ಕಪಿಲ್ ರೆಕಾರ್ಡ್ ಮುರಿದ ಕ್ಯಾಪ್ಟನ್ ಎಂಎಸ್ ಧೋನಿ
ಹ್ಯಾಮಿಲ್ಟನ್, ಮಾ.10: ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸುಲಭ ಜಯ ದಾಖಲಿಸುತ್ತಿದ್ದಂತೆ ಎಂಎಸ್ ಧೋನಿ ಹೊಸ ದಾಖಲೆ ಬರೆದರು. ವಿಶ್ವಕಪ್ ನಲ್ಲಿ ಅಂದಿನ ನಾಯಕ ಕಪಿಲ್ ದೇವ್ ಅವರು ದಾಖಲಿಸಿದ್ದ ರೆಕಾರ್ಡ್ ಮುರಿದರು. ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಾಯಕನಾಗಿ ಅತಿ ಹೆಚ್ಚು ಪಂದ್ಯ ಗೆಲ್ಲಿಸಿದ ದಾಖಲೆ ಧೋನಿ ಹೆಸರಿಗೆ ಸೇರಿದೆ.
ಮಂಗಳವಾರ ನಡೆದ ಲೀಗ್ ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ ನಲ್ಲಿ ಸತತ ಐದನೇ ಗೆಲುವು ಸಾಧಿಸಿದೆ. ಈ ಮೂಲಕ ವೆಸ್ಟ್ ಇಂಡೀಸ್ ನ ದಶಕಗಳ ಹಳೆ ದಾಖಲೆ ಸಮಗಟ್ಟಿದೆ. [ಐರ್ಲೆಂಡ್ ವಿರುದ್ಧ ಭಾರತಕ್ಕ್ಕೆ ದಾಖಲೆ ಜಯ]
ಒಟ್ಟಾರೆ ವಿಶ್ವಕಪ್ ನಲ್ಲಿ 9 ಸತತ ಗೆಲುವು ದಾಖಲಿಸಿದ ವೆಸ್ಟ್ ಇಂಡೀಸ್ ದಾಖಲೆ (1975 ರಿಂದ 1979) ಯನ್ನು ಟೀಂ ಇಂಡಿಯಾ ಸರಿಗಟ್ಟಿದೆ. ಈ ಮುಂಚೆ 2003ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ಸತತ 8 ಜಯ ದಾಖಲಿಸಿತ್ತು.

ಧೋನಿ ದಾಖಲೆ: ಐರ್ಲೆಂಡ್ ಪಂದ್ಯಕ್ಕೂ ಮುನ್ನ ಕಪಿಲ್ ಹಾಗೂ ಧೋನಿ ತಲಾ 11 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರು. ಈಗ ಧೋನಿ 12 ಪಂದ್ಯ ಗೆದ್ದು ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ವಿಶ್ವಕಪ್ ನಲ್ಲೂ ಅತ್ಯಂತ ಯಶಸ್ವಿ ನಾಯಕ ಎಂಬ ಪಟ್ಟ ಧೋನಿಗೆ ಲಭಿಸಿದೆ. ಧೋನಿ ಒಟ್ಟಾರೆ 174 ಪಂದ್ಯದಲ್ಲಿ 97ಗೆಲುವು 62 ಸೋಲು ಕಂಡಿದ್ದಾರೆ.
ವಿಶ್ವಕಪ್ 2015 ಟೂರ್ನಿಯಲ್ಲಿ 5 ಜಯ ದಾಖಲಿಸಿದ್ದು, (ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್, ವೆಸ್ಟ್ ಇಂಡೀಸ್, ಐರ್ಲೆಂಡ್) ಮಾ.14ರಂದು ಜಿಂಬಾಬ್ವೆ ವಿರುದ್ಧ ಹಾಗೂ ಮಾ.19ರಂದು ಮೆಲ್ಬೋರ್ನ್ ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯವನ್ನಾಡಲಿದೆ.
ಮಾ.10, 2015ರಂತೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಾಯಕನ ದಾಖಲೆ
* 12 (14 ಪಂದ್ಯ, 1 ಸೋಲು, 1 ಟೈ)- ಎಂಎಸ್ ಧೋನಿ(2011,2015)
* 11 (15 ಪಂದ್ಯ, 4 ಸೋಲು)- ಕಪಿಲ್ ದೇವ್ (1983,1987)
* 10 (23 ಪಂದ್ಯ, 12 ಸೋಲು, 1 ಫಲಿತಾಂಶವಿಲ್ಲ)- ಮಹಮ್ಮದ್ ಅಜರುದ್ದೀನ್ (1992,1996,1999)
* 9 (11 ಪಂದ್ಯ, 2 ಸೋಲು- ಸೌರವ್ ಗಂಗೂಲಿ (2003)
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications