Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL New Rules 2021: ಮುಂಬರುವ ಟೂರ್ನಿಯಲ್ಲಿ ಮೂರು ಪ್ರಮುಖ ನಿಯಮಗಳಲ್ಲಿ ಬದಲಾವಣೆ

New rule change for ipl 2021 allows third umpire to review on-field short-run and no-ball calls

ಐಪಿಎಲ್ 14ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಐಪಿಎಲ್‌ನಲ್ಲಿ ಎರಡು ಪ್ರಮುಖ ನಿಯಮಗಳಲ್ಲಿ ಬದಲಾವಣೆಯನ್ನು ಮಾಡಿದೆ. ನೋ ಬಾಲ್ ನಿರ್ಣಯ ಹಾಗೂ ಶಾರ್ಟ್ ರನ್ ವಿಚಾರವಾಗಿ ಹಾಗೂ ಡಿಆರ್‌ಎಸ್‌ಗೆ ಅಂಪೈರ್ ಸಾಫ್ಟ್ ಸಿಗ್ನಲ್ ಪರಿಗಣನೆಯಲ್ಲಿ ಈ ಬದಲಾವಣೆಗಳು ಆಗಿದೆ. ಬಿಸಿಸಿಐ ಬಿಡುಗಡೆಗೊಳಿಸಿದ ಹೊಸ ಮಾರ್ಗಸೂಚಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ.

ಶಾರ್ಟ್ ರನ್‌ ಹಾಗೂ ನೋ ಬಾಲ್ ವಿಚಾರದಲ್ಲಿ ಅಂಗಳದಲ್ಲಿರುವ ಅಂಪೈರ್‌ಗಳು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಈ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಅಂಪಾಯರ್ ನೀಡುವ ತೀರ್ಪನ್ನು ಮೂರನೇ ಅಂಪೈರ್ ಪರಾಮರ್ಶಿಸಲು ಈ ನಿಯಮಗಳು ಅವಕಾಶವನ್ನು ನೀಡಲಿದೆ.

ಶಾರ್ಟ್ ರನ್ ವಿಚಾರವಾಗಿ ಹೊಸ ನಿಯಮದಲ್ಲಿ "ಶಾರ್ಟ್‌ರನ್ ಪ್ರಕರಣದಲ್ಲಿ ಮೂರನೇ ಅಂಪೈರ್ ಪುನರ್‌ಪರಿಶೀಲನೆ ಮಾಡಿ ಫೀಲ್ಡ್ ಅಂಪೈರ್ ನೀಡಿದ ತೀರ್ಪನ್ನು ಬದಲಾವಣೆ ಮಾಡಬಹುದು" ಎಂದು ತಿಳಿಸಿದೆ. ಹೀಗಾಗಿ ಇದು ಅಂಗಳದಲ್ಲಿ ಉಂಟಾಗಬಹುದಾದ ಗೊಂದಲಕ್ಕೆ ತೆರೆ ಎಳೆಯಲಿದೆ.

ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾನ್( ಈಗ ಪಂಜಾಬ್ ಕಿಂಗ್ಸ್) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ ಶಾರ್ಟ್ ರನ್ ತೀರ್ಪು ನೀಡಿದ್ದು ಸಾಕಷ್ಟು ವಿವಾದವಾಗಿತ್ತು. ಆ ಒಂದು ರನ್‌ನ ಕಾರಣದಿಂದಲೇ ಪಂಜಾಬ್ ಪಂದ್ಯದಲ್ಲಿ ಸೋಲು ಕಂಡಿತ್ತು.

ಇನ್ನು ಐಪಿಎಲ್‌ನಲ್ಲಿ ಮಾಡಿರುವ ಮತ್ತೊಂದು ಬದಲಾವಣೆಯೆಂದರೆ ಡಿಆರ್‌ಎಸ್ ತೀರ್ಪಿಗೆ ಅಂಪೈರ್‌ಗಳ ಸಾಫ್ಟ್ ಸಿಗ್ನಲ್ ತೀರ್ಪು ಪರಿಗಣನೆಗೆ ಬರುವುದಿಲ್ಲ. ಇದು ಕೂಡ ಇತ್ತೀಚೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಈ ಬದಲಾವಣೆಗಳು ಐಪಿಎಲ್ ಪಂದ್ಯಗಳಲ್ಲಿ ಕೆಲ ಗೊಂದಲಗಳನ್ನು ಕಡಿಮೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

Story first published: Tuesday, March 30, 2021, 10:45 [IST]
Other articles published on Mar 30, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+