ಏಷ್ಯಾಕಪ್ ಗೆಲ್ಲಿಸಿದ ಮೊಹಮ್ಮದ್ ಸಿರಾಜ್‌ನನ್ನು ಆನಂದ್ ಮಹೀಂದ್ರಾ ಹೊಗಳಿದ್ದೇ ತಪ್ಪಾಯಿತಾ?; ನೆಟ್ಟಿಗರು ಹೇಳಿದ್ದೇನು?
ಭಾನುವಾರ, ಸೆಪ್ಟೆಂಬರ್ 17ರಂದು ನಡೆದ 2023ರ ಏಷ್ಯಾ ಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 10 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ 8ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು.
ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾ ತನ್ನ ಎರಡನೇ ಕನಿಷ್ಠ ಮೊತ್ತವಾದ 50 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ತಂಡ 6.1 ಓವರ್‌ಗಳಲ್ಲಿ 10 ವಿಕೆಟ್‌ಗಳ ಗೆಲುವು ದಾಖಲಿಸಿತು.

ಇನ್ನು ಈ ಪಂದ್ಯದಲ್ಲಿ ಬಿರುಗಾಳಿ ಬೌಲಿಂಗ್ ಪ್ರದರ್ಶನ ನೀಡಿದ ವೇಗಿ ಮೊಹಮ್ಮದ್ ಸಿರಾಜ್ ಶ್ರೀಲಂಕಾ ಬ್ಯಾಟಿಂಗ್ ವಿಭಾಗವನ್ನು ಹೊಸಕಿ ಹಾಕಿದರು. 7 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ 6 ವಿಕೆಟ್ ಕಬಳಿಸಿದರು.
ಅದರಲ್ಲೂ ಒಂದೇ ಓವರ್ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ಪಾಳಯಕ್ಕೆ ಶಾಕ್ ಮೇಲೆ ಶಾಕ್ ನೀಡಿದ ಮೊಹಮ್ಮದ್ ಸಿರಾಜ್, ಈ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾರಾದರು.
ಆನಂತರ ತನ್ನ ಹೃದಯ ವೈಶಾಲ್ಯತೆ ತೋರಿದ ಮೊಹಮ್ಮದ್ ಸಿರಾಜ್, ಪಂದ್ಯ ಪುರುಷೋತ್ತಮ ಪ್ರಶಸ್ತಿಯಿಂದ ಬಂದ 4 ಲಕ್ಷ ರೂಪಾಯಿ ಬಹುಮಾನದ ಹಣವನ್ನು ಶ್ರೀಲಂಕಾದ ಮೈದಾನದ ಸಿಬ್ಬಂದಿಗೆ ನೀಡಿದರು. ಅವರ ಈ ಕಾರ್ಯಕ್ಕೆ ಸ್ವತಃ ಶ್ರೀಲಂಕಾ ಸೇರಿದಂತೆ ಇಡೀ ಕ್ರಿಕೆಟ್ ಲೋಕವೇ ಮೆಚ್ಚುಗೆ ಸೂಚಿಸಿತು.

ಇದೇ ವೇಳೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮೊಹಮ್ಮದ್ ಸಿರಾಜ್ ಸಾಧನೆಯನ್ನು ಶ್ಲಾಘಿಸಿದ ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ""ನಮ್ಮ ಎದುರಾಳಿಗಳಿಗಾಗಿ ನನ್ನ ಹೃದಯ ಹಿಂದೆಂದೂ ಇಷ್ಟು ಮರುಕ ಪಟ್ಟಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ನಾವು ಅವರ ಮೇಲೆ ಅತಿಮಾನುಷ ಶಕ್ತಿಯನ್ನು ಬಳಸಿದಂತೆ ಭಾಸವಾಗುತ್ತಿದೆ. ಮೊಹಮ್ಮದ್ ಸಿರಾಜ್, ನೀವು ಮಾರ್ವೆಲ್ ಅವೆಂಜರ್,'' ಎಂದು ಬರೆದುಕೊಂಡಿದ್ದಾರೆ.
ಆನಂದ್ ಮಹೀಂದ್ರಾ ಅವರ ಈ ಟ್ವೀಟ್ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಆನಂದ್ ಮಹೀಂದ್ರಾ ಅವರ ಪೋಸ್ಟ್‌ಗೆ ವಿಭಿನ್ನ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಮತ್ತು ವಿಚಿತ್ರವಾದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಅದರಲ್ಲಿ ಒಬ್ಬ ಟ್ವಿಟ್ಟರ್ ಬಳಕೆದಾರ ಹೊಸ ಎಸ್‌ಯುವಿ ಕಾರನ್ನು ಮೊಹಮ್ಮದ್ ಸಿರಾಜ್ಗೆ ಉಡುಗೊರೆಯಾಗಿ ನೀಡುವಂತೆ ಆನಂದ್ ಮಹೀಂದ್ರಾ ಅವರ ಬಳಿ ಮನವಿ ಮಾಡಿದ್ದಾರೆ. ಈ ಪೋಸ್ಟ್‌ಗೆ ಉತ್ತರಿಸಿರುವ ಆನಂದ್ ಮಹೀಂದ್ರಾ, ಇಂತಹ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಥಾರ್ ಎಸ್‌ಯುವಿ ಕಾರು ಗಿಫ್ಟ್
2021ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆ ಪ್ರವಾಸದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಆಟಗಾರರು ಟೆಸ್ಟ್ ಸರಣಿಯಲ್ಲಿ ಕಾಂಗರೂಗಳನ್ನು ಅವರ ನಾಡಿನಲ್ಲೇ ಬಗ್ಗುಬಡಿದು ಐತಿಹಾಸಿಕ ಸರಣಿ ಗೆದ್ದಿದ್ದರು. ಇದು ಆನಂದ್ ಮಹೀಂದ್ರಾ ಅವರ ಹೃದಯ ಗೆದ್ದಿತ್ತು. ಹೀಗಾಗಿ ಮೊಹಮ್ಮದ್ ಸಿರಾಜ್ ಸೇರಿದಂತೆ ಭಾರತ ತಂಡದ ಆರು ಕ್ರಿಕೆಟಿಗರಿಗೆ ಥಾರ್ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಹೊಗಳಿದ್ದೇ ತಪ್ಪಾಯಿತಾ?
ಭಾರತದ ಏಷ್ಯಾ ಕಪ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮೊಹಮ್ಮದ್ ಸಿರಾಜ್ ಅವರನ್ನು ಉದ್ಯಮಿ ಹೊಗಳಿದ್ದೇ ತಪ್ಪಾಯ್ತಾ ಎನ್ನುವಂತಾಗಿದೆ. ಈಗಾಗಲೇ ಗಿಫ್ಟ್ ರೂಪದಲ್ಲಿ ಥಾರ್ ಎಸ್‌ಯುವಿ ಕಾರು ನೀಡಲಾಗಿದ್ದರೂ, ಮತ್ತೆ ಹೊಸ ಎಸ್‌ಯುವಿ ಕಾರನ್ನು ನೀಡುವಂತೆ ಬೇಡಿಕೆ ಮತ್ತು ಒತ್ತಾಯ ಮಾಡುತ್ತಿದ್ದಾರೆ.
ಗಮನಾರ್ಹವಾಗಿ, ಕ್ರೀಡಾ ಅಭಿಮಾನಿಯಾಗಿರುವ ಆನಂದ್ ಮಹೀಂದ್ರಾ ಯಾವುದೇ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿರುವುವರನ್ನು ಗುರುತಿಸಿ ಅವರಿಗೆ ಕಾರು ಅಥವಾ ಇನ್ನಿತರ ಉಡುಗೊರೆ ನೀಡಿದ್ದಾರೆ.
ಪ್ರಗ್ನಾನಂದ್‌ಗೆ ಎಕ್ಸ್‌ಯುವಿ 400 ಕಾರು
ಮಹೀಂದ್ರಾ ಗ್ರೂಪ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳನ್ನು ಉತ್ತೇಜಿಸುತ್ತದೆ. ಇತ್ತೀಚಿಗೆ ಆನಂದ್ ಮಹೀಂದ್ರಾ ಅವರು ಚೆಸ್ ವಿಶ್ವಕಪ್ ಫೈನಲ್ ತಲುಪಿದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ್‌ಗೆ ಎಲೆಕ್ಟ್ರಿಕ್ ಎಸ್‌ಯುವಿ ಮಹೀಂದ್ರಾ ಎಕ್ಸ್‌ಯುವಿ 400 ಕಾರನ್ನು ಉಡುಗೊರೆಯಾಗಿ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications