ಕ್ರಿಕೆಟ್‌ನಲ್ಲಿ ಈ ಐದು ಹೊಸ ನಿಯಮಗಳಿಗೆ ಕಾರಣವಾಯಿತು ಮಾರಕ ವೈರಸ್

ಕೊರೊನಾ ವೈರಸ್‌ನ ಭೀಕರತೆಗೆ ಇಡೀ ಜಗತ್ತು ಇನ್ನೂ ಆತಂಕದಲ್ಲೇ ಇದೆ. ಕೆಲ ದೇಶಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದರೂ ಭಾರತ ಸೇರಿದಂತೆ ಇನ್ನೂ ಕೆಲ ದೇಶಗಳು ವೈರಸ್‌ನ ಭೀಕರತೆಗೆ ನಲುಗಿ ಹೋಗುತ್ತಿದೆ. ಈ ಮಧ್ಯೆ ಸ್ತಬ್ಧವಾಗಿದ್ದ ಕ್ರೀಡಾಲೋಕ ಮುಂಜಾಗ್ರತಾ ಕ್ರಮಗಳೊಂದಿಗೆ ಮತ್ತೆ ನಿಧಾನಕ್ಕೆ ಚಾಲನೆ ಪಡೆದುಕೊಳ್ಳುತ್ತಿದೆ.
ಸುದೀರ್ಘ 117 ದಿನಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಡ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದೊಂದಿಗೆ ಚಾಲನೆ ಪಡೆದುಕೊಂಡಿದೆ. ಆದರೆ ಈ ಪಂದ್ಯಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳಲಾಗಿದೆ. ಯಾವುದೇ ಪ್ರೇಕ್ಷಕರಿಲ್ಲದೆ ಜೈವಿಕ ಸುರಕ್ಷಿತ ಕ್ರೀಡಾಂಗಣದಲ್ಲಿ ಪಂದ್ಯ ಏರ್ಪಡಿಸಲಾಗಿದೆ.
ಇನ್ನು ಕೊರೊನಾ ವೈರಸ್‌ನ ಭೀತಿಯ ಹಿನ್ನೆಲೆಯಲ್ಲಿ ಕ್ರಿಕೆಟ್‌ನಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲ ನಿಯಮಗಳನ್ನು ತರಲಾಗಿದೆ. ಐದು ಪ್ರಮುಖ ಬದಲಾವಣೆಗಳು ಕೊರೊನಾ ವೈರಸ್ ಬಳಿಕ ನಡೆಯುತ್ತಿರವ ಕ್ರಿಕೆಟ್‌ನಲ್ಲಿ ನಾವು ನೋಡಬಹುದಾಗಿದೆ. ಆ ಐದು ನಿಯಮಗಳು ಯಾವುದು ಮುಂದೆ ಓದಿ..

ಕೋವಿಡ್-19 ರಿಪ್ಲೇಸ್‌ಮೆಂಟ್
ಕೊರೊನಾ ವೈರಸ್‌ನ ಕಾರಣದಿಂದಾಗಿ ಬದಲಿ ಆಟಗಾರನ ನಿಯಮವನ್ನು ಕ್ರಿಕೆಟ್‌ನಲ್ಲಿ ತರಲಾಗಿದೆ. ಪಂದ್ಯದ ಸದರ್ಭದಲ್ಲಿ ಆಟಗಾರನಿಗೆ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಆ ಆಟಗಾರನ ಬದಲಿಗೆ ಇನ್ನೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶವಿದೆ. ಈ ಬದಲಾವಣೆಗೆ ಮ್ಯಾಚ್ ರೆಫ್ರಿ ಅನುಮತಿ ಅಗತ್ಯವಿದೆ.

ಎಂಜಲು ನಿಷೇಧ
ಬೌಲರ್‌ಗಳು ಚೆಂಡು ಎಸೆಯುವ ಸಂದರ್ಭದಲ್ಲಿ ತಿರುವು ಪಡೆದುಕೊಳ್ಳಲು ಸಹಾಯವಾಗಲಿ ಎಂದು ಚೆಂಡಿಗೆ ಎಂಜಲು ಬಳಸಿ ಉಜ್ಜುವುದು ಸಾಮಾನ್ಯ. ಆದರೆ ಇದಕ್ಕೆ ಈಗ ನಿಷೇಧವನ್ನು ತರಲಾಗಿದೆ. ಎರಡು ಬಾರಿ ಈ ವಿಚಾರವಾಗಿ ತಂಡಕ್ಕೆ ಎಚ್ಚರಿಕೆಯನ್ನು ನೀಡಲು ಅವಕಾಶವಿದೆ. ಅದನ್ನು ಮೀರಿ ಪುನರಾವರ್ತನೆಯಾದಲ್ಲಿ ಬ್ಯಾಟಿಂಗ್ ತಂಡಕ್ಕೆ ಐದು ರನ್ ಪೆನಾಲ್ಟಿ ರೂಪದಲ್ಲಿ ದೊರೆಯಲಿದೆ.

ಸ್ಥಳೀಯ ಅಂಪೈರ್‌ಗಳ ಬಳಕೆ
ವಿದೇಶಿ ಪ್ರಯಾಣಕ್ಕೆ ನಿರ್ಬಂಧಗಳಿರುವ ಇರುವ ಕಾರಣ ವಿದೇಶಿ ಅಂಪೈರ್‌ಗಳನ್ನು ಬಳಸಿಕೊಳ್ಳದಿರಲು ನಿರ್ಧರಿಸಲಾಗಿದೆ. ಹೀಗಾಗಿ ಸ್ಥಳೀಯ ಅಂಪೈರ್‌ಗಳನ್ನು ಮಾತ್ರವೇ ಟೆಸ್ಟ್ ಪಂದ್ಯಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್‌ನಲ್ಲಿರವ ಸ್ಥಳೀಯ ಅಂಪೈರ್‌ಗಳನ್ನು ನೇಮಿಸಿಕೊಳ್ಳಲಾಗುತ್ತದೆ.

ಹೆಚ್ಚುವರಿ ಡಿಆರ್‌ಎಸ್ ರಿವ್ಯೂ
ಈ ಹಿಂದಿನ ನಿಯಮದ ಕಾರಣದಿಂದಾಗಿ ಮತ್ತೊಂದು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. ಸ್ಥಳೀಯ ಅಂಫೈರ್‌ಗಳನ್ನು ಬಳಸಿಕೊಳ್ಲುವ ಕಾರಣದಿಂದಾಗಿ ಅಂಪೈರಿಂಗ್ ಗುಣಮಟ್ಟವನ್ನು ಹೆಚ್ಚಿಸಲು ತಾಂತ್ರಿಕ ನೆರವನ್ನು ಬಳಸಿಕೊಳ್ಳಲು ಐಸಿಸಿ ನಿರ್ಧರಿಸಿದೆ. ಇನ್ನಿಂಗ್ಸ್‌ಗೆ ಎರಡು ತೀರ್ಪು ಪರಿಶೀಲನಾ ನಿಯಮವನ್ನು ಮೂರಕ್ಕೆ ಹೆಚ್ಚಿಸಲಾಗದೆ. ಹೀಗಾಗಿ ಒಂದು ಹೆಚ್ಚುವರಿ ಡಿಆರ್‌ಎಸ್‌ಅನ್ನು ಎರಡು ತಂಡಗಳು ಪಡೆದುಕೊಳ್ಳಲಿದೆ.

ಹೆಚ್ಚುವರಿ ಲೋಗೋ ಬಳಕೆಗೆ ಅವಕಾಶ
ಇನ್ನು ಕೊರೊನಾ ವೈರಸ್‌ನ ಈ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವ ತಂಡಗಳ ಜರ್ಸಿಯಲ್ಲಿ ಹೆಚ್ಚುವರಿ ಲೋಗೋವನ್ನು ಬಳಸಲು ಅವಕಾಶವನ್ನು ನೀಡಲಾಗಿದೆ. ಹೆಚ್ಚಿನ ಪ್ರಾಯೋಜಕರನ್ನು ಬಳಸಿಕೊಳ್ಳಲು ಇಲ್ಲಿ ತಂಡಗಳಿಗೆ ಅವಕಾಶ ಸಿಗಲಿದೆ. ಆರ್ಥಿಕ ದೃಷ್ಟಿಕೋನದಿಂದ ಈ ಬದಲಾವಣೆಗೆ ಐಸಿಸಿ ಅನುಮತಿ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications