Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಸ್‌ ಗೇಲ್ ಆಡಲಿದ್ದ ಟ್ವೆಂಟಿ 20 ಟೂರ್ನಿಯನ್ನೇ ರದ್ದುಗೊಳಿಸಿದ ನೇಪಾಳ

Nepal cancels EPL T20 tourney featuring Chris Gayle

ಕಠ್ಮಂಡು, ಮಾರ್ಚ್ 6: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರೀಸ್‌ ಗೇಲ್ ಸಹಿತ ಇನ್ನಿತರ ಆಟಗಾರರು ಆಡಲಿದ್ದ ಟ್ವೆಂಟಿ 20 ಲೀಗ್ ಟೂರ್ನಿಯನ್ನೇ ನೇಪಾಳ ಸದ್ಯಕ್ಕೆ ರದ್ದುಗೊಳಿಸಿದೆ. ಮಾರಕ ಸೋಂಕು ಕೊರೊನಾ ವೈರಸ್‌ ಭೀತಿಯಿಂದಾಗಿ ಟೂರ್ನಿಯನ್ನು ಮುಂದೂಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಎವರೆಸ್ಟ್ ಪ್ರೀಮಿಯರ್ ಲೀಗ್ (ಇಪಿಎಲ್) ಮಾರ್ಚ್ 14ರಿಂದ ಆರಂಭಿಸಲು ದಿನ ನಿಗದಿಯಾಗಿತ್ತು. ಆದರೆ ಟೂರ್ನಿಯನ್ನು ಮುಂದೊಮ್ಮೆ ನಡೆಸಲು ಸಾಧ್ಯವಾಗುವ ಯಾವುದಾದರೂ ದಿನಾಂಕಕ್ಕೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಟೂರ್ನಿಯಲ್ಲಿ ಕ್ರಿಸ್‌ ಗೇಲ್, ನೇಪಾಳದ ಸ್ಟಾರ್ ಆಟಗಾರ ಸಂದೀಪ್ ಲಮಿಚಾನೆ ಮತ್ತು ಅಫ್ಘಾನಿಸ್ತಾನ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಮೊಹಮ್ಮದ್ ಶಹಝಾದ್ ಇನ್ನಿತರ ಆಟಗಾರರು ಆಡುವುದರಲ್ಲಿದ್ದರು. ಆದರೆ ಆ ಟೂರ್ನಿ ಈಗ ಅಧಿಕೃತವಾಗಿ ರದ್ದಾಗಿದೆ. ನೇಪಾಳದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ.

ಒಂದೇ ಪ್ರಕರಣ ಪತ್ತೆಯಾಗಿದ್ದರೂ ಸೋಂಕು ಇತರರಿಗೆ ಹಬ್ಬುವುದನ್ನು ತಪ್ಪಿಸಲು ಟಿ20 ಲೀಗ್‌ ಟೂರ್ನಿಯನ್ನು ರದ್ದುಗೊಳಿಸಲು ನೇಪಾಳದ ಆರೋಗ್ಯ ಸಚಿವ ಸೂಚಿಸಿದ್ದರು ಎಂದು ತಿಳಿದುಬಂದಿದೆ. '2020ಎ ಇಪಿಎಲ್ ಅನ್ನು ತಾತ್ಕಾಲಿಕವಾಗಿ ಮುಂದೂಡಬೇಕಾಗಿರುವ ವಿಚಾರವನ್ನು ತಿಳಿಸಲು ನಮಗೆ ಸಹಜವಾಗಿಯೇ ಬೇಸರವಾಗುತ್ತಿದೆ,' ಎಂದು ಟೂರ್ನಿಯ ನಿರ್ದೇಶಕ ಅಮೀರ್ ಅಖ್ತರ್ ಹೇಳಿದ್ದಾರೆ.

Story first published: Friday, March 6, 2020, 15:47 [IST]
Other articles published on Mar 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+