Duleep Trophy 2024: ಭಾರತ ಎ ತಂಡಕ್ಕೆ ಮಯಾಂಕ್ ನಾಯಕ; ಎರಡನೇ ಟೆಸ್ಟ್‌ಗೆ ಸಿಗುತ್ತಾ ಚಾನ್ಸ್?
2024ರ ದುಲೀಪ್ ಟ್ರೋಫಿ ಟೂರ್ನಿಗಾಗಿ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಎರಡನೇ ಪಂದ್ಯಕ್ಕೆ ಹೊಸ ತಂಡಗಳನ್ನು ಪ್ರಕಟಿಸಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ತಂಡದಲ್ಲಿ ಆಯ್ಕೆಯಾಗಿದ್ದ ಸರ್ಫರಾಜ್ ಖಾನ್ ಹೊರತುಪಡಿಸಿ, ಎಲ್ಲಾ ಕ್ರಿಕೆಟಿಗರನ್ನು ದುಲೀಪ್ ಟ್ರೋಫಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯಕ್ಕೆ ಆಯ್ಕೆಯಾದ ಎಲ್ಲಾ ಆಟಗಾರರು ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗುವ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಲು ಚೆನ್ನೈಗೆ ತೆರಳಲಿದ್ದಾರೆ. ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಆಯ್ಕೆದಾರರು ಭಾರತ ಎ ತಂಡದ ನಾಯಕ ಶುಭ್‌ಮನ್ ಗಿಲ್, ಕೆಎಲ್ ರಾಹುಲ್, ಧ್ರುವ್ ಜುರೆಲ್, ಕುಲದೀಪ್ ಯಾದವ್ ಮತ್ತು ಆಕಾಶ್ ದೀಪ್ ಬದಲಿಗೆ ಪ್ರಥಮ್ ಸಿಂಗ್ (ರೈಲ್ವೇಸ್), ಅಕ್ಷಯ್ ವಾಡ್ಕರ್ (ವಿದರ್ಭ ಸಿಎ) ಮತ್ತು ಎಸ್‌ಕೆ ರಶೀದ್ (ಆಂಧ್ರ ಸಿಎ) ಅವರಿಗೆ ಅವಕಾಶ ನೀಡಿದ್ದಾರೆ.

ಕನ್ನಡಿಗನಿಗೆ ಒಲಿದ ಅದೃಷ್ಟ
ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ ಅವರು ಕುಲ್‌ದೀಪ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದರೆ, ಆಕಿಬ್ ಖಾನ್ (ಯುಪಿಸಿಎ), ಆಕಾಶ್ ದೀಪ್ ಬದಲಿಗೆ ಆಡಲಿದ್ದಾರೆ. ಇನ್ನೊಂದೆಡೆ ಕನ್ನಡಿಗ ಸ್ಟಾರ್ ಬ್ಯಾಟರ್ ಮಯಾಂಕ್ ಅಗರ್ವಾಲ್ ಅವರನ್ನು ಭಾರತ ಎ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಈಗಾಗಲೇ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದ್ದು, ಇದರಲ್ಲಿ ಮಯಾಂಕ್ ಅಗರ್ವಾಲ್ ಅವರಿಗೆ ಸ್ಥಾನ ಸಿಕ್ಕಿಲ್ಲ.
ಟೀಮ್ ಇಂಡಿಯಾ ಮುಂದಿನ ದಿನಗಳಲ್ಲಿ ಸಾಲು ಸಾಲು ಟೆಸ್ಟ್ ಸರಣಿಗಳನ್ನು ಆಡಲಿದೆ. ಇದರ ಬೆನ್ನಲ್ಲೇ ಮಯಾಂಕ್ ಅವರನ್ನು ದುಲೀಪ್ ಟ್ರೋಫಿಯ ಭಾರತ ಎ ತಂಡದ ನಾಯಕನ್ನಾಗಿ ಮಾಡಲಾಗಿದೆ. ಒಂದು ವೇಳೆ ಮಯಾಂಕ್ ದುಲೀಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಬಿಸಿಸಿಐ ಆಯ್ಕೆ ಸಮಿತಿ ಗಮನ ಸೆಳೆದರೆ, ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ಗೆ ಆಯ್ಕೆಯಾಗುವ ಸಾಧ್ಯತೆಯಿದೆ.
ಯಶಸ್ವಿ ಜೈಸ್ವಾಲ್ ಮತ್ತು ರಿಷಬ್ ಪಂತ್ ಅವರ ಸ್ಥಾನಕ್ಕೆ ಸುಯಶ್ ಪ್ರಭುದೇಸಾಯಿ ಮತ್ತು ರಿಂಕು ಸಿಂಗ್ ಭಾರತ ಬಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆರ್‌ಸಿಬಿ ಯುವ ವೇಗದ ಬೌಲರ್ ಯಶ್ ದಯಾಳ್ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಸರ್ಫರಾಜ್ ಖಾನ್ ಟೀಮ್ ಇಂಡಿಯಾ ಸೇರುವ ಮೊದಲು ಎರಡನೇ ದುಲೀಪ್ ಟ್ರೋಫಿ ಪಂದ್ಯವನ್ನು ಆಡಲಿದ್ದಾರೆ. ಭಾರತ ಬಿ ತಂಡದಲ್ಲಿ ಹಿಮಾಂಶು ಮಂತ್ರಿ ಸ್ಥಾನ ಪಡೆದಿದ್ದಾರೆ.
ಭಾರತ ಡಿ ತಂಡದಿಂದ ಅಕ್ಸರ್ ಪಟೇಲ್ ಬಿಡುಗಡೆಯಾಗಿದ್ದಾರೆ. ಅವರ ಸ್ಥಾನಕ್ಕೆ ನಿಶಾಂತ್ ಸಿಂಧು ಅವರನ್ನು ಸೇರಿಸಿಕೊಳ್ಳಲಾಗಿದೆ. ಗಾಯದ ಸಮಸ್ಯೆಯಿಂದ ತುಷಾರ್ ದೇಶಪಾಂಡೆ ಎರಡನೇ ಸುತ್ತಿನಿಂದ ಹೊರಗುಳಿದಿದ್ದು, ಅವರ ಬದಲಿಗೆ ಭಾರತ ಎ ತಂಡದಿಂದ ಮತ್ತೊರ್ವ ಕನ್ನಡಿಗ ವೇಗದ ಬೌಲರ್ ವಿದ್ವತ್ ಕಾವೇರಪ್ಪ ಕಣಕ್ಕಿಳಿಯಲಿದ್ದಾರೆ.
ಭಾರತ ಎ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ರಿಯಾನ್ ಪರಾಗ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ಕುಮಾರ್ ಕುಶಾಗ್ರಾ, ಶಾಶ್ವತ್ ರಾವತ್, ಪ್ರಥಮ್ ಸಿಂಗ್, ಅಕ್ಷಯ್ ವಾಡ್ಕರ್, ಎಸ್‌ಕೆ ರಶೀದ್, ಶಮ್ಸ್ ಮುಲಾನಿ, ಆಕಿಬ್ ಗಣಿ.
ಭಾರತ ಬಿ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಸರ್ಫರಾಜ್ ಖಾನ್, ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮುಖೇಶ್ ಕುಮಾರ್, ರಾಹುಲ್ ಚಾಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ತಿ, ಎನ್ ಜಗದೀಸನ್ (ವಿಕೆಟ್ ಕೀಪರ್), ಸುಯ್ಯಶ್ ಪ್ರಭುದೇಸಾಯಿ, ರಿಂಕು ಸಿಂಗ್ , ಹಿಮಾಂಶು ಮಂತ್ರಿ (ವಿಕೆಟ್ ಕೀಪರ್).
ಭಾರತ ಡಿ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಥರ್ವ ತಾಯ್ಡೆ, ಯಶ್ ದುಬೆ, ದೇವದತ್ತ್ ಪಡಿಕ್ಕಲ್, ರಿಕಿ ಭುಯಿ, ಸರನ್ಶ್ ಜೈನ್, ಅರ್ಷ್‌ದೀಪ್ ಸಿಂಗ್, ಆದಿತ್ಯ ಠಾಕ್ರೆ, ಹರ್ಷಿತ್ ರಾಣಾ, ಆಕಾಶ್ ಸೇನ್‌ಗುಪ್ತ, ಕೆಎಸ್ ಭರತ್ (ವಿಕೆಟ್ ಕೀಪರ್), ಸೌರಭ್ ಕುಮಾರ್, (ಸಂಜುಕ್ ಸಮಪರ್ಸನ್ ), ನಿಶಾಂತ್ ಸಿಂಧು, ವಿದ್ವತ್ ಕಾವೇರಪ್ಪ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications