Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್ ಮುಂದೂಡಿಕೆ: ಫುಡ್ ಡೆಲಿವರಿ ಬಾಯ್ ಆಗಿದ್ದಾರೆ ಮೀಕೆರೆನ್

Netherlands Cricketer Paul van Meekeren Delivering Food for his daily needs

ಬೆಂಗಳೂರು: ಎಲ್ಲಾ ಎಣಿಕೆಯಂತೆ ನಡೆದಿದ್ದರೆ, ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮೊದಲು ಘೋಷಿಸಿದ್ದ ಟಿ20 ವಿಶ್ವಕಪ್ ವೇಳಾಪಟ್ಟ ಪ್ರಕಾರ 2020ರ ಅಕ್ಟೋಬರ್‌ನಿಂದ ನವೆಂಬರ್ ವರೆಗೆ ವಿಶ್ವಕಪ್ ಟಿ20 ಟೂರ್ನಿ ನಡೆಯುತ್ತಿತ್ತು. ಆದರೆ ಕೋವಿಡ್ 19 ಇದಕ್ಕೆ ಅವಕಾಶ ನೀಡಲಿಲ್ಲ. ಏಕಾಏಕಿ ವಿಶ್ವವನ್ನೇ ಕಾಡತೊಡಗಿದ ಮಾರಕ ಸೋಂಕಿನಿಂದಾಗಿ ಕ್ರೀಡಾಂಗಣವೇ ಸ್ತಬ್ಧವಾಗಬೇಕಾಯ್ತು. ಉದ್ದೇಶಿ ವಿಶ್ವಕಪ್‌ ಅನ್ನು ಎರಡು ವರ್ಷಗಳಿಗೆ ಮುಂದೂಡಬೇಕಾಯ್ತು.

ಹಿಂದಿನ ವೇಳಾಪಟ್ಟಿಯಂತೆ ಎಲ್ಲವೂ ನಡೆದಿದ್ದರೆ 2020ರ ನವೆಂಬರ್ 15ರಂದು ಆಸ್ಟ್ರೇಲಿಯಾದ ಮೆಲ್ಬರ್ನ್‌ ಕ್ರಿಕೆಟ್ ಸ್ಟೇಡಿಯಂ ಪುರುಷರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಸಾಕ್ಷಿಯಾಗುತ್ತಿತ್ತು. ಆದರೆ ಕೊರೊನಾ ಸೋಂಕು ಅನೇಕ ಕ್ರೀಡಾಪ್ರೇಮಿಗಳ ಕನಸಿಗೆ ಕೊಳ್ಳಿಯಿಟ್ಟಿತು.

ಕೊರೊನಾ ಕಾರಣದಿಂದಾಗಿ ಕ್ರಿಕೆಟಿಗನೊಬ್ಬನ ಬದುಕು ಕೂಡ ಸಂಕಷ್ಟಕ್ಕೀಡಾಗಿದೆ. ಆ ಮನಮುಟ್ಟುವ ಕತೆ ಇಲ್ಲಿದೆ ನೋಡಿ..

ಹೆಚ್ಚುವರಿ 6 ರಾಷ್ಟ್ರಗಳು

ಹೆಚ್ಚುವರಿ 6 ರಾಷ್ಟ್ರಗಳು

ಈ ವರ್ಷ ನಡೆಯಬೇಕಿದ್ದ ಟಿ20 ವಿಶ್ವಕಪ್‌ನಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ ನೆದರ್‌ಲ್ಯಾಂಡ್ಸ್‌, ಪಪುವಾ ನ್ಯೂ ಗಿನಿಯಾ, ಐರ್ಲೆಂಡ್, ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಓಮನ್ ದೇಶ ಕೂಡ ಸ್ಪರ್ಧಿಸುವುದರಲ್ಲಿತ್ತು. ಯಾಕೆಂದರೆ ಟಿ20 ವಿಶ್ವಕಪ್ 2020ಕ್ಕೆ ಈ ದೇಶಗಳು ಅರ್ಹತೆ ಗಿಟ್ಟಿಸಿಕೊಂಡಿದ್ದವು.

ಕನಸು ಮಣ್ಣುಪಾಲು

ಕನಸು ಮಣ್ಣುಪಾಲು

ನೆದರ್‌ಲ್ಯಾಂಡ್ಸ್‌, ಪಪುವಾ ನ್ಯೂ ಗಿನಿಯಾ, ಐರ್ಲೆಂಡ್, ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಓಮನ್‌ನಂತ ದೇಶಗಳು ಆರಂಭಿಕ ಹಂತಗಳಲ್ಲಿ ಶ್ರೀಲಂಕಾ, ಬಾಂಗ್ಲಾದಂತ ದೇಶಗಳ ವಿರುದ್ಧ ಸೂಪರ್ 12 ಹಂತಕ್ಕೆ ಸ್ಪರ್ಧಿಸಲು ಸವಾಲು ಸ್ವೀಕರಿಸುತ್ತಿತ್ತು. ಆದರೆ ಟೂರ್ನಿ ಮುಂದೂಡಿರುವ ಕಾರಣ ಹೊನ್ನ ವೃತ್ತಿ ಬದುಕನ್ನು ಕನಸು ಕಾಣುತ್ತಿದ್ದ ಆಟಗಾರರ ಆಸೆ ಮಣ್ಣಾಗಿದೆ.

ಡೆಲಿವರಿ ಬಾಯ್ ಆದ ಕ್ರಿಕೆಟಿಗ

ಡೆಲಿವರಿ ಬಾಯ್ ಆದ ಕ್ರಿಕೆಟಿಗ

ಟಿ20 ವಿಶ್ವಕಪ್‌ ಮುಂದೂಡಲಾಗಿರುವುದರಿಂದ ಬದುಕು ನಿರ್ವಹಣೆಗಾಗಿ ನೆದರ್ಲ್ಯಾಂಡ್ ವೇಗಿ ಪೌಲ್ ವ್ಯಾನ್ ಮೀಕರೆನ್ ಅವರು ಸೈಕಲ್ ತುಳಿದುಕೊಂಡು ಉಬರ್ ಈಟ್ಸ್‌ನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯಾನ್ ಮೀಕರೆನ್ ಅವರು ನೆದರ್ಲ್ಯಾಂಡ್ಸ್‌ ಪರ 5 ಏಕದಿನ ಪಂದ್ಯಗಳಲ್ಲಿ 4 ವಿಕೆಟ್, 41 ಟಿ20ಐ ಪಂದ್ಯಗಳಲ್ಲಿ 47 ವಿಕೆಟ್, 56 ಟಿ20 ಪಂದ್ಯಗಳಲ್ಲಿ 52 ವಿಕೆಟ್ ಪಡೆದುಕೊಂಡಿದ್ದಾರೆ.

ವ್ಯಾನ್ ಬರೆದ ಸ್ಫೂರ್ತಿಯ ಸಾಲು

ವ್ಯಾನ್ ಬರೆದ ಸ್ಫೂರ್ತಿಯ ಸಾಲು

27ರ ಹರೆಯದ ಪೌಲ್, ತನ್ನ ಬದುಕು ಇಂಥ ಅನಿವಾರ್ಯತೆಗೆ ಸಿಕ್ಕಿದ್ದಕ್ಕೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 'ನಾನಿವತ್ತು ಕ್ರಿಕೆಟ್ ಆಡುತ್ತಿರಬೇಕಾಗಿತ್ತು. ಆದರೆ ಚಳಿಗಾಲವನ್ನು ಕಳೆಯುವುದಕ್ಕಾಗಿ ನಾನಿವತ್ತು ಉಬರ್ ಈಟ್ಸ್‌ನಲ್ಲಿ ಫುಡ್ ಡೆಲಿವರಿ ಮಾಡುತ್ತಿದ್ದೇನೆ. ಸಂಗತಿಗಳು ಹೇಗೆಲ್ಲಾ ಅಚಾನಕ್ ಆಗಿ ಬದಲಾಗುತ್ತವೆಯಲ್ವಾ? ಹಹ್ಹ ಯಾವಾಗಲು ನಗುತ್ತಿರಿ..,' ಎಂದು ಟ್ವೀಟ್‌ನಲ್ಲಿ ವ್ಯಾನ್ ಸ್ಫೂರ್ತಿಯ ಸಾಲು ಬರೆದುಕೊಂಡಿದ್ದಾರೆ.

Story first published: Monday, November 16, 2020, 15:12 [IST]
Other articles published on Nov 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+