟಗಾರರಿದ್ದಾರೆ. ಅವರೆಂದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ. ನನ್ನ ಪಾಲಿಗೆ ನಾಲ್ಕನೇ ಆಟಗಾರನೆಂದರೆ ಅದು ಪಂತ್ ಎಂದು ನೆಹ್ರಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications