For Quick Alerts
ALLOW NOTIFICATIONS  
For Daily Alerts
 

ನನ್ನ ವೃತ್ತಿ ಬದುಕಿನಲ್ಲಿ ಯಾವತ್ತೂ ಹೀಗಾಗಿರ್ಲಿಲ್ಲ: ಗ್ಲೆನ್ ಮ್ಯಾಕ್ಸ್‌ವೆಲ್

Never happened to me in the history of my career: Glenn Maxwell opens up on IPL Show

ದುಬೈ: ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆಟ ನೋಡೋದಂದ್ರೆನೇ ಏನೋ ಕುತೂಹಲ, ಖುಷಿ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೆಸ್ಟ್ ಆಲ್‌ ರೌಂಡರ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದವರು ಮ್ಯಾಕ್ಸ್‌ವೆಲ್. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಅಂಥ ಪ್ರದರ್ಶನ ಏನೂ ನೀಡಿಲ್ಲ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನ ವೇಳೆ ಮ್ಯಾಕ್ಸ್‌ವೆಲ್ ಗಮನ ಸೆಳೆದಿದ್ದರು. ಯಾಕೆಂದರೆ ಮ್ಯಾಕ್ಸ್‌ವೆಲ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10.75 ಕೋ.ರೂ.ಗೆ ಖರೀದಿಸಿತ್ತು. ಈ ಐಪಿಎಲ್‌ಗೂ ಮುನ್ನ ಇಂಗ್ಲೆಂಡ್ ವಿರುದ್ಧದ ಟಿ20ಐನಲ್ಲಿ 90 ಎಸೆತಗಳಿಗೆ 108 ರನ್ ಬಾರಿಸಿದ್ದ ಮ್ಯಾಕ್ಸ್‌ವೆಲ್ ಬಗ್ಗೆ ಐಪಿಎಲ್‌ನಲ್ಲಿ ನಿರೀಕ್ಷೆಯೂ ಹೆಚ್ಚಿತ್ತು. ಆದರೆ ಮ್ಯಾಕ್ಸ್‌ವೆಲ್ ವಿಫಲರಾಗಿದ್ದಾರೆ.

ಆಡಿರುವ 7 ಪಂದ್ಯಗಳಲ್ಲಿ ಕೇವಲ 58 ರನ್ ಬಾರಿಸಿರುವ ಮ್ಯಾಕ್ಸ್‌ವೆಲ್ ಈ ಬಾರಿಯ ಟೂರ್ನಿಯಲ್ಲಿ ತನ್ನ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. '2014ರಲ್ಲಿ ನಾನು ಚೆನ್ನಾಗಿ ಆಡಿದ್ದೆ. 2017ರಲ್ಲೂ ನನ್ನ ಪಾಲಿಗೆ ಬೆಸ್ಟ್ ಐಪಿಎಲ್ ಸೀಸನ್ ಅನ್ನಿಸಿತ್ತು. ಈ ಬಾರಿ ಇನ್ನೂ ಒಳ್ಳೆಯ ಪ್ರದರ್ಶನ ನೀಡಬಹುದು ಅಂದುಕೊಂಡಿದ್ದೆ,' ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

'ಈ ಬಾರಿ ಆಡಿರುವ ಏಳು ಪಂದ್ಯಗಳಲ್ಲಿ ನಾನು ನಾಲ್ಕು ಬಾರಿ (ಅಸಲಿಗೆ 3 ಬಾರಿ) ನಾಟ್‌ಔಟ್ ಆಗಿ ಉಳಿದಿದ್ದೆ. ಆದರೆ ಉತ್ತಮ ಪ್ರದರ್ಶನ ನೀಡಲಾಗುತ್ತಿಲ್ಲ. ನನ್ನ ವೃತ್ತಿ ಬದುಕಿನ ಇತಿಹಾಸದಲ್ಲಿ ಇಂಥದ್ದು ಯಾವತ್ತೂ ಆಗಿಲ್ಲ. ಇಲ್ಲಿ ಬ್ಯಾಟಿಂಗ್ ಮಾಡಲು ಯಾಕೆ ಆಗುತ್ತಿಲ್ಲ ಅನ್ನೋದು ಅರ್ಥವಾಗುತ್ತಿಲ್ಲ. ಅದರೆ ಈಚೆಗೆ ಕೊಂಚ ನಾನು ಒಗ್ಗಿಕೊಳ್ಳಲಾರಂಭಿಸಿದ್ದೇನೆ,' ಎಂದು ಮ್ಯಾಕ್ಸ್‌ವೆಲ್ ವಿವರಿಸಿದ್ದಾರೆ.

Story first published: Thursday, October 15, 2020, 10:17 [IST]
Other articles published on Oct 15, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+