ನೇಪಾಳದ ಕ್ರಿಕೆಟಿಗ ಸಂದೀಪ್ ಲಮಿಚಾನೆ ಅವರ ಸುತ್ತ ಅಪಾಯದ ಹುತ್ತ ಬೆಳೆದು ನಿಂತಿದೆ. ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ನಂತರ, ಸಂದೀಪ್ ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಮೂಲಕ ಸಂದೀಪ್ ಲಮಿಚಾನೆ 8 ವರ್ಷ ಜೈಲಿನಲ್ಲಿ ಇರಬೇಕಾಗುತ್ತದೆ. ನೇಪಾಳ ಕ್ರಿಕೆಟ್ ತಂಡದ ಹೊರತಾಗಿ, ಸಂದೀಪ್ ಲಮಿಚಾನೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದಾರೆ.
ಬುಧವಾರ ನೇಪಾಳಿ ನ್ಯಾಯಾಲಯ ಸಂದೀಪ್ ಲಾಮಿಚಾನೆಗೆ ಶಿಕ್ಷೆ ವಿಧಿಸಿದೆ. ಇತ್ತೀಚೆಗೆ ಈ ಕ್ರಿಕೆಟಿಗನ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿತ್ತು. ANI ಪ್ರಕಾರ, ಶಿಶರ್ ರಾಜ್ ಧಾಕಲ್ ಅವರ ಪೀಠವು ಸಂದೀಪ್ ಲಮಿಚಾನೆ ಅವರನ್ನು ಅಪರಾಧಿ ಎಂದು ತಿಳಿಸಿದ್ದು, ಅವರಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸಂದೀಪ್ ಲಮಿಚಾನೆ ನೇಪಾಳ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಸಂದೀಪ್ ಲಮಿಚಾನೆ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದರು.

ಸಂದೀಪ್ ಲಮಿಚಾನೆ ನೇಪಾಳದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರು. ಇದಲ್ಲದೆ ಐಪಿಎಲ್‌ನಲ್ಲಿ ಆಡಿದ ಮೊದಲ ನೇಪಾಳಿ ಕ್ರಿಕೆಟಿಗ. ಐಪಿಎಲ್ 2018 ರ ಋತುವಿನಲ್ಲಿ ಸಂದೀಪ್ ಲಮಿಚಾನೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
ಅಕ್ಟೋಬರ್ 2022 ರಲ್ಲಿ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರದ ಆರೋಪದ ಮೇಲೆ ಸಂದೀಪ್ ಲಮಿಚಾನೆಯನ್ನು ಬಂಧಿಸಲಾಯಿತು. ಸಂದೀಪ್ ಲಮಿಚಾನೆ ಕಠ್ಮಂಡುವಿನ ಹೋಟೆಲ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಇದಾದ ನಂತರ ಸಂದೀಪ್ ಲಮಿಚಾನೆಯನ್ನು ಬಂಧಿಸಲಾಯಿತು. ಆದರೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನ್ಯಾಯಾಲಯದಿಂದ ಪರಿಹಾರವನ್ನು ಪಡೆದರು.

ಸಂದೀಪ ಲಮಿಚಾನೆ ಬೇಲ್ ಮೇಲೆ ಹೊರಗಡೆ ಇದ್ದರು. ಕಳೆದ ವರ್ಷ ಜನವರಿ 12 ರಂದು, ಪಟಾನ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸಂದೀಪ್ ಲಮಿಚಾನೆಯನ್ನು 2 ಮಿಲಿಯನ್ ರೂಪಾಯಿ ದಂಡದೊಂದಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು. ಆದರೆ ಇದೀಗ ಈ ಕ್ರಿಕೆಟಿಗನಿಗೆ 8 ವರ್ಷ ಜೈಲು ಶಿಕ್ಷೆಯಾಗಿದೆ.